Just In
Don't Miss
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡ್ರೈವಿಂಗ್ ವೇಳೆ 'ಮೊಬೈಲ್' ಬಳಸಿದ್ದಕ್ಕೆ 6 ತಿಂಗಳು ವಾಹನ ಚಾಲನೆ ನಿಷೇಧ!
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು ಚಾಲಕನಿಗೆ ಮಾತ್ರವಲ್ಲ, ಇತರರಿಗೂ ಅಪಾಯಕಾರಿ ಎಂದು ಹಲವು ದೇಶಗಳಲ್ಲಿ ವಾಹನ ಚಲಾಯಿಸುವ ವೇಳೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಎಂಬುದು ಕೆಟ್ಟಚಟವಾಗಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಸಾಕಷ್ಟು ಕಸರತ್ತು ಮಾಡುತ್ತಿವೆ.
ಇನ್ನು ಮೊಬೈಲ್ ಬಳಸುತ್ತಾ ವಾಹನ ಚಾಲನೆ ಮಾಡುವುದು ತಪ್ಪು ಎಂದು ಗೊತ್ತಿದ್ದರೂ ಅಂತಹ ಸಾಹಸಕಾರ್ಯ ಮಾಡುವ ಭಾರತೀಯರ ಸಂಖ್ಯೆ ಕಡಿಮೆ ಏನಿಲ್ಲ. ಅಬ್ಬಬ್ಬಾ ಎಂದರೆ 200 ರೂಪಾಯಿ ದಂಡ ವಿಧಿಸುವ ಪೊಲೀಸರನ್ನು ಏಮಾರಿಸಿಕೊಂಡು ವಾಹನ ಚಲಾಯಿಸುತ್ತಿರುವಾಗಲೂ ಮೊಬೈಲ್ ಬಳಸುತ್ತಲೇ ಇರುತ್ತಾರೆ. ಆದರೆ, ಇಂಗ್ಲೆಂಡ್ ದೇಶದಲ್ಲಿ ಹೀಗಾಗುವುದಿಲ್ಲ.!

ಹೌದು, ಪೊಲೀಸರಿಗೆ ಹೆದರದೇ ಭಾರತದಲ್ಲಿ ಇಂತಹ ಘಟನೆಗಳು ಜರುಗುವುದು ಸಾಮಾನ್ಯವಾಗಿದ್ದರೆ, ಇಂಗ್ಲೆಂಡ್ ದೇಶದಲ್ಲಿ ವಾಹನ ಚಲಾಯಿಸುತ್ತಿರುವಾಗ ಮೊಬೈಲ್ ಬಳಸಿದ್ದಕ್ಕಾಗಿ ಖ್ಯಾತ ವ್ಯಕ್ತಿಯೋರ್ವರಿಗೆ 6 ತಿಂಗಳ ವಾಹನ ಚಾಲನೆ ನಿಷೇಧ ಮಾಡಿದ್ದಾರೆ. ಇಂಗ್ಲೆಂಡಿನ ಖ್ಯಾತ ಮಾಜಿ ಫಟ್ಬಾಲಿಗ ಡೇವಿಡ್ ಬೇಕ್‌ಹ್ಯಾಮ್ ಅವರು ಇಂತಹ ಶಿಕ್ಷಗೆ ಗುರಿಯಾಗಿದ್ದಾರೆ.
ಇಂಗ್ಲೆಂಡ್‌ನಲ್ಲಿ ವಾಹನ ಚಲಾಯಿಸುವಾ ಮೊಬೈಲ್ ಬಳಕೆ ನಿಷಿದ್ಧವಾಗಿದೆ. ಆದರೂ ಸಹ 44ರ ಹರೆಯದ ಬೇಕ್ ಹ್ಯಾಮ್ ಅವರು ಕಳೆದ ವರ್ಷ ನ. 21ರಂದು ಲಂಡನ್ ರಸ್ತೆಯಲ್ಲಿ ಕಾರು ಚಲಾಯಿಸುವ ವೇಳೆ ಮೊಬೈಲ್ ಅನ್ನು ಬಳಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ್ದು, ಬ್ರೋಮ್ಲಿ ಕ್ಯಾಜಿಸ್ಟ್ರೇಟ್ಸ್ ಕೋರ್ಟ್ ಇಂತಹದೊಂದು ತೀರ್ಪು ನೀಡಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ರಿಯಲ್ ಮ್ಯಾಡ್ರಿಡ್‌ನಂತಹ ಜನಪ್ರಿಯ ಫುಟಬಾಲ್ ತಂಡಗಳ ಮಾಜಿ ಆಟಗಾರ ಸಹ ಆಗಿರುವ ಬೇಕ್ ಹ್ಯಾಮ್ ಇಂಥ ಎಡವಟ್ಟು ಮಾಡಿಕೊಂಡದ್ದು ಇದೇ ಮೊದಲಲ್ಲ. 2018ರ ಜನವರಿಯಲ್ಲಿ ಲಂಡನ್ನಿನ 40 ಕಿ.ಮೀ. ಚಾಲನಾ ವಲಯದಲ್ಲಿ 95 ಕಿ.ಮೀ. ವೇಗದಲ್ಲಿ ಕಾರು ಓಡಿಸಿ ಅಲ್ಲಿನ ಸರ್ಕಾರಕ್ಕೆ ಭಾರೀ ದಂಡ ತೆತ್ತಿದ್ದನ್ನು ನೋಡಬಹುದು.
ಓದಿರಿ: ಚೀನಾದ ಈ ಜೈಲಿನಲ್ಲಿ ಮಾತ್ರ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470