Home
ಸುದ್ದಿಜಾಲ

ಅನೇಕ ಗ್ರಾಹಕರು ಈ ಮೊಬೈಲ್‌ ಪ್ಲ್ಯಾನ್‌ ಆಯ್ಕೆ ಮಾಡ್ತಾರೆ!..ಇದು ನಿಮಗೂ ಬೆಸ್ಟ್‌!

ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂಗಳ ನಡುವೆ ಪೈಪೋಟಿ ಇದೆ. ಈ ಮೂರು ಟೆಲಿಕಾಂಗಳು ಅಧಿಕ ಗ್ರಾಹಕರನ್ನು ಸೆಳೆಯಲು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಅದರಲ್ಲಿಯೂ ಬಹುತೇಕ ಗ್ರಾಹಕರು ಬಜೆಟ್‌ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ಗಳನ್ನು ಆಯ್ಕೆ ಮಾಡುತ್ತಾರೆ. ಅದಾಗ್ಯೂ, ಡ್ಯುಯಲ್‌ ಸಿಮ್‌ ಕಾರ್ಡ್‌ ಇದ್ದರಂತೂ ಅಥವಾ ಸಿಮ್‌ ಚಾಲ್ತಿ ಇಡಲು ವಿ ಟೆಲಿಕಾಂನ ಈ ಪ್ಲ್ಯಾನ್‌ ಹೆಚ್ಚು ಆಯ್ಕೆ ಮಾಡುತ್ತಾರೆ.

ಹೌದು, ದೇಶದಲ್ಲಿ ವಿ ಟೆಲಿಕಾಂ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ನೀಡಿದೆ. ಅವುಗಳ ಪೈಕಿ ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರಯೋಜನ ಪಡೆದ ಯೋಜನೆಗಳಿಗೆ ಡಿಮ್ಯಾಂಡ್‌ ಅಧಿಕ. ಮುಖ್ಯವಾಗಿ ವಿ ಗ್ರಾಹಕರು ಎಂಟ್ರಿ ಲೆವೆಲ್‌ ರೀಚಾರ್ಜ್‌ ಪ್ಲ್ಯಾನ್‌ಗಳತ್ತ ಮುಖ ಮಾಡುತ್ತಾರೆ.

ಅನೇಕ ಗ್ರಾಹಕರು ಈ ಮೊಬೈಲ್‌ ಪ್ಲ್ಯಾನ್‌ ಆಯ್ಕೆ ಮಾಡ್ತಾರೆ!..ಇದು ನಿಮಗೂ ಬೆಸ್ಟ್‌!

ವಿ ಟೆಲಿಕಾಂನ ವಿ 99ರೂ, ವಿ 129ರೂ ಮತ್ತು ವಿ 279ರೂ ರೀಚಾರ್ಜ್‌ ಯೋಜನೆಗಳು ಆರಂಭ ಹಂತದ ಪ್ಲ್ಯಾನ್‌ಗಳಾಗಿ ಗುರುತಿಸಿಕೊಂಡಿವೆ. ಗ್ರಾಹಕರಿಗೆ ತಮ್ಮ ಸಿಮ್‌ ಆಕ್ಟಿವ್ ಇಡಲು ಅಥವಾ ಆರಂಭಿಕ ಹಂತದ ಪ್ಲ್ಯಾನ್‌ ರೀಚಾರ್ಜ್‌ ಮಾಡಲು ಈ ಯೋಜನೆಗಳು ಸೂಕ್ತ ಎನಿಸುತ್ತವೆ. ಹಾಗಾದರೇ ವಿ ಟೆಲಿಕಾಂನ ಈ ಅಗ್ಗದ ರೀಚಾರ್ಜ್‌ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ,

ವಿ ಟೆಲಿಕಾಂನ 99ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು :
ವಿ ಟೆಲಿಕಾಂನ 99ರೂ. ರೀಚಾರ್ಜ್‌ ಪ್ಲ್ಯಾನ್‌ 28 ದಿನಗಳ ವ್ಯಾಲಿಡಿಟಿ ಪಡೆದಿದ್ದು, ವಿ ಸಿಮ್‌ ಅನ್ನು ಚಾಲ್ತಿ ಇಟ್ಟುಕೊಳ್ಳಲು ಸೂಕ್ತ ಆಗಿದೆ. ಇನ್ನು ಈ ರೀಚಾರ್ಜ್‌ ಯೋಜನೆಯು 200MB ಡೇಟಾ ಸೌಲಭ್ಯ ಅನ್ನು ಪಡೆದುಕೊಂಡಿದ್ದು, ಜೊತೆಗೆ 99ರೂ. ಗಳ ಟಾಕ್‌ಟೈಮ್‌ ಪ್ರಯೋಜನ ಕೂಡಾ ಪಡೆದಿದೆ. ಇನ್ನು ಧ್ವನಿ ಕರೆಗಳಲ್ಲಿ ಪ್ರತಿ ಸೆಕೆಂಡಿಗೆ 2.5 ಪೈಸಾ ಶುಲ್ಕ ಇದೆ. ಇದರೊಂದಿಗೆ ಈ ರೀಚಾರ್ಜ್‌ ಯೋಜನೆಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ ಇರುವುದಿಲ್ಲ.

ವಿ ಟೆಲಿಕಾಂನ 129ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು :
ವಿ ಟೆಲಿಕಾಂನ 129 ರೂ. ರೀಚಾರ್ಜ್‌ ಪ್ಲ್ಯಾನ್‌ 18 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಜೊತೆಗೆ ಇದು 200MB ಡೇಟಾ ಸೌಲಭ್ಯ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಪ್ಲ್ಯಾನ್‌ ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಕೂಡಾ ಪಡೆದಿದೆ. ಇದರೊಂದಿಗೆ ಈ ರೀಚಾರ್ಜ್‌ ಯೋಜನೆಯು ಯಾವುದೇ ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿಲ್ಲ.

ವಿ ಟೆಲಿಕಾಂ 179ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು :
ವಿ ಟೆಲಿಕಾಂ 179 ರೂ. ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಪೂರ್ಣ ವ್ಯಾಲಿಡಿಟಿಗೆ ಒಟ್ಟು 2 GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಕೂಡಾ ಪಡೆದಿದೆ. ಇದರ ಹಾಗೆಯೇ 300 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯುತ್ತದೆ.

ವಿ ಟೆಲಿಕಾಂನ 279ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು :
ವಿ ಟೆಲಿಕಾಂನ 279 ರೂ. ರೀಚಾರ್ಜ್‌ ಪ್ಲ್ಯಾನ್‌ 90 ದಿನಗಳ ವ್ಯಾಲಿಡಿಟಿ ಒಳಗೊಂಡಿದ್ದು, ಹಾಗೆಯೇ ಇದರೊಂದಿಗೆ ಈ ಪ್ಲ್ಯಾನ್‌ 500MB ಡೇಟಾ ಪ್ರಯೋಜನ ಕೂಡಾ ಪಡೆದುಕೊಂಡಿದೆ. ಅಲ್ಲದೇ ಈ ರೀಚಾರ್ಜ್‌ ಯೋಜನೆಯಲ್ಲಿ ಧ್ವನಿ ಕರೆಗಳಲ್ಲಿ ಪ್ರತಿ ಸೆಕೆಂಡಿಗೆ 2.5 ಪೈಸಾ ಶುಲ್ಕ ಇದೆ. ವ್ಯಾಲಿಡಿಟಿ ಬಯಸೋರಿಗೆ ಉತ್ತಮ ಆಯ್ಕೆ ಆಗಿದೆ.

Best Mobiles in India

English summary
These VI telecom affordable recharge plans offers big validity and data, call and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+