ಮೊಬೈಲ್​ ಬಳಸುತ್ತಾ ಶಾಪಿಂಗ್ ಮಾಡಿದರೆ ಎಡವಟ್ಟು ಖಚಿತ!

|

ಮೊಬೈಲ್ ಬಳಕೆ ಮಾಡಿಕೊಂಡು ಶಾಪಿಂಗ್ ಮಾಡುವವರು ತಾವೇನು ಖರೀದಿಸಬೇಕೆಂಬುದನ್ನು ಮರೆತು ಇತರೆ ವಸ್ತುಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಮೊಬೈಲ್ ಫೋನ್ ಬಳಕೆದಾರರು ತಾವು ಏನು ಖರೀದಿ ಮಾಡಬೇಕೆಂದು ಅಂದುಕೊಂಡಿರುತ್ತಾರೋ ಅದಕ್ಕೆ ಬದಲಾಗಿ ಬೇರೆ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆಯಂತೆ.

ಹೌದು, ಅಂಗಡಿಗಳಲ್ಲಿ ಶಾಪಿಂಗ್ ಮಾಡುವಾಗ ಮೊಬೈಲ್ ಕರೆಗಳಲ್ಲಿ ತಲ್ಲೀನವಾಗಿರುವವರು, ಸಂದೇಶಗಳನ್ನು ಓದುವವರು ಅಥವಾ ಸಂಗೀತವನ್ನು ಕೇಳುತ್ತಿರುವರು ಯೋಜಿತವಲ್ಲದ ಖರೀದಿಗಳನ್ನು ಮಾಡುತ್ತಾರೆ ಮತ್ತು ಖರೀದಿಸಲು ಯೋಜಿಸಿರುವ ವಸ್ತುಗಳನ್ನು ಮರೆತುಬಿಡುವ ಸಾಧ್ಯತೆಯಿದೆ ಎಂಬ ರಿಪೋರ್ಟ್ ಅನ್ನು ಇತ್ತೀಚಿನ ಅಧ್ಯಯನ ವರದಿಯೊಂದು ನೀಡಿದೆ.

ಮೊಬೈಲ್​ ಬಳಸುತ್ತಾ ಶಾಪಿಂಗ್ ಮಾಡಿದರೆ ಎಡವಟ್ಟು ಖಚಿತ!

'ಯುಎಸ್​ನ ಫೇರ್ ಫೀಲ್ಡ್ ಯುನಿರ್ವಸಿಟಿಯ ಮೈಕೆಲ್ ಸ್ಕೈಂದ್ರಾ' ಇಂತಹದೊಂದು ಅಧ್ಯಯನ ವರದಿಯನ್ನು ನೀಡಿದ್ದು, ಮೊಬೈಲ್ ಬಳಸಿಕೊಂಡು ಶಾಪಿಂಗ್ ಮಾಡುವವರ ಅವರ ನಡವಳಿಕೆಯಲ್ಲಿ ಬದಲಾಗುತ್ತದೆ ಮತ್ತು ಅದು ಹೆಚ್ಚಿನ ಖರ್ಚಿಗೆ ಕಾರಣವಾಗುತ್ತದೆ ಎಂದು ಹೇಳಿದೆ. 230ಕ್ಕೂ ಅಧಿಕ ಮಂದಿಯ ಮೇಲೆ ಅಧ್ಯಯನ ನಡೆಸಿ ಈ ವರದಿಯನ್ನು ತಯಾರಿಸಿದೆ.

ಫೋನ್ ಗಳನ್ನು ಬಳಸಿ ಶಾಪಿಂಗ್ ಮಾಡುವುದರಿಂದಾಗಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಪರಿಣಾಮಗಳು ಉಂಟಾಗುತ್ತವೆ. ಆದರೆ, ಮೊಬೈಲ್ ಬಳಕಯ ಸಂದರ್ಭ ಅವರು ಶಾಪಿಂಗ್​ನಲ್ಲಿ ತಾವು ಏನು ಖರೀದಿ ಮಾಡಬೇಕೆಂದು ಅಂದುಕೊಂಡಿರುತ್ತಾರೋ ಅದಕ್ಕೆ ಬದಲಾಗಿ ಇತರೆ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನದಲ್ಲಿ ಹೇಳಿದೆ.

ಮೊಬೈಲ್​ ಬಳಸುತ್ತಾ ಶಾಪಿಂಗ್ ಮಾಡಿದರೆ ಎಡವಟ್ಟು ಖಚಿತ!

ಈ ಅಧ್ಯಯನದಲ್ಲಿ ಮೊಬೈಲ್ ಫೋನ್ ಅವಲಂಬನೆಯನ್ನು ಸ್ವಯಂ ವರದಿ ಮೂಲಕ ಮೌಲ್ಯಮಾಪನ ಮಾಡಲಾಗಿದೆ. ಒಟ್ಟಿನಲ್ಲಿ ನೀವು ಯಾರನ್ನು ಬೇಕಿದ್ದರೂ ಶಾಪಿಂಗ್​ಗೆ ಕರೆದುಕೊಂಡು ಹೋಗಿ. ಆದರೆ, ಮೊಬೈಲ್​ ಬಳಸುತ್ತಾ ಖರೀದಿಗೆ ಮುಂದಾದರೆ ಎಡವಟ್ಟು ಸಂಭವಿಸುವುದು ಖಚಿತ ಎನ್ನುತ್ತಿದೆ ಹೊಸ ಅಧ್ಯಯನ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ.!

ಓದಿರಿ: ಅಮೆಜಾನಿನಲ್ಲಿ ಶಿಯೋಮಿಯ ಹಳೆಯ ಫೋನ್‌ಗಳ ಖರೀದಿಗೆ ಇದು ಬೆಸ್ಟ್ ಟೈಮ್!

Best Mobiles in India

English summary
People who use their smartphones for making calls, texting or listening to music while shopping at a store are more likely to make unplanned purchases and forget items they had planned to buy, according to a study. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X