Just In
- 6 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 1 hr ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- 1 hr ago
WhatsApp New Features : ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅಚ್ಚರಿಯ ಫೀಚರ್ಸ್! ಏನೆಲ್ಲಾ ಉಪಯೋಗಗಳು!
- 2 hrs ago
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
Don't Miss
- News
ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ Paytm ಆಪ್ ಬಳಕೆಯಿಂದ ದೂರವಿರಿ!..ಎಚ್ಚರ ತಪ್ಪಿದರೇ ಜೈಲುವಾಸ!
ಪ್ರಸ್ತುತ ಬಹುತೇಕ ಬಳಕೆದಾರರು ಪೇಮೆಂಟ್, ಬಿಲ್ ಪಾವತಿ, ಹಣ ವರ್ಗಾವಣೆ, ರೀಚಾರ್ಜ್ ಸೇರಿದಂತೆ ಇತರೆ ಕೆಲಸಗಳು ಯುಪಿಐ ಆಪ್‌ಗಳ ಮೂಲಕವೇ ಮಾಡಿಬಿಡುತ್ತಾರೆ. ಆ ಪೈಕಿ ಪೇಟಿಎಮ್ (Paytm) ಭಾರತದಲ್ಲಿ ಹೆಚ್ಚಾಗಿ ಬಳಸುವ ಜನಪ್ರಿಯ ಯುಪಿಐ ಆಪ್‌ಗಳ ಪೈಕಿ ಒಂದೆನಿಸಿಕೊಂಡಿದೆ. ಯುಪಿಐ ಆಪ್‌ಗಳ ಮೂಲಕ ಪಾವತಿ ಕೆಲಸಗಳು ತ್ವರಿತವಾಗಿ ನಡೆಯುತ್ತವೆ. ಹಾಗೆಯೇ ಪ್ರತಿ ಪಾವತಿಗೂ ದಾಖಲೆ ಇರುತ್ತದೆ. ಒಂದೆಡೆ ಯುಪಿಐ (UPI) ಆಪ್‌ಗಳು ಜನಪ್ರಿಯ ಆಗುತ್ತಿದ್ದರೇ, ಮತ್ತೊಂದೆಡೆ ಆನ್‌ಲೈನ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ನಕಲಿ ಪೇಟಿಎಮ್ (Paytm) ಆಪ್ ಮುನ್ನೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ಇತ್ತೀಚೆಗೆ ‘ಸ್ಪೂಫ್ ಪೇಟಿಎಂ' (Spoof Paytm) ಹೆಸರಿನ ನಕಲಿ ಪೇಟಿಎಮ್ ಆಪ್ ಹೆಚ್ಚು ಸದ್ದು ಮಾಡುತ್ತಿದೆ. ಈ ಸ್ಪೂಫ್ ಪೇಟಿಎಂ ಆಪ್ ಜನಪ್ರಿಯ ಪೇಟಿಎಮ್‌ನ ಅನುಕರಣೆಯ ಆಪ್ ಆಗಿದೆ. ಆದರೆ ಈ ಆಪ್‌ನ ಬಳಕೆ ಗ್ರಾಹಕರನ್ನು ತೊಂದರೆಗೀಡು ಮಾಡುವ ಸಾಧ್ಯತೆಗಳು ಇವೆ.

ಸ್ಪೂಫ್ ಪೇಟಿಎಂ (Spoof Paytm) ಆಪ್ ಏನಿದರ ಕಥೆ?
ಈ ಆಪ್‌ನ ಹೆಸರೇ ಸೂಚಿಸುವಂತೆ, ಸ್ಪೂಫ್ ಪೇಟಿಎಂ ಆಪ್ ಲೀಡಿಂಗ್‌ನಲ್ಲಿರುವ ಮೂಲ ಪೇಟಿಎಮ್ ಆಪ್‌ನ ನಕಲು ಆಪ್ ಆಗಿದೆ. ಈ ಅಪ್ಲಿಕೇಶನ್ ಕೇವಲ ಹಾಸ್ಯಮಯ ಕಾರಣಗಳಿಗಾಗಿ ಬಳಸಲ್ಪಡುತ್ತದೆ. ಆದಾಗ್ಯೂ, ಜನರು ಯಾರನ್ನಾದರೂ ವಂಚಿಸಲು ಸ್ಪೂಫ್ ಪೇಟಿಎಂ ಅಪ್ಲಿಕೇಶನ್ ಅನ್ನು ಬಳಸಿದಾಗ, ತೊಂದರೆ ಆಗುತ್ತದೆ. ಹೀಗಾಗಿ ಈ ಆಪ್ ಬಳಕೆ ಸೂಕ್ತವಲ್ಲ. ಇನ್ನು ಸ್ಪೂಫ್ ಪೇಟಿಎಂ ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು, ಆದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಆದಾಗ್ಯೂ, ಈ ಅಪ್ಲಿಕೇಶನ್ ಗೂಗಲ್ ಸರ್ಚ್ ಮೂಲಕ ಡೌನ್‌ಲೋಡ್ ಮಾಡಬಹುದು. ಇನ್ನು ಐಓಎಸ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ, ಏಕೆಂದರೆ iOS ಸೈಡ್‌ಲೋಡಿಂಗ್ ಅನ್ನು ಬೆಂಬಲಿಸುವುದಿಲ್ಲ.

ಈ ಆಪ್‌ನಿಂದ ಜೈಲುವಾಸ ಸಾಧ್ಯತೆ:
ಸ್ಪೂಫ್ ಪೇಟಿಎಂ ಆಪ್ ಮೂಲಕ ಯಾರಿಗಾದರೂ ವಂಚಿನೆ ಮಾಡಲು ಪ್ರಯತ್ನಿಸಿದರೆ ಆಗ ಜೈಲಿಗೆ ಹೋಗಬೇಕಾಗಬಹುದು. ಈ ಆಪ್ ಮೂಲಕ ಯಾರಿಗಾದರೂ ಮೋಸ ಮಾಡಿ, ಮೋಸ ಹೋದವರು ಪೊಲೀಸರಿಗೆ ದೂರು ನೀಡಿದರೇ, ವಂಚನೆಯ ಅಪರಾಧ ಮಾಡಿರುವ ಕಾರಣಕ್ಕೆ ಜೈಲು ಸೇರಬೇಕಾಗಬಹುದು. ಹೀಗಾಗಿ ಯುಪಿಐ ಆಪ್‌ಗಳ ಮೂಲಕ ಹಣ ಸ್ವೀಕರಿಸಿದಾಗ, ಹಣ ಜಮಾ ಆಗಿರುವ ಕುರಿತು ಬ್ಯಾಂಕ್‌ನಿಂದ ಮೆಸೆಜ್ ಬಂದಿರುವುದನ್ನು ಖಚಿತಪಡಿಸಿಕೊಳ್ಳಿ.

ಸ್ಪೂಫ್ ಪೇಟಿಎಂ ಆಪ್ ನೋಡಲು ಸಾಮಾನ್ಯ ಪೇಟಿಎಮ್ ಆಪ್ ನಂತೆ ಕಾಣಿಸುತ್ತದೆ. ಅಲ್ಲದೇ ಪಾವತಿ ಸ್ವೀಕೃತಿಯನ್ನು ಮಾಡಬಹುದಾಗಿದ್ದು, ಮೂಲ ಸ್ವೀಕೃತಿಯಂತೆಯೇ ಕಾಣುತ್ತದೆ. ಆದಾಗ್ಯೂ, ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ನಕಲಿ ಎಂಬ ಅಂಶವನ್ನು ಸ್ಪಷ್ಟಪಡಿಸಬಹುದು.

ಈ ನಕಲಿ ಆಪ್ ಇನ್‌ಸ್ಟಾಲ್ ಮಾಡಬೇಡಿ
ಸ್ಪೂಫ್ ಪೇಟಿಎಂ ಆಪ್ ಡೌನ್‌ಲೋಡ್ ಮಾಡಬೇಡಿ ಇದು ಸುರಕ್ಷಿತವಲ್ಲ. ಥರ್ಡ್‌ಪಾರ್ಟಿ APK ಆಪ್‌ಗಳು ಅಪಾಯಕಾರಿ ಆಗಿರುವ ಸಾಧ್ಯತೆಗಳಿರುತ್ತವೆ. ಮುಖ್ಯವಾಗಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಲಭ್ಯ ಇರದ ಯಾವುದೇ ಆಪ್ ಇನ್‌ಸ್ಟಾಲ್ ಮಾಡುವುದು ಸೂಕ್ತವಲ್ಲ. ಏಕೆಂದರೇ ಕೆಲವು ಥರ್ಡ್‌ಪಾರ್ಟಿ ಆಪ್‌ಗಳು ದುರುದ್ದೇಶಪೂರಿತವಾಗಿರುತ್ತವೆ. ಫೋನ್ ಹ್ಯಾಕ್ ಅಥವಾ ಹಣ ದೋಚುವ ಉದ್ದೇಶಗಳನ್ನು ಹೊಂದಿರುತ್ತವೆ.

ಪೇಟಿಎಮ್ ಮೂಲಕ ಮೊಬೈಲ್ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:
ಹಂತ 1: ಪೇಟಿಎಮ್ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ, 'ಮೊಬೈಲ್ ಪ್ರಿಪೇಯ್ಡ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 3: ಹೊಸ ಪುಟ ಕಾಣಿಸುತ್ತದೆ, ಇಲ್ಲಿ ನಿಮಗೆ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಎಂಬ ಎರಡು ಆಯ್ಕೆಗಳಿವೆ
ಹಂತ 4: "ಪ್ರಿಪೇಯ್ಡ್ 'ಆಯ್ಕೆಯನ್ನು ಆರಿಸಿ.

ಹಂತ 5: ಅದರ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. (ಅದರ ಪಕ್ಕದಲ್ಲಿರುವ ವಿಳಾಸ ಪುಸ್ತಕ ಐಕಾನ್ ಕ್ಲಿಕ್ ಮಾಡುವ ಮೂಲಕ ನೀವು ಸಂಪರ್ಕ ಪಟ್ಟಿಯಿಂದ ಸಂಖ್ಯೆಯನ್ನು ಆಯ್ಕೆ ಮಾಡಬಹುದು)
ಹಂತ 6: ನೀವು ರೀಚಾರ್ಜ್ ಮಾಡಲು ಬಯಸುವ ಮೊತ್ತವನ್ನು ನೀವು ನೇರವಾಗಿ ನಮೂದಿಸಿ (ನಿಮ್ಮ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಲು ನೀವು 'ಬ್ರೌಸ್ ಪ್ಲ್ಯಾನ್‌ಗಳು' ಕ್ಲಿಕ್ ಮಾಡಬಹುದು)
ಹಂತ 7: ನಂತರ ರೀಚಾರ್ಜ್ ಮಾಡಲು 'Proceed' ಕ್ಲಿಕ್ ಮಾಡಿ.

ಪೋಸ್ಟ್ ಪೇಯ್ಡ್ ಸಿಮ್ ರೀಚಾರ್ಜ್ ಮಾಡಲು ಹೀಗೆ ಮಾಡಿ:
ಹಂತ 1: ಪೇಟಿಎಮ್ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ, 'ಮೊಬೈಲ್ ಪ್ರಿಪೇಯ್ಡ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 3: ಹೊಸ ಪುಟ ಕಾಣಿಸುತ್ತದೆ, ಇಲ್ಲಿ ನಿಮಗೆ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಎಂಬ ಎರಡು ಆಯ್ಕೆಗಳಿವೆ
ಹಂತ 4: "ಪೋಸ್ಟ್‌ಪೇಯ್ಡ್" ಆಯ್ಕೆಯನ್ನು ಆರಿಸಿ.

ಹಂತ 5: ನಿಮ್ಮ 'ಪೋಸ್ಟ್‌ಪೇಯ್ಡ್ ಮೊಬೈಲ್ ಸಂಖ್ಯೆ' ಅನ್ನು ನಮೂದಿಸಿ.
ಹಂತ 6: ಬಾಕಿ ಇರುವ ಬಿಲ್ ಮೊತ್ತವನ್ನು ನಮೂದಿಸಿ (ನಿಮ್ಮ ಪಾವತಿಸಬೇಕಾದ ಮೊತ್ತವನ್ನು ಪಡೆಯಲು ಬಿಲ್ ಮೊತ್ತವನ್ನು ಪಡೆದುಕೊಳ್ಳಲು ಸಹ ನೀವು ಕ್ಲಿಕ್ ಮಾಡಬಹುದು)
ಹಂತ 7: ನಂತರ ರೀಚಾರ್ಜ್ ಮಾಡಲು 'Proceed' ಕ್ಲಿಕ್ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470