Home
ಸುದ್ದಿಜಾಲ

IPL ವೀಕ್ಷಕರಿಗೆ ಇನ್ನು ಮೊಬೈಲ್‌ ಡೇಟಾ ಖಾಲಿ ಆಗುತ್ತೆ ಅನ್ನೋ ಚಿಂತೆ ಇಲ್ಲ ಬಿಡಿ!

ದೇಶದ ತೃತೀಯ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (Vi) ಇದೀಗ IPL 2024 ಪ್ರಯುಕ್ತ ತನ್ನ ಕೆಲವು ಪ್ರಿಪೇಯ್ಡ್ ಪ್ಲ್ಯಾನ್‌ಗಳಲ್ಲಿ ಭರ್ಜರಿ ರಿಯಾಯಿತಿ ತಿಳಿಸಿದೆ. ಈ ಪ್ಲ್ಯಾನ್‌ಗಳ ಮೂಲಕ ಗ್ರಾಹಕರು ಮೊಬೈಲ್‌ ಮೂಲಕವೇ ಕ್ರಿಕೆಟ್‌ ಮ್ಯಾಚ್‌ ವೀಕ್ಷಣೆ ಮಾಡಬಹುದು.

ಹೌದು, ವಿ ಟೆಲಿಕಾಂ ಸಂಸ್ಥೆಯು ತನ್ನ ಕೆಲವು ಪ್ಲ್ಯಾನ್‌ಗಳ ದರದಲ್ಲಿ ಇಳಿಕೆ ಮಾಡಿದೆ. ಇದು ಜಿಯೋ ಸಿನಿಮಾ ಆಪ್‌ ಮೂಲಕ ಐಪಿಎಲ್‌ ಮ್ಯಾಚ್‌ ನೋಡಲು ಗ್ರಾಹಕರಿಗೆ ಅನುಕೂಲ ಆಗಲಿದೆ. ಪ್ಲ್ಯಾನ್‌ಗಳ ಬೆಲೆ ಇಳಿಕೆ ಜೊತೆಗೆ ಕೆಲ ಪ್ರಿಪೇಯ್ಡ್ ಯೋಜನೆಗಳಲ್ಲಿ ಹೆಚ್ಚುವರಿ ಡೇಟಾ ಅನ್ನು ಕೂಡಾ ಸಹ ಘೋಷಿಸಿದೆ.

IPL ವೀಕ್ಷಕರಿಗೆ ಇನ್ನು ಮೊಬೈಲ್‌ ಡೇಟಾ ಖಾಲಿ ಆಗುತ್ತೆ ಅನ್ನೋ ಚಿಂತೆ ಇಲ್ಲ ಬಿಡಿ!

ಅಂದಹಾಗೆ ವಿ ಟೆಲಿಕಾಂ ಘೋಷಿಸಿರುವ ಈ ಆಫರ್ ಮಾರ್ಚ್ 21, 2024 ರಿಂದ ಏಪ್ರಿಲ್ 1, 2024 ರ ವರೆಗೆ ಮಾನ್ಯ ಆಗಿರುತ್ತದೆ ಎಂದು ವರದಿಯಾಗಿದೆ. ಹಾಗಾದರೇ ವಿ ಟೆಲಿಕಾಂ ಈ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ವಿ 699ರೂ ಪ್ಲ್ಯಾನ್‌ ಮಾಹಿತಿ

ವಿ ಟೆಲಿಕಾಂನ ಈ ಯೋಜನೆಯು 50ರೂ. ರಿಯಾಯಿತಿ ಅನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 3GB ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಲಭ್ಯ ಆಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಸಿಗಲಿದ್ದು, ಇನ್ನು ಈ ಯೋಜನೆಯೊಂದಿಗೆ ಯಾವುದೇ ಹೆಚ್ಚುವರಿ ಡೇಟಾ ಸೌಲಭ್ಯ ಲಭ್ಯ ಇರುವುದಿಲ್ಲ. ಅಂದಹಾಗೆ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.

IPL ವೀಕ್ಷಕರಿಗೆ ಇನ್ನು ಮೊಬೈಲ್‌ ಡೇಟಾ ಖಾಲಿ ಆಗುತ್ತೆ ಅನ್ನೋ ಚಿಂತೆ ಇಲ್ಲ ಬಿಡಿ!

ವಿ 1449ರೂ ಪ್ಲ್ಯಾನ್‌ ಮಾಹಿತಿ

ವಿ ಟೆಲಿಕಾಂನ 1449ರೂ. ಪ್ಲ್ಯಾನ್ ಕೂಡಾ 50ರೂ. ರಿಯಾಯಿತಿ ಅನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 1.5GB ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಲಭ್ಯ ಆಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಸಿಗಲಿದ್ದು, ಇನ್ನು ಈ ಯೋಜನೆಯೊಂದಿಗೆ 30GB ಹೆಚ್ಚುವರಿ ಡೇಟಾ ಸೌಲಭ್ಯ ಲಭ್ಯ. ಅಂದಹಾಗೆ ಈ ಯೋಜನೆಯು 180 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.

ವಿ 3199ರೂ ಪ್ಲ್ಯಾನ್‌ ಮಾಹಿತಿ

ವಿ ಸಂಸ್ಥೆಯ 3199ರೂ. ಪ್ಲ್ಯಾನ್ 100ರೂ. ರಿಯಾಯಿತಿ ಅನ್ನು ಪಡೆದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 2GB ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಲಭ್ಯ ಆಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಸಿಗಲಿದ್ದು, ಇನ್ನು ಈ ಪ್ಲ್ಯಾನ್‌ ಜೊತೆಗೆ 50GB ಹೆಚ್ಚುವರಿ ಡೇಟಾ ಸೌಲಭ್ಯ ಲಭ್ಯ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ.

ಹಾಗೆಯೇ ವಿ ಟೆಲಿಕಾಂ ತನ್ನ 2899ರೂ ಮತ್ತು 3099ರೂ. ಪ್ರೀಪೇಯ್ಡ್‌ ಪ್ಲಾನ್‌ಗಳೊಂದಿಗೆ 50GB ಬೋನಸ್ ಡೇಟಾ ಸೌಲಭ್ಯವನ್ನು ತಿಳಿಸಿದೆ. ಅಂದಹಾಗೆ ಈ ಎರಡು ಪ್ರೀಪೇಯ್ಡ್‌ ಯೋಜನೆಗಳು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿವೆ. ವಿ 3099ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಸೌಲಭ್ಯ ಹೊಂದಿದ್ದು, ವಿ 2899ರೂ. ಪ್ರತಿದಿನ 1.5GB ಡೇಟಾ ಪ್ರಯೋಜನ ನೀಡಲಿದೆ.

ಇದು ಅಲ್ಲದೇ ಸಂಸ್ಥೆಯು ತನ್ನ 181ರೂ. ಪ್ಲಾನ್‌ನಲ್ಲಿ ಶೇ 50% ಹೆಚ್ಚುವರಿ ಡೇಟಾ, ಅಂದರೆ 1GB ಡೇಟಾ ದೊರೆಯುತ್ತದೆ. ಇನ್ನು ವಿ 75 ರೂ. ಪ್ಲಾನ್‌ನಲ್ಲಿ ಶೇ 25% ಹೆಚ್ಚುವರಿ ಡೇಟಾ ಪ್ರಯೋಜನ ಲಭ್ಯ ಮಾಡಲಿದೆ. ಶೇ 25% ಹೆಚ್ಚುವರಿ ಎಂದರೆ 1.5GB ಡೇಟಾ ಎಕ್ಸ್‌ಟ್ರಾ ಸಿಗಲಿದೆ.

Best Mobiles in India

English summary
Vi announce additional data and price cut of plans for IPL 2024. check out other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+