ವಿ ಟೆಲಿಕಾಂನ ಈ ಎರಡು ಪ್ಲ್ಯಾನ್‌ಗಳಲ್ಲಿ ಆರೋಗ್ಯ ವಿಮೆ ಸೌಲಭ್ಯ ಲಭ್ಯ!

|

ವೊಡಾಫೋನ್-ಐಡಿಯಾ (ವಿ) ಟೆಲಿಕಾಂ ಈಗಾಗಲೇ ಹಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿದೆ. ಬಹುತೇಕ ಯೋಜನೆಗಳು ಅಧಿಕ ಡೇಟಾ, ವ್ಯಾಲಿಡಿಟಿ ಸೌಲಭ್ಯಗಳಿಂದ ಗುರುತಿಸಿಕೊಂಡಿವೆ. ಹಾಗೆಯೇ ಮತ್ತೆ ಕೆಲವು ಯೋಜನೆಗಳು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿದೆ. ಇದೀಗ ವಿ ಟೆಲಿಕಾಂ ತನ್ನ ಎರಡು ಯೋಜನೆಗಳಿಗೆ ವಿಮಾ ಸೌಲಭ್ಯ ಪ್ರಯೋಜನ ಘೋಷಿಸಿದೆ.

ಟೆಲಿಕಾಂ

ಹೌದು, ವಿ ಟೆಲಿಕಾಂ ತನ್ನ 51ರೂ. ಮತ್ತು 301ರೂ. ರೀಚಾರ್ಜ್ ಯೋಜನೆಗಳಲ್ಲಿ ಈಗ ಹೆಚ್ಚುವರಿಯಾಗಿ ಆದಿತ್ಯ ಬಿರ್ಲಾ ಆರೋಗ್ಯ ವಿಮೆಯೊಂದಿಗೆ ಸಹಭಾಗಿತ್ವದಲ್ಲಿ ಆರೋಗ್ಯ ವಿಮಾ ಸೌಲಭ್ಯ ನೀಡುತ್ತಿದೆ. ಈ ಎರಡು ಪ್ಯಾಕ್‌ಗಳು ಕೋವಿಡ್-19 ಸೇರಿದಂತೆ ವೈದ್ಯಕೀಯ ಅಗತ್ಯತೆಗಳಿಗಾಗಿ ದಿನಕ್ಕೆ 1,000 ಮೌಲ್ಯದ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು ಪ್ರತಿ ಘಟನೆಗೆ 10 ದಿನಗಳವರೆಗೆ ಮತ್ತು ಐಸಿಯು ವೆಚ್ಚದಲ್ಲಿ ದಿನಕ್ಕೆ 2,000ರೂ. ವಿಮಾ ಸೌಲಭ್ಯ ಸಿಗಲಿದೆ. ಇನ್ನು ಈ ಆರೋಗ್ಯ ವಿಮೆಯು 18 ರಿಂದ 55 ವರ್ಷದೊಳಗಿನವರಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಆಪರೇಟರ್

ಆದಿತ್ಯ ಬಿರ್ಲಾ ಆರೋಗ್ಯ ವಿಮೆ ನೀಡುವ ಆರೋಗ್ಯ ವಿಮಾ ರಕ್ಷಣೆಯು ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಅಲೋಪತಿ ಮತ್ತು ಆಯುಷ್ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಪ್ರಮುಖ ಆಸ್ಪತ್ರೆಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ವಿ ಗ್ರಾಹಕರು ತಮ್ಮ ಡಿಸ್ಚಾರ್ಜ್ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ನಕಲನ್ನು ತೋರಿಸುವ ಮೂಲಕ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ, ಅದನ್ನು ನಂತರ ಪರಿಶೀಲಿಸಲಾಗುತ್ತದೆ ಎಂದು ಟೆಲಿಕಾಂ ತಿಳಿಸಿದೆ.

ಪ್ಯಾಕ್‌ಗೆ

ವಿ ಟೆಲಿಕಾಂನ 51ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಅನ್ನು ಆಡ್-ಆನ್ ಪ್ಯಾಕ್ ಆಗಿ ಒದಗಿಸಲಾಗಿದ್ದು, ಅದನ್ನು ಅಸ್ತಿತ್ವದಲ್ಲಿರುವ ಪ್ಯಾಕ್‌ಗೆ ಸೇರಿಸಬಹುದು. ಹಾಗೆಯೇ ವಿ ಟೆಲಿಕಾಂನ 301ರೂ. ರೀಚಾರ್ಜ್ ಪ್ಯಾಕ್ ಸ್ವತಂತ್ರ ಪ್ರಿಪೇಯ್ಡ್ ಯೋಜನೆಯಾಗಿದೆ.

ಯೋಜನೆಯು

ವಿ ಟೆಲಿಕಾಂನ 301ರೂ. ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯು ಪ್ರತಿದಿನ 1.5GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇದರೊಂದಿಗೆ ಪ್ರತಿದಿನ 100ಎಸ್‌ಎಮ್‌ಎಸ್‌ ಸೌಲಭ್ಯವನ್ನು ಹೊಂದಿದ್ದು, ಹೆಚ್ಚುವರಿಯಾಗಿ ವಿ ಅಪ್ಲಿಕೇಶನ್‌ಗಳ ಸೇವೆ ಹಾಗೂ ಆದಿತ್ಯ ಬಿರ್ಲಾ ಆರೋಗ್ಯ ವಿಮೆ ಸೌಲಭ್ಯ ಒಳಗೊಂಡಿದೆ.

ಬಿರ್ಲಾ

ಅದೇ ರೀತಿ ವಿ ಟೆಲಿಕಾಂನ 51ರೂ. ಯೋಜನೆಯು ಆಡ್‌ ಆನ್‌ ರೀಚಾರ್ಜ್ ಪ್ಯಾಕ್‌ ಆಗಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. 500 ಲೋಖಲ್ ಮತ್ತು ನ್ಯಾಶನಲ್ ಎಸ್‌ಎಮ್‌ಎಸ್‌ಗಳ ಪ್ರಯೋಜನ ಇದೆ. ಇದರೊಂದಿಗೆ ಹೆಚ್ಚುವರಿಯಾಗಿ ಆದಿತ್ಯ ಬಿರ್ಲಾ ಆರೋಗ್ಯ ವಿಮೆ ಸೌಲಭ್ಯ ಒಳಗೊಂಡಿದೆ.

Most Read Articles
Best Mobiles in India

English summary
In addition to insurance benefits, the Rs. 51 Vi prepaid recharge pack brings 500 SMS messages and the Rs. 301 prepaid pack includes 1.5GB daily data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X