Home
ಸುದ್ದಿಜಾಲ

ಪ್ರೇಮಿಗಳ ದಿನಕ್ಕೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ ಅನ್ನು ಗಿಫ್ಟ್‌ ಕೊಡಬಹುದು?: ಇಲ್ಲಿದೆ ಲಿಸ್ಟ್‌!

ಪ್ರೇಮಿಗಳ ದಿನಕ್ಕೆ ಸಾಮಾನ್ಯವಾಗಿ ಅತ್ಯುತ್ತಮವಾದ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ ಸಂಗತಿ. ಅದರಲ್ಲೂ ಈ ಉಡುಗೊರೆ ಉದ್ದೇಶಕ್ಕೆ ಈಗಂತೂ ಬೆಲೆ ಬಾಳುವ ಸ್ಮಾರ್ಟ್‌ಫೋನ್‌, ಟ್ಯಾಬ್‌ ಹಾಗೂ ಇನ್ನಿತರೆ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿವೆ. ಇದರ ನಡುವೆ ನೀವು ಸಹ ಸ್ಮಾರ್ಟ್‌ಫೋನ್‌ ಖರೀದಿ ಮಾಡಿ ನಿಮ್ಮ ಪ್ರೇಮಿಗೆ ಉಡುಗೊರೆ ನೀಡಬಹುದು.

ಪ್ರೇಮಿಗಳ ದಿನಕ್ಕೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ ಅನ್ನು ಗಿಫ್ಟ್‌ ಕೊಡಬಹುದು?

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಹಲವಾರು ಫೋನ್‌ಗಳು ವಿವಿಧ ಆಕರ್ಷಕ ಫೀಚರ್ಸ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ವಿಶೇಷ ಅನುಭವ ನೀಡಲಿವೆ. ಇದರ ನಡುವೆ ನಿಮ್ಮ ಪ್ರೀತಿಪಾತ್ರರು ಮೆಚ್ಚುವಂತಹ ಸ್ಮಾರ್ಟ್‌ಫೋನ್ ಖರೀದಿ ಮಾಡಿ ಅವರಿಗೆ ಕೊಡಲು ಹಲವಾರು ಆಯ್ಕೆಗಳಿವೆ. ಆದರೆ, ಯಾವ ಫೋನ್‌ ಖರೀದಿ ಮಾಡಬೇಕು ಎಂಬ ಗೊಂದಲ ನಿಮ್ಮಲ್ಲಿ ಇದ್ದರೆ ಇಲ್ಲಿದೆ ನೋಡಿ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಪಟ್ಟಿ.

ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಆವೃತ್ತಿ

ಮಾರುಕಟ್ಟೆಯಲ್ಲಿ ಸದ್ಯಕ್ಕೆ ಹೆಚ್ಚಾಗಿ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್‌ ಎಂದರೆ ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಆವೃತ್ತಿ. ಈ ಸ್ಮಾರ್ಟ್‌ಫೋನ್‌ ಈಗಷ್ಟೇ ಲಾಂಚ್‌ ಆಗಿದ್ದು, ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಿಕೊಳ್ಳಲು ಇದು ಖಂಡಿತಾ ಉತ್ತಮವಾದ ಡಿವೈಸ್‌ ಆಗಿರಲಿದೆ. ಅದರಂತೆ ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್ 16MP ಸೆಲ್ಫಿ ಕ್ಯಾಮೆರಾ ಹಾಗೂ108MP ರಿಯರ್‌ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 8GB +128GB ವೇರಿಯಂಟ್‌ನಲ್ಲಿ ಲಭ್ಯ ಇರುವ ಈ ಫೋನ್‌ ಬೆಲೆ 20,999 ರೂ. ಗಳು, ಇದನ್ನು ಫ್ಲಿಪ್‌ಕಾರ್ಟ್‌ ಹಾಗೂ ರಿಯಲ್‌ಮಿ ಯ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

ಪ್ರೇಮಿಗಳ ದಿನಕ್ಕೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ ಅನ್ನು ಗಿಫ್ಟ್‌ ಕೊಡಬಹುದು?

ವಿವೋ V21e

ವಿವೋ V21e ಸ್ಮಾರ್ಟ್‌ಫೋನ್‌ ಅನ್ನು ಸಹ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 64MP+8MP ರಿಯರ್ ಕ್ಯಾಮರಾ ಹಾಗ 32MP ಸೆಲ್ಫಿ ಕ್ಯಾಮೆರಾದ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 8GB+128GB ವೇರಿಯಂಟ್‌ನಲ್ಲಿ ಈ ಫೋನ್‌ ಲಭ್ಯವಿದ್ದು, ನೀವು ಇದಕ್ಕೆ 23,990 ರೂ. ಗಳನ್ನು ನೀಡಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮೂಲಕ ಕೊಂಡುಕೊಳ್ಳಬಹುದು.

ಐಕ್ಯೂ 7 5G

ಐಕ್ಯೂ 7 5G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್‌ ಆಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 870 5GP ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 16MP ಸೆಲ್ಫಿ ಕ್ಯಾಮೆರಾದೊಂದಿಗೆ 48 MP + 13MP ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಅದರಂತೆ 8GB+128GB + 8GB+256GB ವೇರಿಯಂಟ್‌ ನಲ್ಲಿ ಖರೀದಿಮಾಡಬಹುದಾಗಿದ್ದು, ಇದರ ಸಾಮಾನ್ಯ ದರ 24,990 ರೂ. ಗಳಾಗಿದೆ.

ಪ್ರೇಮಿಗಳ ದಿನಕ್ಕೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ ಅನ್ನು ಗಿಫ್ಟ್‌ ಕೊಡಬಹುದು?

ಮೊಟೊರೊಲಾ ಎಡ್ಜ್‌ 30

ಮೊಟೊರೊಲಾ ಎಡ್ಜ್‌ 30 ಸ್ಮಾರ್ಟ್‌ಫೋನ್‌ ಅನ್ನು ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡುವ ಪ್ರಮುಖ ಆಯ್ಕೆಯಾಗಿ ಪರಿಗಣಿಸಬಹುದು. ಈ ಫೋನ್ ಸ್ನಾಪ್‌ಡ್ರಾಗನ್ 778G+ 5G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 50MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರೊಂದಿಗೆ 6GB+128GB ಮತ್ತು 8GB+128GB ಯ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. ಇದಕ್ಕೆ ನೀವು 24,999 ರೂ. ಗಳ ಬೆಲೆ ನೀಡಿ ಖರೀದಿ ಮಾಡಬಹುದಾಗಿದೆ.

ರೆಡ್ಮಿ ನೋಟ್‌ 12 ಪ್ರೊ 5G

ರೆಡ್ಮಿ ನೋಟ್‌ 12 ಪ್ರೊ 5G ಸ್ಮಾರ್ಟ್‌ಫೋನ್‌ ಆಕರ್ಷಕ ಶೈಲಿಯನ್ನು ಹೊಂದಿದ್ದು, ನಿಮ್ಮ ಪ್ರೀತಿ ಪಾತ್ರರಿಗೆ ಖಂಡಿತಾ ಇಷ್ಟವಾಗುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080ಸ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50MP+8MP+2MP ನ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗೆಯೇ 8GB+256GB, 8GB+128GB, 6GB+128GBಯ ಮೂರು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ 24,999 ರೂ. ಗಳನ್ನು ನೀಡುವ ಮೂಲಕ ಈ ಸ್ಮಾರ್ಟ್‌ಫೋನ್‌ ಖರೀದಿ ಮಾಡಿ ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಿಕೊಳ್ಳಬಹುದು.

Best Mobiles in India

English summary
If you're searching for the best Valentine's Day gift for your tech-savvy partner, here's a list of top smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+