ನಿಮ್ಮ ಪ್ರೀತಿ ಪಾತ್ರರಿಗೆ ಸರ್ಪ್ರೈಸ್ ಕೊಡಬೇಕೆ?..ಹಾಗಿದ್ರೆ, ವಾಟ್ಸಾಪ್‌ನಲ್ಲಿ ಹೀಗೆ ಮಾಡಿ!
ಪ್ರೇಮಿಗಳ ದಿನ ಬಂದೇ ಬಿಡ್ತು. ಈ ಸಂದರ್ಭದಲ್ಲಿ ಬಹುತೇಕರು ಜನರು ಅವರ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಮೂಲಕ ಶುಭಾಶಯ ವ್ಯಕ್ತಪಡಿಸುತ್ತಾರೆ. ಆದ್ರೆ, ಮತ್ತೆ ಕೆಲವರು ತಮ್ಮ ಆತ್ಮೀಯರಿಗೆ ಶುಭಾಶಯ ತಿಳಿಸಲು, ತಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಹೊಸ ದಾರಿಗಳನ್ನು ಹುಡುಕುತ್ತಾರೆ. ವಿಭಿನ್ನ ಪ್ರಯತ್ನದ ಮೂಲಕ ತಮ್ಮ ಪ್ರೀತಿ ಪಾತ್ರರಿಗೆ ಸರ್ಪ್ರೈಸ್ ನೀಡಲು ಮುಂದಾಗುತ್ತಾರೆ.

ಹೌದು, ತಮ್ಮ ಭಾವನೆಗಳನ್ನು ವಿಶೇಷವಾಗಿ ತಿಳಿಸುವ ಮೂಲಕ ಪ್ರೀತಿ ಪಾತ್ರರ ಮನ ಗೆಲ್ಲಲು ಇಷ್ಟಪಡುತ್ತಾರೆ. ಹೀಗೆ ವಿಶೇಷವಾಗಿ ಶುಭಾಶಯ ತಿಳಿಸುತ್ತೇನೆ ಎನ್ನುವವರಿಗೆ ವಾಟ್ಸಾಪ್ ಸಹ ಒಂದು ಆಯ್ಕೆ ಎನ್ನಬಹುದು. ಏಕೆಂದರೆ ಪ್ರೀತಿ ಪಾತ್ರರ ವಾಟ್ಸಾಪ್ ಆಪ್ ಮೂಲಕವೂ ಸ್ಪೆಷಲ್ ಆಗಿ ಶುಭಾಶಯ ವ್ಯಕ್ತಪಡಿಸಬಹುದಾಗಿದೆ. ಅರೇ ಅದು ಹೇಗೆ ಅಂತೀರಾ?..ಈ ಬಗ್ಗೆ ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ ಬನ್ನಿರಿ.

ಡಿಜಿಟಲ್ ಅವತಾರ (Digital avatars)
ವಾಟ್ಸಾಪ್ ಅಪ್ಲಿಕೇಶನ್ ಬಳಕೆದಾರರ ಸ್ವಂತ ಅವತಾರ ರಚಿಸಲು ಅವಕಾಶ ಮಾಡಿಕೊಟ್ಟಿದೆ. ಈ ಆಯ್ಕೆ ಮೂಲಕ ಬಳಕೆದಾರರು ಅವರ ಪ್ರೀತಿ ಪಾತ್ರರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಡಿಜಿಟಲ್ ಅವತಾರ ಮೂಲಕ ಆಪ್ತವಾಗಿ ಚಾಟ್ ಮಾಡಬಹುದು.
ಇಮೋಜಿ ರಿಯಾಕ್ಷನ್ (Emoji reaction)
ವಾಟ್ಸಾಪ್ ಇತ್ತೀಚಿಗೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಅವುಗಳಲ್ಲಿ ಇಮೋಜಿ ರಿಯಾಕ್ಷನ್ ಆಯ್ಕೆ ಸಹ ಒಂದಾಗಿದೆ. ಬಳಕೆದಾರರ ತಮ್ಮ ಪ್ರೀತಿ ಪಾತ್ರರಿಗೆ ಇಮೋಜಿ ರಿಯಾಕ್ಷನ್ ಮೂಲಕ ಸ್ಪೆಷಲ್ ಆಗಿ ಶುಭಾಶಯ ತಿಳಿಸಬಹುದಾಗಿದೆ. ಸೂಕ್ತ ಇಮೋಜಿ ಬಳಕೆ ಮಾಡುವ ಮೂಲಕ ಆಪ್ತವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು.

ವಾಯಿಸ್ ಮೆಸೆಜ್ (Voice messages)
ವಾಟ್ಸಾಪ್ ವಾಯಿಸ್ ಮೆಸೆಜ್ ಆಯ್ಕೆಯಲ್ಲಿ ಸಾಕಷ್ಟು ಅಪ್‌ಡೇಟ್ ಆಗಿದ್ದು, ಈ ಆಯ್ಕೆ ಸದ್ಯ ಹೆಚ್ಚು ಗಮನ ಸೆಳೆದಿದೆ. ಬಳಕೆದಾರರು ವಾಯಿಸ್ ಮೆಸೆಜ್ ಆಯ್ಕೆ ಬಳಕೆ ಮಾಡುವ ಮೂಲಕವೂ ವಿಶೇಷವಾಗಿ ಪ್ರೇಮಿಗಳ ದಿನದ ಶುಭಾಶಯ ತಿಳಿಸಬಹುದು. ಬಳಕೆದಾರರು ತಮ್ಮ ಸ್ವಂತ ಧ್ವನಿಯಲ್ಲಿ ತಮ್ಮ ಪ್ರೀತಿ ಪಾತ್ರರ ಮನ ಮುಟ್ಟುವಂತೆ ಭಾವನೆಗಳನ್ನು ವಾಯಿಸ್ ಮೆಸೆಜ್ ರೂಪದಲ್ಲಿ ತಿಳಿಸಬಹುದು.

ಲೈವ್ ಲೊಕೇಶನ್ (Live location)
ಲೈವ್ ಲೊಕೇಶನ್ ಆಯ್ಕೆಯು ಬಹು ಉಪಯುಕ್ತವಾದ ಫೀಚರ್ ಆಗಿದೆ. ವಿಳಾಸ ತಿಳಿಯಲು, ಮಾರ್ಗ ತಿಳಿಸಲು ಅಷ್ಟೆ ಅಲ್ಲದೇ ಈ ಆಯ್ಕೆಯನ್ನು ಸುರಕ್ಷತೆಯ ದೃಷ್ಠಿಯಿಂದ ಸಹ ಬಳಕೆ ಮಾಡಬಹುದು. ಒಂದು ವೇಳೆ ಪ್ರೀತಿ ಪಾತ್ರರು ಅಪರಿಚಿತ ಸ್ಥಳದಲ್ಲಿ ಇದ್ದಾಗ, ಅವರ ಸುರಕ್ಷತೆಗಾಗಿ ಲೈವ್ ಲೊಕೇಶನ್ ಆಯ್ಕೆ ಮೂಲಕ ಕಾಳಜಿ ಮಾಡಬಹುದಾಗಿದೆ. ಕಾಳಜಿ ತೋರುವುದು ಪ್ರೀತಿಯ ರೂಪವೇ ಅಲ್ಲವೇ?.
ಸ್ಟೇಟಸ್ ಅಪ್‌ಡೇಟ್ (Status updates)
ವಾಟ್ಸಾಪ್ ಸ್ಟೇಟಸ್ ಫೀಚರ್ ಎಷ್ಟು ಜನಪ್ರಿಯತೆ ಪಡೆದಿದೆ ಎಂಬುದು ನಿಮಗೆ ತಿಳಿದೆ ಇದೆ. ವಾಟ್ಸಾಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡುವ ಫೋಟೊ ಅಥವಾ ವಿಡಿಯೋ 24 ಗಂಟೆಗಳ ಕಾಲ ಉಳಿದಿರುತ್ತದೆ. ಬಳಕೆದಾರರು ವಾಟ್ಸಾಪ್ ಸ್ಟೇಟಸ್ ಮೂಲಕ ಸಹ ತಮ್ಮ ಪ್ರೀತಿ ಪಾತ್ರರಿಗೆ ಭಾವನೆಗಳನ್ನು ವ್ಯಕ್ತಪಡಿಸಬಹುದು.

ಕಸ್ಟಮ್ ನೋಟಿಫಿಕೇಶನ್ (Custom notifications)
ವಾಟ್ಸಾಪ್ ಆಪ್‌ನಲ್ಲಿ ಕಸ್ಟಮೈಸ್ ನೋಟಿಫಿಕೇಶನ್ ಆಯ್ಕೆ ಮೂಲಕ ವಿಶೇಷ ಎನ್ನುವಂತೆ ಮಾಡಬಹುದು. ವಾಟ್ಸಾಪ್‌ನಲ್ಲಿ ಅಲರ್ಟ್ ಟ್ಯೂನ್, ವಾಲ್‌ಪೇಪರ್ ಮತ್ತು ಸೌಂಡ್ ಆಯ್ಕೆಗಳಲ್ಲಿ ಬದಲಾವಣೆ ಮಾಡಬಹುದು.
ಪೊಲ್ (Polls)
ಇತ್ತೀಚಿಗೆ ಪೊಲ್ (Polls) ಆಯ್ಕೆ ಸಹ ಹೆಚ್ಚು ಗಮನ ಸೆಳೆದಿದೆ. ಈ ಫೀಚರ್ ಮೂಲಕ ಅಭಿಪ್ರಾಯಗಳನ್ನು ತಿಳಿಯಬಹುದಾಗಿದೆ. ವಾಟ್ಸಾಪ್ ಆಪ್‌ನಲ್ಲಿಯೂ ಪೊಲ್ (Polls) ಆಯ್ಕೆ ಇದ್ದು, ಪೊಲೊ ರಚಿಸುವ ಮೂಲಕ ಸ್ನೇಹಿತರೊಂದಿಗೆ ಅಭಿಪ್ರಾಯಗಳನ್ನು ಪಡೆಯಬಹುದಾಗಿದೆ.


Click it and Unblock the Notifications








