Home
ಸುದ್ದಿಜಾಲ

Valentine day special: ಟಿಂಡರ್‌ನಲ್ಲಿ ಡೇಟಿಂಗ್‌ ಪ್ರಕ್ರಿಯೆ ಈಗ ಇನ್ನಷ್ಟು ಸುರಕ್ಷಿತ!

ಪ್ರಮುಖ ಡೇಟಿಂಗ್‌ ಆಪ್‌ಗಳಲ್ಲಿ ಒಂದಾಗಿರುವ ಟಿಂಡರ್‌, ಬಳಕೆದಾರರಿಗೆ ತನ್ನದೇ ಆದ ಸೇವೆ ನೀಡುತ್ತಾ ಬರುತ್ತಿದೆ. ಅದರಲ್ಲೂ ಈ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಯಾವುದೇ ಸಮಸ್ಯೆ ಹಾಗೂ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಪ್ರಮುಖ ಫೀಚರ್ಸ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಇದರ ನಡುವೆ ಈಗ ಹೊಸ ಫೀಚರ್ಸ್‌ ಬಗ್ಗೆ ಘೋಷಣೆ ಮಾಡಲಾಗಿದ್ದು, ಇವು ಬಳಕೆದಾರರಿಗೆ ಸಾಕಷ್ಟು ಅನುಕೂಲ ಎನ್ನಬಹುದು.

ಟಿಂಡರ್‌ನಲ್ಲಿ ಡೇಟಿಂಗ್‌ ಪ್ರಕ್ರಿಯೆ ಈಗ ಇನ್ನಷ್ಟು ಸುರಕ್ಷಿತ!

ಹೌದು, ಈಗಂತೂ ಸಾಕಷ್ಟು ಜನ ಈ ಡೇಟಿಂಗ್‌ ಆಪ್‌ ಆದ ಟಿಂಡರ್‌ ಅನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಬರುತ್ತಿದ್ದು, ಇದರಿಂದಾಗಿ ಈ ಆಪ್‌ ನಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುತ್ತವೆ. ಹೀಗಾಗಿ ಪ್ರೇಮಿಗಳ ದಿನ ಹಿನ್ನೆಲೆ ಬಳಕೆದಾರರಿಗೆ ವಿಶೇಷ ಸುರಕ್ಷತಾ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಹಾಗಿದ್ರೆ, ಈ ಫೀಚರ್ಸ್‌ನಿಂದ ಬಳಕೆದಾರರಿಗೆ ಏನೆಲ್ಲಾ ಲಾಭ?, ಯಾವೆಲ್ಲಾ ಹೊಸ ಫೀಚರ್ಸ್ ಇವೆ‌ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪ್ರೇಮಿಗಳ ದಿನವನ್ನು ಗುರಿಯಾಗಿಸಿಕೊಂಡು ಟಿಂಡರ್ ತನ್ನ ಬಳಕೆದಾರರಿಗೆ ಹೊಸ ಸುರಕ್ಷತಾ ಫೀಚರ್ಸ್‌ಗಳನ್ನು ಹೊರತರುತ್ತಿದೆ. ಈ ಮೂಲಕ ಬಳಕೆದಾರರು ಇತರರೊಂದಿಗೆ ಹೇಗೆ ಸಂವಹನ ನಡೆಸಬಹುದು ಎಂಬುದರ ಕುರಿತು ಹೆಚ್ಚಿನ ಕಂಟ್ರೋಲ್‌ ಅನ್ನು ನೀಡುತ್ತದೆ. ಅದರಲ್ಲೂ incognito ಮೋಡ್‌, ಪ್ರೊಫೈಲ್ ಅನ್ನು ನಿರ್ಬಂಧಿಸುವ ಆಯ್ಕೆ, ಲಾಂಗ್ ಪ್ರೆಸ್ ರಿಪೋರ್ಟಿಂಗ್ ಸೇರಿದಂತೆ ಇನ್ನೂ ಹೆಚ್ಚಿನ ಆಯ್ಕೆಗಳು ವಿಶೇಷ ಎನಿಸಿವೆ.

incognito ಮೋಡ್‌ ಫೀಚರ್ಸ್‌

ಅಜ್ಞಾತ ಮೋಡ್‌ ಫೀಚರ್ಸ್‌ ಮೂಲಕ ಬಳಕೆದಾರರು ಈ ಡೇಟಿಂಗ್ ಆಪ್‌ನಲ್ಲಿ ಲೈಕ್ ಮಾಡಲು ಮತ್ತು ನೋಪ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಬಳಕೆದಾರರು ಯಾರಿಗೆ ಲೈಕ್‌ ಮಾಡಿದ್ದಾರೊ ಅವರ ಖಾತೆಗಳನ್ನಷ್ಟೇ ಇದರಲ್ಲಿ ಶಿಫಾರಸು ಮಾಡಲಾಗುತ್ತದೆ. ಹಾಗೆಯೇ ಯಾರೆಲ್ಲಾ ಪ್ರೊಫೈಲ್‌ ವೀಕ್ಷಿಸುತ್ತಿದ್ದಾರೆ ಎಂಬುದರ ಸಂಪೂರ್ಣ ಕಂಟ್ರೋಲ್ ಅನ್ನು ಸಹ ನೀಡುತ್ತಿರುವುದು ಇನ್ನಷ್ಟು ವಿಶೇಷ.

ಟಿಂಡರ್‌ನಲ್ಲಿ ಡೇಟಿಂಗ್‌ ಪ್ರಕ್ರಿಯೆ ಈಗ ಇನ್ನಷ್ಟು ಸುರಕ್ಷಿತ!

ಪ್ರೊಫೈಲ್‌ ನಿರ್ಬಂಧ

ಇದರೊಂದಿಗೆ ಪ್ರೊಫೈಲ್‌ಗಳನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಸಹ ಪಡೆಯುತ್ತಿದ್ದು, ಈ ಮೂಲಕ ಬಳಕೆದಾರರು ಯಾರನ್ನು ನೋಡಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಹಾಗೆಯೇ ಬೇಡವಾದವರ ಪ್ರೊಫೈಲ್‌ ಅನ್ನು ಲಾಕ್ ಮಾಡುವ ಆಯ್ಕೆ ಸಹ ಇದ್ದು, ಇದರಿಂದ ಅನವಶ್ಯಕವಾಗಿ ಸಮಸ್ಯೆ ನೀಡುವ ಖಾತೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ವರದಿ ಮಾಡುವ ಆಯ್ಕೆ

ಟಿಂಡರ್‌ಗೆ ಬರುವ ಮತ್ತೊಂದು ಸುರಕ್ಷತಾ ಫೀಚರ್ಸ್‌ ಎಂದರೆ ಅದುವೇ ಲಾಂಗ್‌ ಪ್ರೆಸ್‌ ರಿಪೋರ್ಟಿಂಗ್‌ ಆಯ್ಕೆ. ಈ ಮೂಲಕ ಬಳಕೆದಾರರು ಆಕ್ಷೇಪಾರ್ಹ ಸಂದೇಶಗಳನ್ನು ಟ್ಯಾಪ್ ಮಾಡಬಹುದು ಮತ್ತು ಲಾಂಗ್‌ ಪ್ರೆಸ್‌ ಮಾಡುವ ಮೂಲಕ ನೇರವಾಗಿ ವರದಿ ಮಾಡುವ ಆಯ್ಕೆಯನ್ನು ಪಡೆಯಬಹುದಾಗಿದೆ. ಇದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಸುರಕ್ಷಿತಾ ಪ್ರಕ್ರಿಯೆಗಳು ಜರುಗಲು ಸಹಾಯವಾಗಲಿದೆ.

ಟಿಂಡರ್‌ನಲ್ಲಿ ಡೇಟಿಂಗ್‌ ಪ್ರಕ್ರಿಯೆ ಈಗ ಇನ್ನಷ್ಟು ಸುರಕ್ಷಿತ!

DTBY ಹಾಗೂ AYS ನಲ್ಲಿ ಹೆಚ್ಚಿನ ಆಯ್ಕೆ

ಇದಿಷ್ಟೇ ಅಲ್ಲದೆ ದ್ವೇಷ ಭಾಷಣ, ಲೈಂಗಿಕ ಶೋಷಣೆ ಅಥವಾ ಕಿರುಕುಳಕ್ಕೆ ಸಂಬಂಧಿಸಿದ ಪದಗಳನ್ನು ಬಳಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಅದರಲ್ಲೂ ಆಪ್‌ನಲ್ಲಿ DTBY ಹಾಗೂ AYS ಎಂಬ ಆಯ್ಕೆಗೆ ಇನ್ನಷ್ಟು ಹೆಚ್ಚಿನ ಆಯ್ಕೆಗಳನ್ನು ಸೇರಿಸಲಾಗಿದೆ. AYS ಫೀಚರ್ಸ್‌ ಮೂಲಕ ಯಾವುದೇ ಮೆಸೆಜ್‌ ನಲ್ಲಿ ಹಾನಿಕಾರಕ ಭಾಷೆಯನ್ನು ಪತ್ತೆ ಮಾಡಬಹುದಾಗಿದೆ. ಹಾಗೆಯೇ ಈ ರೀತಿಯ ಮೆಸೆಜ್‌ ಕಳುಹಿಸುವಿಕೆಯ ಪ್ರಕ್ರಿಯೆಯನ್ನು ಶೇಕಡಾ 10 ಕ್ಕಿಂತ ಹೆಚ್ಚು ಕಡಿಮೆ ಮಾಡಲು ಟಿಂಡರ್‌ ಮುಂದಾಗಿದೆ.

ಹಾಗೆಯೇ DTBY ಆಯ್ಕೆಯಲ್ಲಿ ಅನುಚಿತ ಸಂಭಾಷಣೆಗಳನ್ನು ವರದಿ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತದೆ. ನಿಯಮಗಳ ವಿರುದ್ಧ ನಡೆದುಕೊಳ್ಳುವ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇನ್ನು ಕಾನೂನು ವಿರುದ್ಧದ ಪದ ಬಳಕೆಯ ಬಗ್ಗೆ ವರದಿ ಮಾಡುವ ಸಲುವಾಗಿ ವಿವಿಧ ಭಾಷೆಯ ಆಯ್ಕೆಯನ್ನೂ ಸಹ ನೀಡಲಾಗುತ್ತಿದೆ.

ಕೌಟುಂಬಿಕ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುವ ಪ್ರತಿಷ್ಠಾನವಾದ ನೋ ಮೋರ್ ಜೊತೆಗೆ ಈ ಸಂಬಂಧ ಪಾಲುದಾರಿಕೆ ಹೊಂದಲಾಗಿದೆ ಎಂದು ಟಿಂಡರ್ ಮಾಹಿತಿ ನೀಡಿದ್ದು, ಈ ಮಾರ್ಗದರ್ಶಿ ಮೂಲಕ ಡೇಟಿಂಗ್ ಆಪ್‌ನಲ್ಲಿ ನಡೆಯುವ ಪ್ರತಿ ಹೆಜ್ಜೆಗಳನ್ನು ಗಂಭಿರವಾಗಿ ಪರಿಗಣಿಸಲಾಗುತ್ತದೆ. ಈ ಮೂಲಕ ಒಳ್ಳೆಯ ನಡವಳಿಕೆಯನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ನಿರೀಕ್ಷಿಸಲಾಗುತ್ತದೆ ಎಂದು ತಿಳಿಸಿದೆ.

Best Mobiles in India

English summary
Tinder is rolling out new safety features for its users that gives them more control on how they interact with others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+