Home
ಸುದ್ದಿಜಾಲ

ಬೆಸ್ಟ್‌ ಕ್ಯಾಮೆರಾ ಇರುವ ಈ Google ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!. ಉಳಿತಾಯ ಪಕ್ಕಾ!

ಪ್ರಮುಖ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಫ್ಲಿಪ್‌ಕಾರ್ಟ್‌ನ ಈ ಸ್ಪೆಷಲ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದ ಮೊಬೈಲ್‌ಗಳ ಪೈಕಿ ಜನಪ್ರಿಯ ಹೈ ಎಂಡ್‌ ಫೋನ್‌ಗಳ ಜೊತೆಗೆ ಕೆಲವು ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಸಹ ಸೇರಿವೆ. ಅವುಗಳ ಪೈಕಿ ಗೂಗಲ್‌ ಸಂಸ್ಥೆಯ ಗೂಗಲ್‌ ಪಿಕ್ಸಲ್‌ 8 (Google Pixel 8) ಮೊಬೈಲ್‌ ಪಡೆದಿರುವ ಡಿಸ್ಕೌಂಟ್‌ ತಿಳಿದ್ರೆ, ಗ್ರಾಹಕರುಗೆ OMG ಎನ್ನುವುದು ಪಕ್ಕಾ.

ಹೌದು, ಫ್ಲಿಪ್‌ಕಾರ್ಟ್‌ (Flipkart) ಇ ಕಾಮರ್ಸ್‌ ತಾಣದಲ್ಲಿ ಸದ್ಯ ಗೂಗಲ್‌ ಪಿಕ್ಸಲ್‌ 8 (Google Pixel 8) ಫೋನ್‌ ಶೇ. 47% ರಷ್ಟು ಆಫರ್‌ ಬೆಲೆಯಲ್ಲಿ ಪಡೆದುಕೊಂಡಿದೆ. ಈ ಫೋನಿನ 8 GB RAM + 128 GB ವೇರಿಯಂಟ್‌ 39,999ರೂ. ಗಳ ಆಕರ್ಷಕ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಎಕ್ಸ್‌ಚೇಂಜ್ ಆಫರ್‌ ಸಹ ಪಡೆದುಕೊಂಡರೆ, ಈ ಫೋನ್‌ ಅನ್ನು ಮತ್ತಷ್ಟು ಆಫರ್‌ ಬೆಲೆಯಲ್ಲಿ ಖರೀದಿಸಬಹುದು.

ಬೆಸ್ಟ್‌ ಕ್ಯಾಮೆರಾ ಇರುವ ಈ Google ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!. ಉಳಿತಾಯ!

ಹಾಗೆಯೇ ಗೂಗಲ್‌ನ ಈ ಫೋನ್‌ 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿಯೂ ಲಭ್ಯ. ಇನ್ನು ಈ ಫೋನ್‌4,575mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಈ ಫೋನಿನ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ. ಹಾಗಾದರೆ ಗೂಗಲ್‌ ಪಿಕ್ಸಲ್‌ 8 ಫೋನಿನ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸಲ್‌ 8 ಫೀಚರ್ಸ್‌ ಮಾಹಿತಿ

ಗೂಗಲ್‌ ಪಿಕ್ಸಲ್‌ 8 (Google Pixel 8) ಮೊಬೈಲ್‌ 6.2 ಇಂಚಿನ OLED ಪ್ಯಾನೆಲ್ ಹೊಂದಿದ್ದು, HD+ ರೆಸಲ್ಯೂಶನ್ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್‌ ಕೂಡಾ ಪಡೆದಿದೆ. ಅಂದಹಾಗೆ ಈ ಫೋನ್‌ ಟೆನ್ಸರ್ G3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ. ಇದು 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಅಲ್ಲದೇ ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದ್ದು, ಎರಡನೇ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 10.5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ರಚನೆ ಒದಗಿಸಲಾಗಿದೆ. ಹಾಗೆಯೇ 4,575mAh ಬ್ಯಾಟರಿ ಬ್ಯಾಕ್‌ಅಪ್‌ ಇದ್ದು, 30W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

ಗೂಗಲ್‌ ಪಿಕ್ಸಲ್‌ 8 ಪ್ರೊ ಫೀಚರ್ಸ್‌
ಗೂಗಲ್‌ ಪಿಕ್ಸಲ್‌ 8 ಪ್ರೊ ಫೋನ್‌ 6.7 ಇಂಚಿನ OLED ಪ್ಯಾನೆಲ್ ಹೊಂದಿದ್ದು, 2400nits ಬ್ರೈಟ್ನೆಸ್‌ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್‌ ಕೂಡಾ ಪಡೆದಿದೆ. ಅಂದಹಾಗೆ ಈ ಫೋನ್‌ ಸಹ ಟೆನ್ಸರ್ G3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ. ಈ ಫೋನ್‌ 12GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಅಲ್ಲದೇ ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದ್ದು, ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿವೆ. ಇದರೊಂದಿಗೆ ಮುಂಭಾಗದಲ್ಲಿ 10.5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ರಚನೆ ಒದಗಿಸಲಾಗಿದೆ. ಹಾಗೆಯೇ 5050mAh ಬ್ಯಾಟರಿ ಬ್ಯಾಕ್‌ಅಪ್‌ ಇದ್ದು, 30W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

Best Mobiles in India

English summary
Very attractive Price Cut on Google Pixel 8 in Flipkart India. Check Price, Offer and more Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+