5 ಹೊಸ ಪ್ಲ್ಯಾನ್‌ ಪರಿಚಯಿಸಿದ ವಿ ಟೆಲಿಕಾಂ!..ಅಧಿಕ ಡೇಟಾ ಇದೆಯಾ?

|

ದೇಶದ ಟೆಲಿಕಾಂ ವಲಯದಲ್ಲಿ ವಿ ಟೆಲಿಕಾಂ ಆಕರ್ಷಕ ಯೋಜನೆಗಳ ಮೂಲಕ ಗುರುತಿಸಿಕೊಂಡಿದೆ. ಚಂದಾದಾರರನ್ನು ತನ್ನತ್ತ ಆಕರ್ಷಿಸುವುದಕ್ಕೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಮುನ್ನಡೆದಿದೆ. ಏರ್‌ಟೆಲ್‌, ಜಿಯೋ ಟೆಲಿಕಾಂಗಳ ಪೈಪೋಟಿ ಎದುರಿಸುತ್ತಿರುವ ವಿ ಟೆಲಿಕಾಂ ಇದೀಗ ಮತ್ತೆ ಎರಡು ನೂತನ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಸದ್ಯ ವಿ ಟೆಲಿಕಾಂ ಐದು ನೂತನ ಪ್ರಿಪೇಯ್ಡ್‌ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ. ಅವುಗಳು ಕ್ರಮವಾಗಿ 29ರೂ, 39ರೂ, 98ರೂ, 195ರೂ ಮತ್ತು 319ರೂ. ಬೆಲೆಯಲ್ಲಿ ಕಾಣಿಸಿಕೊಂಡಿವೆ.

ಹೊಸ

ಹೌದು, ವಿ ಟೆಲಿಕಾಂ ನೂತನವಾಗಿ 29ರೂ, 39ರೂ, 98ರೂ, 195ರೂ ಮತ್ತು 319ರೂ. ಬೆಲೆಯ ಐದು ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ವಿ ಟೆಲಿಕಾಂ ಅಗ್ಗದ ಬೆಲೆಯಲ್ಲಿ ಬಿಡುಗಡೆ ಮಾಡಿರುವ ಈ ಪ್ಲಾನ್‌ಗಳು ಕ್ರಮವಾಗಿ ಭಿನ್ನ ವ್ಯಾಲಿಡಿಟಿಯನ್ನು ಪಡೆದಿವೆ. ಕಡಿಮೆ ದರದಲ್ಲಿ ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಐದು ಪ್ರಿಪೇಯ್ಡ್‌ ಯೋಜನೆಗಳು ಆಕರ್ಷಕ ಎನಿಸುತ್ತವೆ. ಹಾಗಾದರೇ ವಿ 29ರೂ, ವಿ 39ರೂ, ವಿ 98ರೂ, ವಿ 195ರೂ ಮತ್ತು ವಿ 319ರೂ. ಯೋಜನೆಗಳ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 29ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 29ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 29ರೂ. ಯೋಜನೆಯು FUP ಡೇಟಾ ಖಾಲಿಯಾದಾಗ ಬಳಸಬೇಕಾದ 4G ಡೇಟಾ ವೋಚರ್ ಆಗಿದೆ. ಈ ರೂ 29 ಪ್ಲಾನ್‌ನೊಂದಿಗೆ, ಬಳಕೆದಾರರು ಕೇವಲ 2 ದಿನಗಳ ಮಾನ್ಯತೆಯೊಂದಿಗೆ 2GB FUP ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯೊಂದಿಗೆ ಬಳಕೆದಾರರು ಬೇರೆ ಯಾವುದೇ ಪ್ರಯೋಜನ ಪಡೆಯುವುದಿಲ್ಲ. ಈ ಪ್ಲ್ಯಾನ್ ಎಲ್ಲಾ ಟೆಲಿಕಾಂ ವಲಯಗಳಿಗೆ ಲಭ್ಯವಿಲ್ಲ ಎಂಬುದನ್ನು ಗಮನಿಸಿ.

ವಿ ಟೆಲಿಕಾಂ 39ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 39ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 39ರೂ. ಯೋಜನೆಯು 4G ಡೇಟಾ ವೋಚರ್ ಅನ್ನು ನೀಡುತ್ತಿದೆ. ಈ ಯೋಜನೆಯೊಂದಿಗೆ, ಬಳಕೆದಾರರು 7 ದಿನಗಳ ಮಾನ್ಯತೆಯೊಂದಿಗೆ 3GB FUP ಡೇಟಾವನ್ನು ಪಡೆಯುತ್ತಾರೆ ಮತ್ತು ಇದಕ್ಕಿಂತ ಬೇರೆ ಯಾವುದೇ ಪ್ರಯೋಜನ ಪಡೆಯುವುದಿಲ್ಲ. ಈ ಪ್ಲ್ಯಾನ್ ಎಲ್ಲಾ ಟೆಲಿಕಾಂ ವಲಯಗಳಿಗೆ ಲಭ್ಯವಿಲ್ಲ ಎಂಬುದನ್ನು ಗಮನಿಸಿ.

ವಿ ಟೆಲಿಕಾಂ 98ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 98ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 98ರೂ. ಯೋಜನೆ ಆಕರ್ಷಕ ಪ್ರಯೋಜನ ಪಡೆದಿದೆ. ವಿ ಟೆಲಿಕಾಂನ ಈ ಯೋಜನೆಯನ್ನು ವಿಭಿನ್ನ ವಲಯಗಳಲ್ಲಿ (ಗುಜರಾತ್ ಮತ್ತು ಮಹಾರಾಷ್ಟ್ರ ಮತ್ತು ಗೋವಾ) ವಿಭಿನ್ನ ರೀತಿಯಲ್ಲಿ ನೀಡುತ್ತಿದೆ. ಗುಜರಾತ್‌ನಲ್ಲಿ 98ರೂ. ಹೊಸ ಪ್ರಿಪೇಯ್ಡ್ ಯೋಜನೆಯಾಗಿದ್ದು ಅದು 21 ದಿನಗಳವರೆಗೆ 9GB ಡೇಟಾವನ್ನು ನೀಡುತ್ತದೆ ಮತ್ತು 4G ಡೇಟಾ ವೋಚರ್ ಆಗಿದೆ. ಅದೇ ರೀತಿ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆ, 200MB ಡೇಟಾ ಮತ್ತು 15 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. FUP ಡೇಟಾವನ್ನು ಸೇವಿಸಿದ ನಂತರ 50ಪೈ/ಎಮ್‌ಬಿ ಡೇಟಾವನ್ನು ಚಾರ್ಜ್ ಮಾಡುತ್ತದೆ.

ವಿ ಟೆಲಿಕಾಂ 195ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂ 195ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂನ 195ರೂ ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು ಪೂರ್ಣ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಒಟ್ಟು 300 ಎಸ್‌ಎಮ್‌ಎಸ್‌ ಪ್ರಯೋಜನ ಹೊಂದಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಸಹ ಲಭ್ಯ ಆಗುತ್ತವೆ.

ವಿ ಟೆಲಿಕಾಂ 319ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂ 319ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂನ 319ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಆಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಸಹ ಲಭ್ಯ ಆಗುತ್ತವೆ.

Best Mobiles in India

English summary
Vi Brings Five New Prepaid Plans for Users: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X