Home
ಸುದ್ದಿಜಾಲ

Valentines Day ಗಿಫ್ಟ್‌ ಸರ್ಚ್‌ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ

ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಬರುತ್ತಿದ್ದು, ಈಗಾಗಲೇ ಹಲವಾರು ಪ್ರೇಮಿಗಳು ಉಡುಗೊರೆಗಳನ್ನು ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇದರ ನಡುವೆ ಪ್ರೀತಿ ಮಾಡಿ ಮದುವೆಯಾದ ಜೋಡಿಗಳು ಸಹ ತಮ್ಮ ಸಂಗಾತಿಗೆ ಏನಾದರೂ ಆಕರ್ಷಕ ಉಡುಗೊರೆ ನೀಡಲು ಮುಂದಾಗುತ್ತಾರೆ. ಇದು ಪ್ರತಿವರ್ಷವೂ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಈ ಬಾರಿ ನಿಮ್ಮ ಸಂಗಾತಿಗೆ ಏನೆಲ್ಲಾ ಉಡುಗೊರೆ ನೀಡಬೇಕು ಎಂದು ಚಿಂತಿಸುವ ಅಗತ್ಯ ಇಲ್ಲ.

 Valentines Day ಗಿಫ್ಟ್‌ ಸರ್ಚ್‌ ಮಾಡ್ತಾ ಇದ್ದೀರಾ?..

ಹೌದು, ಉಡುಗೊರೆ ವಿಚಾರಕ್ಕೆ ಬಂದರೆ ಯಾವ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಎನ್ನುವ ಚಿಂತೆಯಲ್ಲೇ ಹಲವರು ಮುಳುಗಿರುತ್ತಾರೆ. ಅದರಲ್ಲೂ ಈ ಪ್ರೀತಿ ವಿಚಾರದಲ್ಲಂತೂ ಇದು ದೊಡ್ಡ ಮಟ್ಟದಲ್ಲೇ ಇರುತ್ತದೆ. ಹಾಗೆಯೇ ಈ ಉಡುಗೊರೆಯನ್ನು ಹುಡುಕುವುದು ಎಂದಿಗೂ ಸರಳವಲ್ಲ, ಅತ್ಯುತ್ತಮ ಉಡುಗೊರೆಗಳ ಬಗ್ಗೆ ಯೋಚಿಸಿ ನೀವು ಈಗಾಗಲೇ ಸುಸ್ತಾಗಿದ್ದೀರಾ? ಚಿಂತಿಸಬೇಡಿ, ನೀವು ಖಂಡಿತಾ ಇಷ್ಟಪಡುವ ಕೆಲವು ಉಡುಗೊರೆ ಲಿಸ್ಟ್‌ ಅನ್ನು ನಾವು ಇಲ್ಲಿ ನೀಡಿದ್ದೇವೆ ಓದಿರಿ.

ಲೆನೊವೊ ಟ್ಯಾಬ್‌
ಲೆನೊವೊ ಟ್ಯಾಬ್‌ ನಿಮ್ಮ ಗೆಳಯ ಅಥವಾ ಗೆಳತಿಗೆ ಖಂಡಿತಾ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ನಿಮ್ಮ ಸಂಗಾತಿ ಹೆಚ್ಚು ಓದುವವರಾಗಿದ್ದರೆ, ಸಿನಿಮಾಗಳನ್ನು ಇಷ್ಟಪಡುವವರಾಗಿದ್ದರೆ ಹಾಗೂ ಟ್ರಾವೆಲ್‌ ಸಮಯದಲ್ಲಿ ಹೆಚ್ಚಾಗಿ ಸಂಗೀತ ಅಥವಾ ಮನರಂಜನೆಯನ್ನು ಇಷ್ಟಪಟ್ಟರೆ ಖಂಡಿತಾ ಈ ಉಡುಗೊರೆ ಇಷ್ಟವಾಗುತ್ತದೆ. ಈ ಟ್ಯಾಬ್‌ ಆಕ್ಟಿವ್‌ ಪೆನ್‌ನೊಂದಿಗೆ ಪ್ಯಾಕ್‌ ಆಗಿದ್ದು, 10.3 ಇಂಚಿನ ಡಿಸ್‌ಪ್ಲೇ ಹೊಂದಿದೆ ಇನ್ನು ಈ ಡಿವೈಸ್‌ ಅನ್ನು 18,999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಗಮನಿಸಬೇಕಾದ ವಿಷಯ ಎಂದರೆ ಕೇವಲ ಲೆನೊವೊ ಟ್ಯಾಬ್‌ ಮಾತ್ರವಲ್ಲದೆ ಇತರೆ ಹಲವಾರು ಕಂಪೆನಿಯ ಟ್ಯಾಬ್‌ಗಳು ಸಹ ಮಾರುಕಟ್ಟೆಯಲ್ಲಿದ್ದು, ನಿಮ್ಮ ಬಜೆಟ್‌ಗೆ ತಕ್ಕ ಡಿವೈಸ್‌ ಅನ್ನು ಖರೀದಿ ಮಾಡಬಹುದು.

JBL ಫ್ಲಿಪ್ 4 ಪೋರ್ಟಬಲ್ ಸ್ಪೀಕರ್
ಸ್ಪೀಕರ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಪ್ರೇಮಿಗಳ ದಿನದಂದು ನೀವು ಈ ಸ್ಪೀಕರ್ ಅನ್ನು ಉಡುಗೊರೆಯಾಗಿ ನೀಡಿದರೆ ಖಂಡಿತಾ ನಿಮ್ಮ ಪ್ರೀತಿಪಾತ್ರರಿಗೆ ಇಷ್ಟವಾಗುತ್ತದೆ. ಅದರಲ್ಲೂ ಯುವಕರು ಹೆಚ್ಚಾಗಿ ಸಣ್ಣಪುಟ್ಟ ಪಾರ್ಟಿಗಳಲ್ಲಿ ಭಾಗಿಯಾಗುತ್ತಾರೆ. ಆ ವೇಳೆ ಈ ಸ್ಪೀಕರ್‌ಗಳ ಮೂಲಕವಾದರೂ ಉಡುಗೊರೆ ನೀಡಿದವರನ್ನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ JBL ಫ್ಲಿಪ್ 4 ಪೋರ್ಟಬಲ್ ಸ್ಪೀಕರ್ ಉತ್ತಮ ಆಡಿಯೋ ಕ್ವಾಲಿಟಿಯೊಂದಿಗೆ ವಾಟರ್‌ ರೆಸಿಟ್ಟೆಂಟ್‌ ಆಗಿದ್ದು, ನೀರಿನಿಂದ ಹಾಳಾಗುತ್ತದೆ ಎಂಬ ಭಯಬೇಡ. ಈ ಡಿವೈಸ್‌ ಅನ್ನು ನೀವು 7,499. ರೂ. ಗಳ ಬೆಲೆಯಲ್ಲಿ ಖರೀದಿಸಿ.

 Valentines Day ಗಿಫ್ಟ್‌ ಸರ್ಚ್‌ ಮಾಡ್ತಾ ಇದ್ದೀರಾ?..

ಪ್ರೊಕಸ್‌ಒನ್ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್
ಪ್ರೊಕಸ್‌ಒನ್ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಉಡುಗೊರೆಯಲ್ಲಿ ಅತ್ಯುತ್ತಮ ಆಯ್ಕೆ ಎನ್ನಬಹುದು. ನಿಮ್ಮ ಪ್ರೀತಿ ಪಾತ್ರರು ಹೆಚ್ಚಾಗಿ ಮೊಬೈಲ್‌ನಲ್ಲಿ ಗೇಮ್‌ ಆಡಲು ಇಷ್ಟಪಡುವವರಾಗಿದ್ದರೆ ಖಂಡಿತಾ ಈ ಡಿವೈಸ್‌ ಅನ್ನು ಉಡುಗೊರೆಯಾಗಿ ನೀಡಬಹುದು. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಿಗೆ ಬೆಂಬಲ ನೀಡಲಿದ್ದು, ತಲ್ಲೀನಗೊಳಿಸುವ ವೀಕ್ಷಣಾ ಕೋನವನ್ನು ನೀಡಲು 40MM ಲೆನ್ಸ್‌ಗಳೊಂದಿಗೆ ಇದನ್ನು ಪ್ಯಾಕ್‌ ಮಾಡಲಾಗಿದೆ. ಈ ಪ್ರೊಕಸ್ ವರ್ಚುವಲ್ ರಿಯಾಲಿಟಿ ಡಿವೈಸ್‌ಗೆ 1,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.

 Valentines Day ಗಿಫ್ಟ್‌ ಸರ್ಚ್‌ ಮಾಡ್ತಾ ಇದ್ದೀರಾ?..

ಫೈರ್-ಬೋಲ್ಟ್ ನಿಂಜಾ 3 ಸ್ಮಾರ್ಟ್‌ವಾಚ್
ಪ್ರೇಮಿಗಳ ದಿನ ಮಾತ್ರವಲ್ಲದೆ ಯಾವುದೇ ವಿಶೇಷ ಸಂದರ್ಭದಲ್ಲಿ ಸ್ಮಾರ್ಟ್‌ವಾಚ್ ಗಳನ್ನು ಉಡುಗೊರೆಯಾಗಿ ನೀಡುವುದು ಈಗ ಸಾಮಾನ್ಯವಾದ ಸಂಗತಿಯಾಗಿದೆ. ಅದಾಗ್ಯೂ ನಿಮ್ಮ ಪ್ರೀತಿ ಪಾತ್ರರಿಗೆ ಸ್ಮಾರ್ಟ್‌ವಾಚ್‌ ಅನ್ನೇ ಗಿಫ್ಟ್‌ ಆಗಿ ನೀಡಬೇಕು ಎಂದರೆ ಫೈರ್-ಬೋಲ್ಟ್ ನಿಂಜಾ 3 ಸ್ಮಾರ್ಟ್ ವಾಚ್ ಉತ್ತಮ ಆಯ್ಕೆಯಾಗಿದೆ. ಈ ಮೂಲಕ ನಿಮ್ಮ ಪ್ರೀತಿ ಪಾತ್ರರು ಯಾವಾಗಲು ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಈ ವಾಚ್‌ ಆರೋಗ್ಯ ಸಂಬಂಧಿ ಮಾಹಿತಿ ನೀಡುವ ಜೊತೆಗೆ ಹಲವಾರು ಫೀಚರ್ಸ್‌ ಗಳನ್ನು ಪಡೆದುಕೊಂಡಿದೆ. ಇನ್ನು 1,299. ರೂ. ಗಳ ಬೆಲೆಯಲ್ಲಿ ಈ ವಾಚ್‌ ಅನ್ನು ಖರೀದಿ ಮಾಡಬಹುದಾಗಿದೆ.

ಬೋಟ್ ರಾಕರ್ಜ್ 450 ಹೆಡ್‌ಫೋನ್ಸ್‌
ಬೋಟ್‌ನ ಹೆಡ್‌ಫೋನ್‌ಗಳು ಎಂದಿಗೂ ಸಹ ಬೇಡಿಕೆ ಇರುವ ಗ್ಯಾಜೆಟ್‌ಗಳಾಗಿವೆ. ಇದರ ನಡುವೆ ನೀವು ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಈ ಬೋಟ್ ರಾಕರ್ಜ್ 450 ಹೆಡ್‌ಫೋನ್ಸ್‌ ಅನ್ನು ನೀಡುವುದರಿಂದ ನಿಮ್ಮ ಪ್ರೀತಿ ಪಾತ್ರರು ಖಂಡಿತಾ ನಿಮ್ಮನ್ನು ಇನ್ನಷ್ಟಿ ಪ್ರೀತಿ ಮಾಡಲು ಮುಂದಾಗುತ್ತಾರೆ. ನಿಮ್ಮ ಪ್ರೀತಿ ಪಾತ್ರರು ಹೆಚ್ಚು ಸಂಗೀತ ಪ್ರಿಯರಾಗಿದ್ದರೆ ಈ ಡಿವೈಸ್‌ ಅನ್ನು ನೀಡಬಹುದು. ಹಾಗೆಯೇ ಇದನ್ನು ನೀವು 1,399ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Gift exchange is a common practice on Valentines Day. Accordingly, we have given a list of all the gifts that can be given, read this article for more information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+