Home
ಸುದ್ದಿಜಾಲ

ವೊಡಾಫೋನ್-ಐಡಿಯಾದಿಂದ ಪ್ರೀಪೇಯ್ಡ್‌ ಗ್ರಾಹಕರಿಗೆ 3GB ಉಚಿತ ಡೇಟಾ ಸಾಧ್ಯತೆ!

ವಿ-Vi ಟೆಲಿಕಾಂ ಅಲಿಯಾಸ್ ವೊಡಾಫೋನ್ ಐಡಿಯಾ ಇದೀಗ ತನ್ನ ಚಂದಾದಾರರಿಗೆ ಭರ್ಜರಿ ಕೊಡುಗೆ ನೀಡಲು ಸಜ್ಜಾಗಿದೆ. ಈಗಾಗಲೇ ಕೆಲವು ಡಬಲ್‌ ಡೇಟಾ ಯೋಜನೆಗಳನ್ನು ಪರಿಚಯಿಸಿರುವ ಸಂಸ್ಥೆಯು ಈಗ ತನ್ನ ಪ್ರೀಪೇಯ್ಡ್‌ ಬಳಕೆದಾರರಿಗೆ ಉಚಿತವಾಗಿ 3GB ಡೇಟಾ ನೀಡಲಿದೆ ಎನ್ನಲಾಗುತ್ತಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವ ಲಕ್ಷಣ ಹೊರಹಾಕಿದೆ.

ವೊಡಾಫೋನ್

ಹೌದು, ವೊಡಾಫೋನ್ ಐಡಿಯಾ ಜತೆಯಾಗಿ ಈಗ Vi ಬ್ರ್ಯಾಂಡ್‌ನಿಂದ ಕಾಣಿಸಿಕೊಂಡಿವೆ. ಟೆಲಿಕಾಂ ಇದೀಗ ಫ್ರೀ ಯಾಗಿ 3GB ಡೇಟಾ ನೀಡುವುದಾಗಿ ಹೇಳಲಾಗ್ತಿದೆ. ಹಾಗೆಯೇ ಈ ಉಚಿತ ಡೇಟಾ ಕೊಡುಗೆಯು ಮೂರು ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ. ವಿ ಟೆಲಿಕಾಂನ ಆಲ್‌ ರೌಂಡರ್ ಪ್ಲ್ಯಾನ್‌ಗಳ ರೀಚಾರ್ಜ್‌ನಲ್ಲಿ ಈ ಉಚಿತ ಡೇಟಾ ಕೊಡುಗೆಯು ಗ್ರಾಹಕರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಟೆಲಿಕಾಂಟಾಕ್ ವರದಿ ಮಾಡಿದೆ.

ಸಂಸ್ಥೆಯ

ವಿ ಟೆಲಿಕಾಂ ಸಂಸ್ಥೆಯ 49 ರೂ. ಪ್ಯಾಕ್ 38 ರೂ. ಟಾಕ್ ಟೈಮ್, 100 ಎಂಬಿ ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿ ಪಡೆದಿದೆ. ಹೊಂದಿದೆ. ಇನ್ನು ವಿ ಟೆಲಿಕಾಂ ಚಂದಾದಾರರು ಕಂಪನಿಯ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಿಂದ 49ರೂ. ಯೋಜನೆಯನ್ನು ರೀಚಾರ್ಜ್ ಮಾಡಿಸಿದರೇ, ಹೆಚ್ಚುವರಿ 200MB ಡೇಟಾವನ್ನು ಸಹ ಪಡೆಯುತ್ತಾರೆ. ಕಂಪನಿಯು 3 ದಿನಗಳ ಡೇಟಾ ಆಡ್-ಆನ್ ಅನ್ನು 28 ದಿನಗಳ ಮಾನ್ಯತೆಯೊಂದಿಗೆ 48ರೂ.ಗಳಿಗೆ ಮಾರಾಟ ಮಾಡುತ್ತಿದೆ, ಆದರೆ ಕೆಲವು ಬಳಕೆದಾರರಿಗೆ ಇದನ್ನು ಉಚಿತವಾಗಿ ನೀಡಲಾಗುತ್ತಿದೆ. ಗ್ರಾಹಕರು ವಿ ಆಪ್‌ ಖಾತೆಯಲ್ಲಿ ಚೆಕ್ ಮಾಡಬಹುದು. Vi ಟೆಲಿಕಾಂನ ಕೆಲವು ಆಕರ್ಷಕ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡಿರಿ.

Vi 351ರೂ. ಡೇಟಾ ಪ್ಲ್ಯಾನ್

Vi 351ರೂ. ಡೇಟಾ ಪ್ಲ್ಯಾನ್

ವೋಡಾಫೋನ-ಐಡಿಯಾ 351ರೂ. ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 100GB ಡೇಟಾ ಸೌಲಭ್ಯ ದೊರೆಯುತ್ತದೆ. ಹಾಗೆಯೇ ವೊಡಾಫೋನ್-ಐಡಿಯಾ ಟೆಲಿಕಾಂ ಡಬಲ್ ಡೇಟಾ ಕೊಡುಗೆಯ ಯೋಜನೆಗಳನ್ನು ಹೊಂದಿವೆ. ಆ ಪ್ಲ್ಯಾನ್‌ಗಳ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿರಿ.

Vi 299ರೂ. ಪ್ಲ್ಯಾನ್

Vi 299ರೂ. ಪ್ಲ್ಯಾನ್

ವೊಡಾಫೋನಿನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದ್ದು, ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Vi  499ರೂ. ಪ್ಲ್ಯಾನ್

Vi 499ರೂ. ಪ್ಲ್ಯಾನ್

ವೊಡಾಫೋನಿನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದ್ದು, ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದೆ. ಹೀಗಾಗಿ ಈ ಪ್ಲ್ಯಾನಿನಲ್ಲಿ ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
You can head over the updated Vi mobile app to check whether the company has credited any free data or not.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+