ಸಿಮ್ ಕಾರ್ಡ್ ಮಾರಾಟಕ್ಕೆ ಇನ್ನು ಕಠಿಣ ನಿಯಮ; ನಿಯಮ ಮೀರಿದರೆ ದಂಡ ಫಿಕ್ಸ್!
ಸೈಬರ್/ ಡಿಜಿಟಲ್ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಡೀಲರ್‌ಗಳಿಂದ ಬೃಹತ್ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದೆ. ಅಲ್ಲದೇ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಡೀಲರ್‌ಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.
ಸಿಮ್ ಕಾರ್ಡ್ ಮಾರಾಟ ಮಾಡುವ ಡೀಲರ್‌ಗಳ ಪೊಲೀಸ್ ಪರಿಶೀಲನೆಯನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಸಿಮ್ ಕಾರ್ಡ್ ವಿತರಕರ ಪರಿಶೀಲನೆಯನ್ನು 'ಪರವಾನಗಿದಾರರು' ಅಥವಾ ಆಯಾ ಟೆಲಿಕಾಂ ಆಪರೇಟರ್‌ಗಳು ನಡೆಸುತ್ತಾರೆ. ಒಂದು ವೇಳೆ ಈ ನಿಯಮ ಉಲ್ಲಂಘಿಸುವವರಿಗೆ 10 ಲಕ್ಷ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಸ್ತಾವಿತ ನಿಯಮದ ಪ್ರಕಾರ, ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿಗಳು) ನೋಂದಾಯಿತ ಡೀಲರ್‌ಗಳಿಗೆ ಮಾತ್ರ ಸಿಮ್‌ಗಳನ್ನು ನೀಡುತ್ತಾರೆ ಮತ್ತು ಯಾವುದೇ ಫೌಲ್ ಪ್ಲೇಯಾದರೆ ಟೆಲಿಕಾಂಗಳು ಅವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಬಹುದು. ಮುಂದಿನ ಆರು ತಿಂಗಳಿಂದ ಒಂದು ವರ್ಷದ ಅವಧಿಯಲ್ಲಿ, ಈ ಎಲ್ಲ ನಿಯಮ ಜಾರಿಗೆ ಬಂದ ನಂತರ ದೇಶದಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುವ ನಿರೀಕ್ಷೆಗಳಿವೆ.
ಕಳೆದ 2023 ರ ಮೇನಲ್ಲಿ ಸಂಚಾರ ಸಾರ್ತಿ ಪೋರ್ಟಲ್ ಆರಂಭಿಸಿದ್ದು, ಇದ್ರಿಂದ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಮೇ 2023 ರಿಂದ ಸುಮಾರು 50 ಲಕ್ಷ ಸಂಪರ್ಕಗಳನ್ನು ನಿಷ್ಕ್ರಿಯ ಮಾಡಲಾಗಿದೆ. 67,000 ಸಿಮ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೇ 66,000 ವಾಟ್ಸಾಪ್ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದ್ದು, ಸುಮಾರು 8 ಲಕ್ಷ ಪಾವತಿ ವಾಲೆಟ್ ಖಾತೆಗಳನ್ನು ನಿಷ್ಕ್ರಿಯ ಮಾಡಲಾಗಿದೆ.
ಬಿಗಿ ನಿಯಮ ಜಾರಿ:
ಸಿಮ್ ವಿತರಕರು ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು, ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪ್ರಕ್ರಿಯೆ ಕಡ್ಡಾಯಗೊಳಲಾಗಿದೆ. ಇನ್ನು ಈ ನಿಯಮವು ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದ್ದು, ಡೀಲರ್‌ಗಳಿಗೆ ನೋಂದಾಯಿಸಲು ಮತ್ತು ಪ್ರಕ್ರಿಯೆ ಅನ್ನು ಪೂರ್ಣಗೊಳಿಸಲು ಆರು ತಿಂಗಳ ಸಮಯ ಒದಗಿಸಲಾಗುವುದು.
ಹಾಗೆಯೇ ಪ್ರಸ್ತಾವಿತ ನಿಯಮದ ಪ್ರಕಾರ, ಟೆಲಿಕಾಂಗಳು ನೋಂದಾಯಿತ ಡೀಲರ್‌ಗಳಿಗೆ ಮಾತ್ರ ಸಿಮ್‌ಗಳನ್ನು ನೀಡಲಾಗುತ್ತದೆ. ಒಂದು ವೇಳೆ ಫೌಲ್ ಪ್ಲೇಯಾದರೆ 10 ಲಕ್ಷ ರೂ.ಗಳ ದಂಡವನ್ನು ಟೆಲಿಕಾಂಗಳು ವಿತರಕರ ಮೇಲೆ ವಿಧಿಸಬಹುದು ಎಂದು ವರದಿಯಾಗಿದೆ.
ಬಳಕೆದಾರರು ಪದೇ ಪದೇ ಸಿಮ್ ಪೋರ್ಟ್ ಮಾಡಬಹುದಾ?
ಗ್ರಾಹಕರು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದಾಗಿದ್ದು, ಯಾವುದೇ ನಿರ್ಬಂಧ ಇಲ್ಲ. ಆದರೆ ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಆಗಬೇಕಾದರೂ, ಕಡಿಮೆ ಎಂದರೂ ಒಂದು ನೆಟ್‌ವರ್ಕ್ ನಲ್ಲಿ ಕನಿಷ್ಠ 90 ದಿನಗಳ ಬಳಕೆ ಮಾಡಿರಬೇಕು.
ಬಳಕೆದಾರರು ಮೊಬೈಲ್ ನಂಬರ್ ಪೋರ್ಟ್ ಮಾಡಲು ಈ ಹಂತಗಳನ್ನು ಫಾಲೋ ಮಾಡಿರಿ:
- ಸಿಮ್ ಪೋರ್ಟ್ ಮಾಡಲು UPC ಕೋಡ್ ಬೇಕಿರುತ್ತದೆ
- ಹೀಗಾಗಿ ಬಳಕೆದಾರರು ಮೊದಲು UPC ಜನರೇಟ್ ಮಾಡಬೇಕು
- ಅದಕ್ಕಾಗಿ ಕ್ಯಾಪಿಟಲ್ ಅಕ್ಷರಗಳಲ್ಲಿ PORT ಎಂದು ಬರೆದು ನಂತರ ಪೋರ್ಟ್ ಮಾಡುವ ಮೊಬೈಲ್ ಸಂಖ್ಯೆ ನಮೂದಿಸಿ.
- ಆ ಬಳಿಕ ನಮೂಸಿರುವ ಮೆಸೆಜ್ ಅನ್ನು 1900 ನಂಬರ್‌ಗೆ ಸೆಂಡ್ ಮಾಡುವುದು
- ಆ ನಂತರ ಬಳಕೆದಾರರಿಗೆ UPC ಎಸ್‌ಎಮ್‌ಎಸ್ ಲಭ್ಯ ಆಗುವುದು
- ತದ ನಂತರ ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ಮಾಡುವುದು.
- Customer Acquisition Form (CAF) ತುಂಬುವುದು ಮತ್ತು KYC ದಾಖಲಾತಿ ಒದಗಿಸುವುದು.
- ನಂತರ ಕೆಲ ದಿನಗಳಲ್ಲಿ ಸಿಮ್ ಪೋರ್ಟ್ ಆಗುವುದು.


Click it and Unblock the Notifications








