ಸಾಮಾಜಿಕ ಜಾಗೃತಿಗಾಗಿ 'ಟಿಕ್‌ಟಾಕ್'‌ ಖಾತೆ ತೆರೆದ ಪೊಲೀಸರು!

|

ಸದ್ಯ ಭಾರೀ ಟ್ರೆಂಡ್‌ನಲ್ಲಿರುವ 15 ಸೆಕೆಂಡ್‌ ವಿಡಿಯೊ ಮೇಕಿಂಗ್ ಆಪ್‌ 'ಟಿಕ್‌ಟಾಕ್‌' ಮೋಡಿಗೆ ಪ್ರಸ್ತುತ ಯಾವುದೇ ವಯಸ್ಸು ಮತ್ತು ಲಿಂಗ ಭೇದವಿಲ್ಲದೇ ಬಹುತೇಕರು ಅಡಿಕ್ಟ್‌ ಆಗಿದ್ದಾರೆ. ಅನೇಕರ ಟ್ಯಾಲೆಂಟ್‌ಗೆ ವೇದಿಕೆ ಆಗಿರುವ ಈ ಆಪ್‌ನಲ್ಲಿ ಲಭ್ಯವಾಗುವ ವಿಡಿಯೊಗಳನ್ನು ವೀಕ್ಷಿಸುವುದು ಮತ್ತು ಸ್ವಂತ ಹೊಸ ವಿಡಿಯೊಗಳನ್ನು ಮಾಡುವುದು ಬಳಕೆದಾರರಿಗೆ ಖುಷಿ ನೀಡುವ ಸಂಗತಿಯಾಗಿದೆ. ಆದ್ರೆ ಈಗ ಪೊಲೀಸರು 'ಟಿಕ್‌ಟಾಕ್' ವಿಡಿಯೊ ಮಾಡಲು ಶುರುಮಾಡಿರುವ ಸುದ್ದಿ ನಿಮಗೆ ಅಚ್ಚರಿ ಅನಿಸಬಹುದು.

 ಸಾಮಾಜಿಕ ಜಾಗೃತಿಗಾಗಿ 'ಟಿಕ್‌ಟಾಕ್'‌ ಖಾತೆ ತೆರೆದ ಪೊಲೀಸರು!

ಹೌದು, ಉತ್ತರ ಪ್ರದೇಶದ ಪೊಲೀಸರು ಇದೀಗ ಟಿಕ್‌ಟಾಕ್‌ ಖಾತೆ ಆರಂಭಿಸಿದ್ದು, ಆ ಮೂಲಕ ಜನರಿಗೆ ಸುರಕ್ಷತೆ ಮತ್ತು ಸಾಮಾಜಿಕ ಕಳಕಳಿ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಮಹಿಳಾ ಸುರಕ್ಷತೆ, ಸೈಬರ್ ಸೆಕ್ಯುರಿಟಿ, ರಸ್ತೆ ಸುರಕ್ಷತೆ ಸೇರಿದಂತೆ ಹಲವು ವಿಷಯಗಳ ಕುರಿತು ಟಿಕ್‌ಟಾಕ್‌ನಲ್ಲಿ ವಿಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಯುವಸಮೂಹಕ್ಕೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.

 ಸಾಮಾಜಿಕ ಜಾಗೃತಿಗಾಗಿ 'ಟಿಕ್‌ಟಾಕ್'‌ ಖಾತೆ ತೆರೆದ ಪೊಲೀಸರು!

ಟಿಕ್‌ಟಾಕ್‌ ಆಪ್‌ ಜನಪ್ರಿಯವಾಗಿದ್ದು, ಬಹುತೇಕ ಬಳಕೆದಾರರು ಹೆಚ್ಚಿನ ಸಮಯವನ್ನು ಟಿಕ್‌ಟಾಕ್‌ನಲ್ಲಿ ಕಳೆಯುತ್ತಾರೆ. ಹಾಗೂ ಬೇಗನೆ ಹೆಚ್ಚು ಜನರಿಗೆ ತಲುಪಲು ಟಿಕ್‌ಟಾಕ್‌ ಅತ್ಯುತ್ತಮ ಪ್ಲಾಟ್‌ಫ್ಲಾರ್ಮ್‌ ಆಗಿದೆ. ಹೀಗಾಗಿ ಉತ್ತರ ಪ್ರದೇಶ ಪೊಲೀಸ್‌ರು ಅವರ ವ್ಯಾಪ್ತಿಯ ಜನರಿಗೆ ಸುರಕ್ಷತೆಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ‌ ಟಿಕ್‌ಟಾಕ್ ವಿಡಿಯೊಗಳ ಮೂಲಕ ಸೂಕ್ತ ಮಾಹಿತಿ ಒದಗಿಸುವ ಹೆಜ್ಜೆ ಇರಿಸಿದ್ದಾರೆ.

 ಸಾಮಾಜಿಕ ಜಾಗೃತಿಗಾಗಿ 'ಟಿಕ್‌ಟಾಕ್'‌ ಖಾತೆ ತೆರೆದ ಪೊಲೀಸರು!

ಟಿಕ್‌ಟಾಕ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮೊದಲು ಕೇರಳ ಪೊಲೀಸ್‌ರು ಶುರುಮಾಡಿದ್ದು, ಅವರ ಬೆನ್ನಲೇ ಇದೀಗ ಉತ್ತರ ಪ್ರದೇಶದ ಪೊಲೀಸರು ಸಹ ಈ ಕೆಲಸಕ್ಕೆ ಮುಂದಾಗಿದ್ದಾರೆ. ಜಾಗೃತಿಯ ಮಾಹಿತಿಗಳನ್ನು ಜನರಗೆ ತಲುಪಿಸಲು ಟಿಕ್‌ಟಾಕ್‌ ಸೂಕ್ತ ಹಾದಿಯಾಗಿದೆ ಮತ್ತು ಜನರನ್ನು ವೈಯಕ್ತಿಕವಾಗಿ ಮಾಹಿತಿ ಒದಗಿಸಿದಂತಾಗುತ್ತದೆ ಎಂದು ಉತ್ತರ ಪ್ರದೇಶ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

<strong>ಓದಿರಿ : ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!</strong>ಓದಿರಿ : ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!

ಬೈಟ್‌ಡ್ಯಾನ್ಸ್‌ ಸಂಸ್ಥೆಯ ಟಿಕ್‌ಟಾಕ್‌ ಆಪ್‌ ಮೂಲಕ ರಸ್ತೆ ಸುರಕ್ಷತೆ, ಮಹಿಳಾ ಸುರಕ್ಷತೆ, ಸೈಬರ್ ಸೆಕ್ಯುರಿಟಿ ವಿಷಯಗಳ ಮಾಹಿತಿ ಜೊತೆಗೆ ಇತರೆ ಅಪರಾಧ ಘಟನೆಗಳ ತಡೆಯುವಿಕೆಯ ಬಗ್ಗೆಯೂ ಸಹ ಸೂಕ್ತ ವಿಡಿಯೊಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ. ಮಾಹಿತಿ ನೀಡುವ ಯೋಜನೆ ಮಾಡಿದ್ದಾರೆ. ಹಾಗೆಯೇ ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮಾಡಿಕೊಡುವ ಕೆಲಸ ಮಾಡಲಾರಂಭಿಸಿದ್ದಾರೆ.

<strong>ಓದಿರಿ : ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!</strong>ಓದಿರಿ : ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!

Best Mobiles in India

Read more about:
English summary
Uttarakhand Police is planning to create and post videos that should raise awareness among the youth on various social issues. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X