Valentine’s Day offers; ವಿಜಯ್ ಸೇಲ್ಸ್‌ನಲ್ಲಿ ಸ್ಮಾರ್ಟ್‌ಡಿವೈಸ್‌ಗಳಿಗೆ 70% ವರೆಗೆ ರಿಯಾಯಿತಿ!
ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಪ್ರೇಮಿಗಳ ದಿನಕ್ಕೆ ಒಂದಕ್ಕೊಂದು ಪೈಪೋಟಿಯಲ್ಲಿ ಸ್ಮಾರ್ಟ್‌ಡಿವೈಸ್‌ಗಳ ಮೇಲೆ ಆಫರ್ ಘೋಷಣೆ ಮಾಡುತ್ತಾ ಬರುತ್ತಿದೆ. ಅದರಂತೆ ವಿಜಯ್ ಸೇಲ್ಸ್‌ನಲ್ಲೂ ಸಹ ಪ್ರೇಮಿಗಳ ದಿನ ಹಿನ್ನೆಲೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ಈ ಮೂಲಕ ಗ್ರಾಹಕರು ಬರೋಬ್ಬರಿ 70% ರಿಯಾಯಿತಿಯೊಂದಿಗೆ ಸ್ಮಾರ್ಟ್ ಡಿವೈಸ್‌ಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡಬಹುದು.

ಹೌದು, ವಿಜಯ್ ಸೇಲ್ಸ್ ಹಲವಾರು ಪ್ರೊಡಕ್ಟ್‌ಗಳ ಮೇಲೆ ಭಾರೀ ರಿಯಾಯಿತಿ ಘೋಷಣೆ ಮಾಡಿದ್ದು, ಫೆಬ್ರವರಿ 10 ರಿಂದ ಈ ವಿಶೇಷ ಮಾರಾಟ ಆರಂಭವಾಗಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಇನ್ನಿತರೆ ಡಿವೈಸ್‌ಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿವೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್ ಡಿವೈಸ್‌ಗಳು ಎಷ್ಟು ಆಫರ್ ಪಡೆದುಕೊಂಡಿವೆ, ಬ್ಯಾಂಕ್ ಆಫರ್ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ವಿಜಯ್ ಸೇಲ್ಸ್ ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 5,999 ರೂ. ಗಳಿಗೆ ಲಭ್ಯವಾದರೆ, ಬೋಟ್ ವೇವ್ ಲಿಂಕ್ ಕಾಲಿಂಗ್ ಸ್ಮಾರ್ಟ್‌ವಾಚ್ 1,999 ರೂ. ಗಳಿಗೆ ಸಿಗಲಿದೆ. ಹಾಗೆಯೇ ರೆಡ್ಮಿ 10 ಎ ಸ್ಪೋರ್ಟ್ ಮೊಬೈಲ್ ಅನ್ನು 10,499 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
HDFC ಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ ವಿಶೇಷ ಆಫರ್
ಈ ಸೇಲ್‌ನಲ್ಲಿ ಯಾರೆಲ್ಲಾ HDFC ಬ್ಯಾಂಕ್‌ನ ಕಾರ್ಡ್‌ನಲ್ಲಿ ಆಪಲ್ ಡಿವೈಸ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೋ ಅವರು ಭರ್ಜರಿ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಅದರಲ್ಲಿ 52,600 ರೂ. ಗಳ ಬೆಲೆಯಿಂದ ಆರಂಭವಾಗುವ ಐಫೋನ್‌ಗಳು ಹಾಗೂ 73,900 ರೂ. ಗಳ ಬೆಲೆಯಿಂದ ಆರಂಭವಾಗುವ ಮ್ಯಾಕ್‌ಬುಕ್ ಮೇಲೆ ಸಾಕಷ್ಟು ರಿಯಾಯಿತಿ ಲಭ್ಯವಾಗಲಿದೆ. ಇದಿಷ್ಟೇ ಅಲ್ಲದೆ ಬಳಕೆದಾರರು ಕ್ಯಾಶ್‌ಬ್ಯಾಕ್ ಸಹ ಪಡೆದುಕೊಳ್ಳಬಹುದು.

ಧರಿಸಬಹುದಾದ ಡಿವೈಸ್‌ಗಳಿಗೆ ಏನೆಲ್ಲಾ ಆಫರ್
ಇನ್ನು 1,399 ರೂ.ಗಳಿಗೂ ಹೆಚ್ಚಿನ ಬೆಲೆ ಇರುವ ಸ್ಮಾರ್ಟ್‌ವಾಚ್‌ಗಳನ್ನು ಹಾಗೂ ಇಯರ್‌ಫೋನ್, ಇಯರ್‌ಬಡ್ಸ್ ಮತ್ತು ನೆಕ್‌ಬ್ಯಾಂಡ್ ಖರೀದಿ ಮಾಡಲು ಮುಂದಾದರೆ ಅವರು 399 ರೂ. ಗಳಿಂದ ಆರಂಭವಾಗಿ 70% ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.
ಸ್ಮಾರ್ಟ್‌ಟಿವಿಗಳಿಗೆಷ್ಟಿಗೆ ಡಿಸ್ಕೌಂಟ್?
ವಿಜಯ್ ಸೇಲ್ಸ್ ನಲ್ಲಿ ಟಿವಿಗಳು, ಹೋಮ್ ಆಡಿಯೊ ಸಿಸ್ಟಮ್‌ಗಳು ಮತ್ತು ಸ್ಪೀಕರ್‌ಗಳ ಮೇಲೆ 65% ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ಹೆಚ್‌ಡಿ ರೆಡಿ ಸ್ಮಾರ್ಟ್ ಟಿವಿಗಳು 40% ವರೆಗೆ ರಿಯಾಯಿತಿ ಪಡೆದುಕೊಂಡಿವೆ. ಹಾಗೆಯೇ ಹೋಮ್ ಆಡಿಯೊ ಸಿಸ್ಟಮ್‌ಗಳು 3,299 ರೂ. ಗಳ ಬೆಲೆಯಿಂದ ಪ್ರಾರಂಭವಾದರೆ, ಪೋರ್ಟಬಲ್ ಸ್ಪೀಕರ್‌ಗಳು 999 ರೂ. ಗಳ ಬೆಲೆಯಿಂದ ಪ್ರಾರಂಭವಾಗುತ್ತವೆ.

ಇಎಮ್‌ಐ ಖರೀದಿಯಲ್ಲಿ ರಿಯಾಯಿತಿ ಎಷ್ಟು?
- ಇನ್ನು ಪ್ರಮುಖ ಬ್ಯಾಂಕ್ ಗಳ ಕಾರ್ಡ್ ಮೇಲೂ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಈ ಮೂಲಕ HSBC ಬ್ಯಾಂಕ್ ಕಾರ್ಡ್ ಹೊಂದಿರುವವರು 20,000 ರೂ. ಗಳಿಗಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳಲ್ಲಿ 7,500 ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದಾಗಿದೆ.
- ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 15,000 ರೂ. ಗಳು ಹಾಗೂ ಅದಕ್ಕಿಂತ ಹೆಚ್ಚಿನ ಇಎಮ್‌ಐ ವಹಿವಾಟುಗಳ ಮೇಲೆ 2,000 ರೂ. ಅಥವಾ 5% ತ್ವರಿತ ರಿಯಾಯಿತಿ ಪಡೆಯಬಹುದು.
- ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಹೊಂದಿರುವವರು 40,000 ರೂ. ಗಳು ಅಥವಾ ಅದಕ್ಕಿಂತ ಹೆಚ್ಚಿನ ಇಎಮ್‌ಐ ವಹಿವಾಟುಗಳ ಮೇಲೆ 2,500 ರೂ. ವರೆಗಿನ ರಿಯಾಯಿತಿ ಪಡೆಯಬಹುದಾಗಿದೆ. ಹಾಗೆಯೇ 40,000 ರೂ. ಗಳಿಗಿಂತ ಕಡಿಮೆ ವಹಿವಾಟಿನಲ್ಲಿ 1,500 ರೂ. ಗಳ ರಿಯಾಯಿತಿ ಪಡೆಯಬಹುದು.
- ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಾರ್ಡ್ ಹೊಂದಿರುವವರು ಕ್ರೆಡಿಟ್ ಕಾರ್ಡ್ ಎಎಮ್ಐ ವಹಿವಾಟುಗಳ ಮೇಲೆ 5% ತ್ವರಿತ ರಿಯಾಯಿತಿಯನ್ನು ಅಥವಾ 5,000 ರೂ. ಗಳ ವರೆಗಿನ ರಿಯಾಯಿತಿ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಾಹಕರು 10,000 ರೂ. ಗಳಿಗೂ ಮೇಲ್ಪಟ್ಟು ಖರೀದಿ ಮಾಡಬೇಕಿದೆ.

ಲಾಯಲ್ಟಿ ರಿವಾರ್ಡ್ ಪಾಯಿಂಟ್ ಲಭ್ಯ
ಈ ಎಲ್ಲಾ ಆಫರ್ ಜೊತೆಗೆ ಗ್ರಾಹಕರು ಈ ವಿಶೇಷ ಸೇಲ್‌ನಲ್ಲಿ ಪ್ರತಿ ಶಾಪಿಂಗೂ ಸಹ ಖರೀದಿ ಮೌಲ್ಯದ ಮೇಲೆ 0.75% ನಷ್ಟು MyVS ಲಾಯಲ್ಟಿ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದಾಗಿದೆ. ಈ ಮೂಲಕ ಪ್ರತಿ ಪಾಯಿಂಟ್‌ಗೆ 1 ರೂ. ನಂತೆ ರಿಡೀಮ್ ಮಾಡಬಹುದಾಗಿದೆ.


Click it and Unblock the Notifications








