Home
ಸುದ್ದಿಜಾಲ

ಈ ರೆಡ್ಮಿ ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಸದ್ಯದಲ್ಲೇ ಸಿಗುತ್ತೆ ಸಿಹಿಸುದ್ದಿ!

ದೇಶದಲ್ಲಿ ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳು ಈಗಾಗಲೇ 5G ಸೇವೆಯನ್ನು ಪ್ರಾರಂಭಿಸಿದ್ದು, ಅನೇಕ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುತ್ತ ಸಾಗಿವೆ. ಇದೀಗ ಮೂರನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ ಸಹ 5G ಸೇವೆಗಳನ್ನು ಪರಿಚಯಿಸಲು ಸಕಲ ಸಜ್ಜಾಗಿದ್ದು, ಶಿಯೋಮಿ ಮೊಬೈಲ್‌ ಸಂಸ್ಥೆಯೊಂದಿಗೆ ಪಾಲುದಾರಿಕೆ ಘೋಷಿಸಿದೆ.

ಹೌದು, ಶಿಯೋಮಿ ಮತ್ತು ವಿ ಟೆಲಿಕಾಂ ಕಾರ್ಯತಂತ್ರದ ಪಾಲುದಾರಿಕೆ ಅನ್ನು ಘೋಷಿಸಿವೆ. ವಿ ಟೆಲಿಕಾಂ ಶೀಘ್ರದಲ್ಲೇ ದೇಶದಲ್ಲಿ ತನ್ನ 5G ಸೇವೆಗಳನ್ನು ಹೊರತರಲು ಸಿದ್ಧವಾಗಿದ್ದು, ತನ್ನ ಬಳಕೆದಾರರಿಗೆ ತಡೆರಹಿತ 5G ಸೇವೆಯ ಅನುಭವ ನೀಡಲು ಶಿಯೋಮಿ ಮೊಬೈಲ್‌ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಈ ರೆಡ್ಮಿ ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಸದ್ಯದಲ್ಲೇ ಸಿಗುತ್ತೆ ಸಿಹಿಸುದ್ದಿ!

ಬ್ರ್ಯಾಂಡ್ ಹೇಳಿಕೆಯ ಪ್ರಕಾರ, 18 ಶಿಯೋಮಿ ಫೋನ್‌ಗಳಲ್ಲಿ ವಿ ಟೆಲಿಕಾಂ 5G ಅನ್ನು ಪರೀಕ್ಷಿಸಲಾಗಿದೆ. ಈ ಫೋನ್‌ಗಳ ಬಳಕೆದಾರರು ತಮ್ಮ ನೆಟ್‌ವರ್ಕ್ ಕನೆಕ್ಷನ್‌ ಅನ್ನು 4G ನಿಂದ 5G ನೆಟ್‌ವರ್ಕ್ ಗೆ ಟಾಗಲ್ ಮಾಡಬೇಕು ಹಾಗೂ ಸೇವೆಯನ್ನು ಮುಂದುವರಿಸಬೇಕು. ಆದಾಗ್ಯೂ, ವಿ ಟೆಲಿಕಾಂನ 5G ಸೇವೆಗಳ ಬಳಕೆ ಮಾಡಲು ಬಳಕೆದಾರರು ಇನ್ನೂ ಕಾಯಬೇಕಾಗಿದೆ. ವಿ ಟೆಲಿಕಾಂನ 5G ಸೇವೆ ಬೆಂಬಲಿಸುವ ಶಿಯೋಮಿ ಫೋನ್‌ಗಳ ಲಿಸ್ಟ್‌ ಇಲ್ಲಿದೆ.

ಈ ರೆಡ್ಮಿ ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಸದ್ಯದಲ್ಲೇ ಸಿಗುತ್ತೆ ಸಿಹಿಸುದ್ದಿ!

ಶಿಯೋಮಿ 13 ಪ್ರೊ
ರೆಡ್ಮಿ ನೋಟ್‌ 12 ಪ್ರೊ 5G
ರೆಡ್ಮಿ ನೋಟ್‌ 12 ಪ್ರೊ+ 5G
ರೆಡ್ಮಿ ನೋಟ್‌ 12 5G
ಶಿಯೋಮಿ 12 ಪ್ರೊ
ಮಿ 11 ಅಲ್ಟ್ರಾ
ಮಿ 11X ಪ್ರೊ
ಶಿಯೋಮಿ 11T ಪ್ರೊ 5G
ಶಿಯೋಮಿ 11 ಲೈಟ್‌ NE 5G

ಈ ರೆಡ್ಮಿ ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಸದ್ಯದಲ್ಲೇ ಸಿಗುತ್ತೆ ಸಿಹಿಸುದ್ದಿ!

ರೆಡ್ಮಿ 11 ಪ್ರೈಮ್‌ 5G
ರೆಡ್ಮಿ K50i
ರೆಡ್ಮಿ ನೋಟ್‌ 11T 5G
ರೆಡ್ಮಿ ನೋಟ್‌ 11 ಪ್ರೊ 5G
ಮಿ 11X
ಮಿ 10
ಮಿ 10T
ಮಿ 10T ಪ್ರೊ
ಮಿ 10i

ಈ ರೆಡ್ಮಿ ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಸದ್ಯದಲ್ಲೇ ಸಿಗುತ್ತೆ ಸಿಹಿಸುದ್ದಿ!

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್‌ ಪ್ಲ್ಯಾನ್ : ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಗ್ರಾಹಕರಿಗೆ 75 GB ಡೇಟಾ ಪ್ರಯೋಜನ ಸಿಗಲಿದೆ.

ವಿ ಟೆಲಿಕಾಂನ 2899ರೂ. ಪ್ರೀಪೇಯ್ಡ್‌ ಪ್ಲಾನ್ : ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಹೆಚ್ಚುವರಿ ಯಾಗಿ ಈ ಯೋಜನೆ ಯಲ್ಲಿ ಗ್ರಾಹಕರಿಗೆ 75 GB ಡೇಟಾ ಪ್ರಯೋಜನ ಸಿಗಲಿದ್ದು, ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.

ವಿ ಟೆಲಿಕಾಂ 601ರೂ. ಪ್ರಿಪೇಯ್ಡ್‌ ಪ್ಲಾನ್‌ : ಈ ಪ್ಲಾನ್‌ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಅನಿಯಮಿತ ಕರೆ, ದಿನನಿತ್ಯ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್‌ ಪ್ರಯೋಜನ ನೀಡಲಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಹೆಚ್ಚುವರಿಯಾಗಿ 16 GB ಡೇಟಾ ಸೌಲಭ್ಯ ಪಡೆದಿದೆ.

Best Mobiles in India

English summary
Vi 5G Support for Xiaomi, Redmi Phones Announced: more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+