Home
ಸುದ್ದಿಜಾಲ

ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು...ನಿಮ್ಮ ಪ್ರೀತಿ ಪಾತ್ರರಿಗೆ ಈ ಸ್ಮಾರ್ಟ್‌ ಗಿಫ್ಟ್‌ ಕೊಡಿ!

ವ್ಯಾಲೆಂಟೈನ್ಸ್ ಡೇ ಇನ್ನೇನು ಬಂದೇ ಬಿಡ್ತು. ಈ ವಿಶೇಷ ದಿನವನ್ನು ಸಂಭ್ರಮಿಸಲು ಪ್ರೇಮಿಗಳಂತೂ ಕಾತುರರಾಗಿರುತ್ತಾರೆ. ಅನೇಕರು ವ್ಯಾಲೆಂಟೈನ್ಸ್ ಡೇ ನಿಮಿತ್ತ ತಮ್ಮ ಪ್ರೀತಿ ಪಾತ್ರರಿಗೆ ಏನಾದರು ಉಡುಗೊರೆ ಕೊಡಬೇಕು ಎಂದು ಬಯಸುತ್ತಾರೆ. ಹೀಗೆ ನೀವು ಕೂಡಾ ನಿಮ್ಮ ಪ್ರೀತಿ ಪಾತ್ರರಿಗೆ ಅತ್ಯುತ್ತಮ ಗಿಫ್ಟ್‌ ಕೊಡಬೇಕಕು ಅಂತಾ ಪ್ಲ್ಯಾನ್‌ ಮಾಡಿದ್ರೆ, ಈ ಲೇಖನ ನಿಮಗೆ ಸೂಕ್ತ ತಾಣ ಎನ್ನಬಹುದು.

ಹೌದು, ವ್ಯಾಲೆಂಟೈನ್ಸ್ ಡೇ ಗೆ ನಿಮ್ಮ ಹುಡುಗ ಅಥವಾ ಹುಡುಗಿಗೆ ಸ್ಮಾರ್ಟ್‌ ಗ್ಯಾಜೆಟ್‌ ಉತ್ಪನ್ನವನ್ನು ಉಡುಗೊರೆಯಾಗಿ ನೀಡಬಹುದು. ಏಕೆಂದರೆ, ಪ್ರಸ್ತುತ ಕೆಲವು ಗ್ಯಾಜೆಟ್‌ಗಳು ದೈನಂದಿನ ಜೀವನದಲ್ಲಿ ಅಗತ್ಯ ಎನಿಸಿವೆ. ಅಂತಹ ಸ್ಮಾರ್ಟ್‌ ಗ್ಯಾಡ್ಜೆಟ್ಸ್‌ ನೀಡುವ ಮೂಲಕ ನೀವು ಈ ವ್ಯಾಲೆಂಟೈನ್ಸ್ ಡೇ ಗೆ ಅವರಿಗೆ ಇನ್ನಷ್ಟು ಖುಷಿ ಕೊಡಬಹುದು. ಹಾಗಾದರೇ ಈ ಲೇಖನದಲ್ಲಿ ತಿಳಿಸಲಾಗಿರುವ ಕೆಲವು ಸ್ಮಾರ್ಟ್‌ ಗ್ಯಾಜೆಟ್‌ ಗಿಫ್ಡ್‌ ಐಡಿಯಾ ಗಮನಿಸಿ. ಮುಂದೆ ಓದಿರಿ.

ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು...ಪ್ರೀತಿ ಪಾತ್ರರಿಗೆ ಈ ಗಿಫ್ಟ್‌ ಕೊಡಿ!

ಸ್ಮಾರ್ಟ್‌ ರಿಂಗ್‌

ಇತ್ತೀಚಿಗೆ ಸ್ಮಾರ್ಟ್‌ ರಿಂಗ್ ಡಿವೈಸ್‌ ಮಾರುಕಟ್ಟೆಯಲ್ಲಿ ಹೆಚ್ಚು ಗಮನ ಸೆಳೆದಿದೆ. ಹಲವು ಬ್ರ್ಯಾಂಡ್‌ಗಳು ಸ್ಮಾರ್ಟ್‌ ರಿಂಗ್ ಪರಿಚಯಿಸಿವೆ. ಅವುಗಳ ಪೈಕಿ ಬೋಟ್‌ ಸ್ಮಾರ್ಟ್‌ರಿಂಗ್ ಸಹ ಒಂದು. ಈ ಡಿವೈಸ್‌ ಅನ್ನು ನೀವು ಉಡುಗೊರೆಯಾಗಿ ನೀಡಬಹುದು. ಇದು ಪ್ರೀಮಿಯಂ ಸೆರಾಮಿಕ್ ಮತ್ತು ಲೋಹದ ರಚನೆ ಪಡೆದಿದ್ದು, ಟಚ್‌ ಕಂಟ್ರೋಲ್‌ ಸೌಲಭ್ಯ ಪಡೆದಿದೆ.

ಈ ಸ್ಮಾರ್ಟ್‌ ರಿಂಗ್‌ ಡಿವೈಸ್ ದೈನಂದಿನ ಚಟುವಟಿಕೆಗಳು, ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್ ಮಾಡುತ್ತದೆ. ಅಲ್ಲದೇ ಇದು ಸುರಕ್ಷತೆಗಾಗಿ ತುರ್ತು SOS ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ.

ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು...ಪ್ರೀತಿ ಪಾತ್ರರಿಗೆ ಈ ಗಿಫ್ಟ್‌ ಕೊಡಿ!

ರೇಜರ್ Anzu ಸ್ಮಾರ್ಟ್ ಗ್ಲಾಸ್‌

ಸದ್ಯ ಸ್ಮಾರ್ಟ್‌ಗ್ಲಾಸ್‌ ಸಾಧನಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ರೇಜರ್ Anzu ಸ್ಮಾರ್ಟ್ ಗ್ಲಾಸ್‌ ಒಂದಾಗಿದ್ದು, ಇದು ಕಣ್ಣಿನ ರಕ್ಷಣೆಗಾಗಿ ಬ್ಲೂ ಲೈಟ್‌ ಫಿಲ್ಟರಿಂಗ್ ಅಥವಾ ಧ್ರುವೀಕೃತ ಸನ್ಗ್ಲಾಸ್ ಲೆನ್ಸ್‌ಗಳನ್ನು ಒಳಗೊಂಡಿದೆ. ಹಾಗೆಯೇ ವಿಶೇಷವೆಂದರೇ ಇದು ಕಡಿಮೆ ಲೇಟೆನ್ಸಿ ಆಡಿಯೋ, ಬಿಲ್ಟ್‌ಇನ್‌ ಮೈಕ್ ಮತ್ತು ಸ್ಪೀಕರ್‌ಗಳ ರಚನೆ ಪಡೆದುಕೊಂಡಿದೆ.

ಟಚ್‌ ಸೆನ್ಸಾರ್‌ನ ಇಂಟರ್ಫೇಸ್ ಸೌಲಭ್ಯವು ಮ್ಯೂಸಿಕ್‌, ಕರೆಗಳು ಮತ್ತು ವಾಯಿಸ್‌ ಅಸಿಸ್ಟಂಟ್‌ ಸುಲಭ ನಿಯಂತ್ರಣವನ್ನು ಅನುಮತಿಸುತ್ತದೆ. ಅಲ್ಲದೇ ಇದು 5 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಗ್ಲಾಸ್‌ ಮಡಚಿದಾಗ ಆಟೋಮ್ಯಾಟಿಕ್ ಆಗಿ ಪವರ್ ಸೇವಿಂಗ್ ಮಾಡುತ್ತದೆ. ಹೆಚ್ಚಿನ ಅವಧಿಯ ಗೇಮಿಂಗ್ ಸೆಷನ್‌ಗಳಿಗೆ ಅಲ್ಲದೇ ದೈನಂದಿನ ಬಳಕೆಗೂ ಸಹ ಸೂಕ್ತ ಎನಿಸುತ್ತದೆ.

ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 11 ಕ್ಯಾಮೆರಾ

ಫ್ಯೂಜಿಫಿಲ್ಮ್ ಸಂಸ್ಥೆಯ ಇನ್‌ಸ್ಟಾಕ್ಸ್ ಮಿನಿ 11 ಕ್ಯಾಮೆರಾವನ್ನು ಸಹ ಉಡುಗೊರೆಯಾಗಿ ನೀಡಬಹುದಾಗಿದೆ. ಈ ಮಿನಿ ಕ್ಯಾಮೆರಾವನ್ನು ವಿಶೇಷವಾಗಿ ಸೆಲ್ಫಿಗಳು ಮತ್ತು ಕ್ಲೋಸ್-ಅಪ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಇದು ಉತ್ತಮ ಗುಣಮಟ್ಟದ ಪ್ರಿಂಟ್‌ಗಳನ್ನು ಶೇರ್ ಮಾಡಲು ಹಾಗೂ ಉಡುಗೊರೆ ನೀಡಲು ಸೂಕ್ತವಾಗಿದೆ. ಫೋಟೋಗ್ರಫಿ ಪ್ರಿಯರಿಗೆ ಇನ್ನಷ್ಟು ಇಷ್ಟವಾಗಲಿದೆ ಈ ಮಿನಿ ಕ್ಯಾಮೆರಾ.

ಸ್ಮಾರ್ಟ್‌ ವಾಚ್‌ ಗಿಫ್ಟ್‌

ಸದ್ಯ ಸ್ಮಾರ್ಟ್‌ಫೊನ್‌ಗಳಂತೆ ಸ್ಮಾರ್ಟ್‌ ವಾಚ್‌ ಡಿವೈಸ್‌ಗಳು ಕೂಡಾ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ನಿಮ್ಮ ಪ್ರೀತಿ ಪಾತ್ರರಿಗೆ ನೀವೊಂದು ಅತ್ಯುತ್ತಮ ಸ್ಮಾರ್ಟ್‌ ವಾಚ್‌ ಉಡುಗೊರೆಯಾಗಿ ನೀಡಬಹುದು. ಇನ್ನು ಬಜೆಟ್‌ ದರದಿಂದ ದುಬಾರಿ ಪ್ರೈಸ್‌ ಟ್ಯಾಗ್‌ ವರೆಗೂ ಭಿನ್ನ ಮಾದರಿಯಲ್ಲಿ ಸ್ಮಾರ್ಟ್‌ ವಾಚ್‌ಗಳ ಆಯ್ಕೆ ಇದೆ. ಫೈರ್‌ಬೋಲ್ಟ್‌, ನಾಯಿಸ್‌, ಬೋಟ್‌ ನಂತಹ ಸಂಸ್ಥೆಯ ವಾಚ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯ.

Best Mobiles in India

English summary
Valentine's Day 2024: Top Smart gadgets gift ideas. smartwatch, mobile, smart ring and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+