Smartwatch: ಪ್ರೇಮಿಗಳ ದಿನ ಹಿನ್ನೆಲೆ ನಿಮ್ಮ ಸಂಗಾತಿಗೆ ಗಿಫ್ಟ್ ನೀಡಲು ಬೆಸ್ಟ್ ಸ್ಮಾರ್ಟ್‌ವಾಚ್‌ಗಳಿವು!
ಪ್ರೇಮಿಗಳ ದಿನಕ್ಕೆ (Valentine's Day) ಕ್ಷಣಗಣನೆ ಆರಂಭ ಆಗಿದೆ. ಈ ನಡುವೆ ಸಾಕಷ್ಟು ಯುವಕ ಯುವತಿಯರು ತಮ್ಮ ತಮ್ಮ ಸಂಗಾತಿಗೆ ಉತ್ತಮವಾದ ಉಡುಗೊರೆ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಅದರಲ್ಲೂ ಬಹುಪಾಲು ಪ್ರೇಮಿಗಳು ಸ್ಮಾರ್ಟ್‌ಡಿವೈಸ್ ಅದರಲ್ಲೂ ಸ್ಮಾರ್ಟ್‌ವಾಚ್ (Smartwatch) ಖರೀದಿ ಮಾಡುವುದು ಸಾಮಾನ್ಯವಾದ ಸಂಗತಿಯಾಗಿದೆ.
ಹೌದು, ಪ್ರೇಮ ನಿವೇದನೆ ಮಾಡಲು ಅಥವಾ ಪ್ರೀತಿ ಮಾಡಿ ವಿವಾಹ ಆಗಿರುವ ಜೋಡಿಗಳು ತಮ್ಮ ತಮ್ಮ ಸಂಗಾತಿಯ ಮುಖದಲ್ಲಿ ಸಂತಸ ನೋಡಲು ವಿವಿಧ ಸ್ಮಾರ್ಟ್ ಡಿವೈಸ್‌ಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಈ ವೇಳೆ ನೀವೇನಾದರೂ ಸ್ಮಾರ್ಟ್‌ವಾಚ್ ಖರೀದಿ ಮಾಡಲು ಮುಂದಾದರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಹಾಗಿದ್ರೆ, ಬನ್ನಿ ನಿಮ್ಮ ಸಂಗಾತಿ ಮೆಚ್ಚುವಂತ ವಾಚ್‌ಗಳ ಫೀಚರ್ಸ್, ಬೆಲೆ ಹಾಗೂ ಇನ್ನಿತರೆ ವಿಷಯಗಳನ್ನು ತಿಳಿದುಕೊಳ್ಳಿ.

ನಾಯ್ಸ್ ಫಿಟ್ ಹ್ಯಾಲೊ ಸ್ಮಾರ್ಟ್‌ವಾಚ್: ಈ ಸ್ಮಾರ್ಟ್‌ವಾಚ್ (NoiseFit Halo Smartwatch) 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ವಾಚ್ ಸಹ ಏಳು ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ 5.3 ಸೌಲಭ್ಯ ಪಡೆದಿದ್ದು, ಉತ್ತಮ ಕರೆ ಮತ್ತು ಸಂಪರ್ಕಕ್ಕಾಗಿ ಅನುಕೂಲ ನೀಡಲಿದೆ. ಜೊತೆಗೆ IP68-ರೇಟೆಡ್ ನೊಂದಿಗೆ ಕಾಣಿಸಿಕೊಂಡಿದ್ದು, ಈ ಸ್ಮಾರ್ಟ್‌ವಾಚ್ ಅನ್ನು ನೀವು ವಿಜಯ್ ಸೇಲ್ಸ್ ನಲ್ಲಿ 2,499 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಬೋಟ್ ಲೂನಾರ್ ಪ್ರೈಮ್: ಬೋಟ್ ನ ಲೂನಾರ್ ಪ್ರೈಮ್ ಸ್ಮಾರ್ಟ್‌ವಾಚ್ (Boat Lunar Prime) 1.45 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 550nits ಗರಿಷ್ಠ ಬ್ರೈಟ್‌ನೆಸ್ ಹೊಂದಿಎದ. ಇದರೊಂದಿಗೆ ಏಳು ದಿನಗಳ ಬ್ಯಾಟರಿ ಬ್ಯಾಕಪ್ ಸಿಗಲಿದ್ದು, ಉತ್ತಮ ಆರೋಗ್ಯ-ಟ್ರ್ಯಾಕಿಂಗ್ ಸೆನ್ಸರ್‌ನೊಂದಿಗೆ IP67 ರೇಟಿಂಗ್ ಅನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್ ಅನ್ನು ನೀವು ಬೋಟ್‌ನ ಅಧಿಕೃತ ಸೈಟ್ ಮೂಲಕ 2,199 ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಎಂಡೆಪೊ ಎನ್‌ಫಿಟ್ ನಿಯೋ ಪ್ರೊ: ಸುಪ್ರಸಿದ್ಧ ಕ್ಯುಪರ್ಟಿನೊ ನಿಂದ ಪ್ರೇರಿತವಾದ ಪ್ರೊಡಕ್ಟ್‌ಗಳನ್ನು ಸರ್ಚ್ ಮಾಡುತ್ತಿರುವವರಿಗೆ ಈ ವಾಚ್ (Endefo Enfit NEO Pro) ಉತ್ತಮ ಆಯ್ಕೆ ಆಗಿರಲಿದೆ. ಈ ವಾಚ್ 1.69 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಬ್ಲೂಟೂತ್ ಕರೆ ಮತ್ತು 230mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿದೆ. ಅದರಂತೆ ಈ ವಾಚ್ ಅನ್ನು 2,499 ರೂ.ಗಳ ಬೆಲೆಗೆ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ನ ಅಧಿಕೃತ ಸೈಟ್‌ನಲ್ಲಿ ಕೊಂಡುಕೊಳ್ಳಬಹುದಾಗಿದೆ.
ಬೌಲ್ಟ್ ಸ್ಟರ್ಲಿಂಗ್ ಪ್ರೊ: ಬೌಲ್ಟ್‌ನ ಈ ಸ್ಮಾರ್ಟ್‌ವಾಚ್ (Boult Sterling Pro) 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು ಆಲ್‌ವೇಸ್ ಆನ್ ಫೀಚರ್ಸ್ ಪಡೆದಿದೆ. ಇದರೊಂದಿಗೆ IP68 ರೇಟಿಂಗ್, ಬ್ಲೂಟೂತ್ ಆವೃತ್ತಿ 5.3 ಮತ್ತು ಆರೋಗ್ಯ-ಟ್ರ್ಯಾಕಿಂಗ್ ಸೂಟ್ ಅನ್ನು ಪಡೆದಿದ್ದು, ಈ ವಾಚ್ ಅನ್ನು ಬ್ರ್ಯಾಂಡ್‌ನ ಅಧಿಕೃತ ಸೈಟ್‌ನಲ್ಲಿ 2,199 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಚುಂಬಕ್ ವುಮೆನ್ಸ್ ಸ್ಮಾರ್ಟ್‌ವಾಚ್: ಈ ವಿಶೇಷ ಸ್ಮಾರ್ಟ್‌ವಚ್ (Chumbak Women's Smartwatch) 1.83 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಏಳು ದಿನಗಳ ಬ್ಯಾಟರಿ ಬ್ಯಾಕಪ್ ಸೌಲಭ್ಯದೊಂದಿಗೆ ಆರೋಗ್ಯ-ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಪಡೆದಿದೆ. ಜೊತೆಗೆ ನೋಡಲು ತುಂಬಾ ಆಕರ್ಷಕವಾಗಿದೆ. ಇದನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಮೂಲಕ 1,895 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಹ್ಯಾಮರ್ ಆಕ್ಟಿವ್ 2.0 ಪ್ಲಸ್: ಹ್ಯಾಮರ್‌ನ ಈ ಸ್ಮಾರ್ಟ್‌ವಾಚ್ (Hammer Active 2.0 Plus) IP67-ರೇಟೆಡ್ ಹೊಂದಿದ್ದು, ಇದರ ಜೊತೆಗೆ ಕರೆಗಳಿಗೆ ಪ್ರತಿಕ್ರಿಯಿಸಲು ಗೆಸ್ಚರ್ ಕಂಟ್ರೋಲ್ ಆಯ್ಕೆ ಪಡೆದಿದೆ. ಅಲ್ಲದೆ ಡೈನಾಮಿಕ್ ಸ್ಮಾರ್ಟ್ ಐಲ್ಯಾಂಡ್ ಕಾರ್ಯ ಮತ್ತು ಆರೋಗ್ಯ ಮೇಲ್ವಿಚಾರಣಾ ಸೆನ್ಸರ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡಲಿದೆ. ಈ ವಾಚ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 2,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








