ಪ್ರೇಮಿಗಳಿಗೆ ಸಿಹಿ ಸುದ್ದಿ: ಎರಡು ಉಚಿತ ಸಿನಿಮಾ ಟಿಕೆಟ್ ನೀಡುತ್ತೆ ಫ್ಲಿಪ್‌ಕಾರ್ಟ್!
ಪ್ರೇಮಿಗಳ ದಿನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ದಿನದ ಪ್ರಯುಕ್ತ ಕೆಲವು ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಭರ್ಜರಿ ಆಫರ್‌ಗಳನ್ನು ನೀಡುತ್ತಿವೆ. ಆದ್ರೆ, ದೈತ್ಯ ಇ ಕಾಮರ್ಸ್ ಎಂದು ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್ (Flipkart) ತಾಣವು ಪ್ರೇಮಿಗಳ ದಿನದ ಅಂಗವಾಗಿ (Valentine's Day) ಎರಡು ಉಚಿತ ಸಿನಿಮಾ ಟಿಕೆಟ್ ನೀಡುವುದಾಗಿ ತಿಳಿಸಿದ್ದು, ಭಾರೀ ಗಮನ ಸೆಳೆದಿದೆ.

ಹೌದು, ಪ್ರತಿ ವರ್ಷ ಫೆಬ್ರವರಿ 14, ಪ್ರೇಮಿಗಳ ದಿನವಾಗಿ ಆಚರಣೆ ಮಾಡಲಾಗುತ್ತದೆ. ವಿಶೇಷ ದಿನಗಳಂದು ಇ ಕಾಮರ್ಸ್ ವೆಬ್‌ಸೈಟ್‌ಗಳು ಒಂದಿಲ್ಲೊಂದು ಕೊಡುಗೆ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಸದ್ಯ ಫ್ಲಿಪ್‌ಕಾರ್ಟ್ ತಾಣವು ಪ್ರೇಮಿಗಳ (Flipkart Valentine's Day offer) ದಿನ ಪ್ರಯುಕ್ತ ಕನಿಷ್ಠ 800 ರೂ. ಮೌಲ್ಯದ ಉತ್ಪನ್ನ ಆರ್ಡರ್ ಮಾಡಿದರೆ, ಎರಡು ಉಚಿತ ಸಿನಿಮಾ ಟಿಕೆಟ್ ನೀಡುತ್ತದೆ ಎಂದು 91ಮೊಬೈಲ್ಸ್ ವರದಿ ಮಾಡಿದೆ.
ಫ್ಲಿಪ್‌ಕಾರ್ಟ್ ವ್ಯಾಲಂಟೈನ್ಸ್ ಡೇ ಆಫರ್
ಫ್ಲಿಪ್‌ಕಾರ್ಟ್ ನೀಡುತ್ತಿರುವ ಎರಡು ಉಚಿತ ಸಿನಿಮಾ ಟಿಕೆಟ್‌ಗಳನ್ನು ಪಡೆಯಲು ಗ್ರಾಹಕರು 800 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸೌಂದರ್ಯ ಉತ್ಪನ್ನಗಳು ಅಥವಾ ಚಾಕೊಲೇಟ್‌ಗಳನ್ನು ಖರೀದಿಸಬೇಕಾಗುತ್ತದೆ. ಇನ್ನು ಲಭ್ಯವಿರುವ ಟಿಕೆಟ್‌ಗಳು ಸೋಮವಾರದಿಂದ ಗುರುವಾರದವರೆಗೆ ಎಲ್ಲಾ ಆಟಗಳು/ ಪ್ರದರ್ಶನಗಳು ಮತ್ತು ವಾರಾಂತ್ಯದ ದಿನಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಬೆಳಗ್ಗೆಯ ಆಟ/ ಪ್ರದರ್ಶನ ಒಳಗೊಂಡಿರುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.

ಫ್ಲಿಪ್‌ಕಾರ್ಟ್ ಉಚಿತ ಸಿನಿಮಾ ಟಿಕೆಟ್ ಯಾರಿಗೆ ಲಭ್ಯ?
ಫ್ಲಿಪ್‌ಕಾರ್ಟ್ ನೀಡುತ್ತಿರುವ ಎರಡು ಉಚಿತ ಸಿನಿಮಾ ಟಿಕೆಟ್‌ಗಳ ಕೊಡುಗೆಯನ್ನು ಪಡೆಯಲು ಅರ್ಹರಾಗಲು, ಗ್ರಾಹಕರು ಕನಿಷ್ಠ 18 ವರ್ಷ ಅಥವಾ ಹೆಚ್ಚಿನ ವಯಸ್ಸು ಹೊಂದಿದವರಾಗಿರಬೇಕು. ಹಾಗೆಯೇ ಅವರ ಹೆಸರಿನಲ್ಲಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಖಾತೆಯನ್ನು ಹೊಂದಿರಬೇಕು.
ಆಫರ್ ಎಷ್ಟು ದಿನ ಇರುತ್ತೆ?
ಫ್ಲಿಪ್‌ಕಾರ್ಟ್‌ನ ಈ ಕೊಡುಗೆ ಸೀಮಿತ ಅವಧಿಯದ್ದಾಗಿದೆ. ಅಂದಹಾಗೆ ಫ್ಲಿಪ್‌ಕಾರ್ಟ್ ಆಫರ್ ಪುಟವು ಈಗ ಲೈವ್ ಆಗಿದೆ. ಈ ಕೊಡುಗೆಯನ್ನು ಪಡೆಯಲು ಗ್ರಾಹಕರು ಫೆಬ್ರವರಿ 14, ರಾತ್ರಿ 11.59 ರ ಒಳಗೆ ಖರೀದಿಯನ್ನು ಮಾಡಬೇಕಾಗುತ್ತದೆ. ಗಮನಿಸಬೇಕಾದ ಸಂಗತಿ ಅಂದ್ರೆ, ಕೂಪನ್ ಇದೇ ಏಪ್ರಿಲ್ 30 ರವರೆಗೆ ಮಾನ್ಯವಾಗಿರುತ್ತದೆ.

ಫ್ಲಿಪ್‌ಕಾರ್ಟ್‌ನ ಉಚಿತ ಸಿನಿಮಾ ಟಿಕೆಟ್ ಪಡೆಯಲು ಈ ಕ್ರಮ ಅನುಸರಿಸಿ:
* ಫ್ಲಿಪ್‌ಕಾರ್ಟ್‌ನಲ್ಲಿ ಈವೆಂಟ್ ಪುಟಕ್ಕೆ ಹೋಗಿ. ಬಳಿಕ 800 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಯನ್ನು ಮಾಡಿ.
* ಆ ನಂತರ ನಿಮಗೆ ಇಮೇಲ್ ಅಥವಾ ಟೆಕ್ಸ್ಟ್ ಮೂಲಕ ಡೆಲಿವರಿ ವೋಚರ್ ಅನ್ನು ಕಳುಹಿಸಲಾಗುತ್ತದೆ
* ಆ ಬಳಿಕ ನೀವು ಕೂಪನ್ ಅನ್ನು ಸ್ಕ್ರಾಚ್ ಮಾಡಬೇಕು ಮತ್ತು ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
* ಅಲ್ಲಿ ಫೋನ್ ಸಂಖ್ಯೆ, ಇಮೇಲ್ ವಿಳಾಸ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.

* ಈಗ ನೀವು ವೋಚರ್ ಮೂಲಕ ಸ್ವೀಕರಿಸಿದ ಕೋಡ್ ಅನ್ನು ನಮೂದಿಸಿ ಮತ್ತು 'ಸಲ್ಲಿಸು' ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಆ ನಂತರ ನೀವು 24 ಗಂಟೆಗಳ ಒಳಗೆ ಇಮೇಲ್ ಅಥವಾ ಟೆಕ್ಸ್ಟ್ ಮೂಲಕ OTP ಅನ್ನು ಸ್ವೀಕರಿಸುತ್ತೀರಿ.
* ಈಗ, ನೀವು ಎರಡು ಸಿನಿಮಾ, ಥಿಯೇಟರ್, ದಿನಾಂಕ ಮತ್ತು ಶೋ ಸಮಯವನ್ನು ಆಯ್ಕೆ ಮಾಡಬಹುದು
* ಶೋ ಪ್ರಾರಂಭವಾಗುವ 24 ಗಂಟೆಗಳ ಮೊದಲು ನೀವು ಸಿನಿಮಾ ಟಿಕೆಟ್‌ಗಳನ್ನು ಸ್ವೀಕರಿಸುತ್ತೀರಿ.


Click it and Unblock the Notifications








