Subscribe to Gizbot

ಸದನದಲ್ಲಿ ಇನ್ನು ಮೊಬೈಲ್ ಬಳಕೆ ಇಲ್ಲ

Written By:

ಕಲಾಪ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಪ್ರಿಯಾಂಕ ಗಾಂಧಿಯವರ ಜೂಮ್ ಮಾಡಿದ ಫೋಟೋವನ್ನು ನೋಡುತ್ತಿದ್ದರು ಎಂಬ ಗೊಂದಲ ಸೃಷ್ಟಿಯಾದ ಬೆನ್ನಲ್ಲೇ ಕರ್ನಾಟಕ ಅಸೆಂಬ್ಲಿಯಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಬಾರದೆಂಬ ನಿಷೇಧವನ್ನು ಇಂದು ಹೇರಲಾಗಿದೆ.

ಸದನದಲ್ಲಿ ಇನ್ನು ಮೊಬೈಲ್ ಬಳಕೆ ಇಲ್ಲ

ಬಿಜೆಪಿ ಶಾಸಕರಾದ ಪ್ರಭು ಚವ್ಹಾಣ್ ಎಸಗಿದ ಕೃತ್ಯವನ್ನು ಟಿವಿ ಕ್ಯಾಮೆರಾ ಸೆರೆಹಿಡಿದಿದ್ದು ಇದಕ್ಕಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪ್ರಭು ಚವ್ಹಾಣ್‌ರನ್ನು ಅಮಾನತುಗೊಳಿಸಿದ್ದಾರೆ. ವಸತಿ ಸಚಿವ ಅಂಬರೀಷ್ ಮತ್ತು ಕಾಂಗ್ರೆಸ್ ಸದಸ್ಯರಾದ ಮಲ್ಲಿಕಾರ್ಜುನ ಸದನದಲ್ಲಿ ಫೋನ್ ಬಳಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲೇ ಸದನದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಬಾರದೆಂಬ ಘೋಷಣೆಯನ್ನು ಅವರು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ ಫೋನ್‌ ಮೇಲೆ ಭರ್ಜರಿ ದರಕಡಿತ

ಸದನದಲ್ಲಿ ಕಲಾಪಗಳು ನಡೆಯುತ್ತಿರುವಾಗ ಸಚಿವರುಗಳ ಈ ನೆಲೆಗಟ್ಟು ಸರಿಯಲ್ಲ ಎಂಬುದು ಸ್ಪೀಕರ್ ಹೇಳಿಕೆಯಾಗಿದೆ. ಅಂಬರೀಷ್ ಮತ್ತು ಮಲ್ಲಿಕಾರ್ಜುನ್‌ರನ್ನು ಸದನದಿಂದ ಎರಡು ದಿವಸ ಅಮಾನತು ಮಾಡಬೇಕೆಂದು ಬಿಜೆಪಿ ಸದಸ್ಯರು ಕಾಂಗ್ರಸ್‌ ಮೇಲೆ ಒತ್ತಡ ತಂದಿದ್ದಾರೆ.

English summary
This article tells about Use of mobile phones in the Karnataka Assembly was banned today, a day after the House was rocked by chaos over a BJP member watching a zoomed in picture of Priyanka Gandhi during proceedings.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot