Home
ಸುದ್ದಿಜಾಲ

ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್‌ ಪರಿಚಯಿಸಿದ ವಿ ಟೆಲಿಕಾಂ; ಸಿಮ್‌ ಆಕ್ಟಿವ್‌ ಇಡಲು ಇದು ಬೆಸ್ಟ್‌!

ಭಾರತೀಯ ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (Vi)ಕೆಲವು ಅತ್ಯುತ್ತಮ ಪ್ಲ್ಯಾನ್‌ಗಳ ಮೂಲಕ ಚಂದಾದಾರರನ್ನು ಆಕರ್ಷಿಸಿದೆ. ಅದರ ಮುಂದುವರಿದ ಭಾಗವಾಗಿ ಹೆಚ್ಚಿನ ಚಂದಾದಾರರನ್ನು ತನ್ನತ್ತ ಆಕರ್ಷಿಸುವುದಕ್ಕೆ ಇದೀಗ ಮತ್ತೆ ಕಡಿಮೆ ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ವೊಂದನ್ನು ಪರಿಚಯಿಸಿದೆ. ಈ ಯೋಜನೆಯು 100ರೂ. ಒಳಗೆ ಲಭ್ಯ ಇರುವುದು ಗ್ರಾಹಕರಿಗೆ ಸಂತಸದ ಸಂಗತಿ ಎನ್ನಬಹುದು.

ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್‌ ಪರಿಚಯಿಸಿದ ವಿ ಟೆಲಿಕಾಂ!

ಹೌದು, ವಿ ಟೆಲಿಕಾಂ ನೂತನವಾಗಿ ಪ್ರೀಪೇಯ್ಡ್‌ (vi new prepaid plan) ಪ್ಲಾನ್‌ಯೊಂದನ್ನು ಲಾಂಚ್ ಮಾಡಿದ್ದು, ಅದುವೇ 99ರೂ. ರೀಚಾರ್ಜ್‌ ಪ್ಲ್ಯಾನ್ ಆಗಿದೆ. ಈ ನೂತನ ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಕಡಿಮೆ ಇಂಟರ್ನೆಟ್‌ ಡೇಟಾ ಸೌಲಭ್ಯವನ್ನು ಪಡೆದಿದೆ. ಸಿಮ್‌ ಚಾಲ್ತಿ ಇಡಲು ಈ ಯೋಜನೆ ಸೂಕ್ತವಾಗಿದ್ದು, ಈ ಯೋಜನೆಯನ್ನು ಅಧಿಕೃತ ವಿ ಟೆಲಿಕಾಂ ಆಪ್‌ ಮೂಲಕ ರೀಚಾರ್ಜ್ ಮಾಡಬಹುದು. ಹಾಗಾದರೆ ವಿ ಟೆಲಿಕಾಂನ 99ರೂ. ಪ್ಲ್ಯಾನ್ ಪ್ರಯೋಜನಗಳೆನು ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂನ 99ರೂ. ಪ್ಲ್ಯಾನ್‌ ಪ್ರಯೋಜನಗಳು
ವಿ ಟೆಲಿಕಾಂ ನೂತನವಾಗಿ ಬಿಡುಗಡೆ ಮಾಡಿರುವ 99ರೂ. ರೀಚಾರ್ಜ್‌ ಪ್ಲ್ಯಾನ್‌ ಗ್ರಾಹಕರು ತಮ್ಮ ವಿ ಟೆಲಿಕಾಂ ಸಿಮ್‌ ಆಕ್ಟಿವ್ ಇಟ್ಟುಕೊಳ್ಳಲು ಪೂರಕವಾಗಿದೆ. ಅದಾಗ್ಯೂ, ಈ ಯೋಜನೆಯು 200MB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, 99ರೂ. ಗಳ ಟಾಕ್‌ಟೈಮ್‌ ಸೌಲಭ್ಯ ನೀಡುತ್ತದೆ. ಇನ್ನು ವಾಯಿಸ್‌ ಕರೆಗಳಲ್ಲಿ ಪ್ರತಿ ಸೆಕೆಂಡಿಗೆ 2.5 ಪೈಸಾ ಶುಲ್ಕ ವಿಧಿಸುತ್ತದೆ. ಅಂದಹಾಗೆ ಈ ಯೋಜನೆಯಲ್ಲಿ ಉಚಿತ ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ.

ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್‌ ಪರಿಚಯಿಸಿದ ವಿ ಟೆಲಿಕಾಂ!

ವಿ ಟೆಲಿಕಾಂನ 499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳು
ವಿ ಟೆಲಿಕಾಂನ 499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದ್ದು, 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಕೆ ಹಾಗೂ ವಿ ಆಪ್ಸ್‌ಗಳ ಸೇವೆ ಪಡೆದಿದೆ.

ವಿ ಟೆಲಿಕಾಂ 601ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು
ವಿ ಟೆಲಿಕಾಂನ 601ರೂ. ಪ್ರಿಪೇಯ್ಡ್‌ ಪ್ಲಾನ್‌ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಅನಿಯಮಿತ ಕರೆ, ದಿನನಿತ್ಯ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್‌ ಪ್ರಯೋಜನ ನೀಡಲಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದ್ದು, ಒಟ್ಟು ವ್ಯಾಲಿಡಿಟಿ ಅವಧಿಗೆ 84GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 16 GB ಡೇಟಾ ಸೌಲಭ್ಯ ಸಹ ಸಿಗಲಿದೆ. ಜೊತೆಗೆ ವಿ ಆಪ್ಸ್‌ ಹಾಗೂ ಡೇಟಾ ರೋಲ್‌ ಓವರ್‌ ಸೌಲಭ್ಯ ಸಿಗಲಿದೆ.

ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್‌ ಪರಿಚಯಿಸಿದ ವಿ ಟೆಲಿಕಾಂ!

ವಿ ಟೆಲಿಕಾಂ 901ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 901ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 48 GB ಡೇಟಾ ಲಭ್ಯವಾಗಲಿದೆ. ವಿಕೇಂಡ್‌ ಡೇಟಾ ರೋಲ್‌ ಓವರ್‌, ವಿ ಆಪ್ಸ್‌ಗಳ ಪ್ರಯೋಜನವು ಪಡೆದಿದೆ.

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ 75GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದ್ದು, ಇದರೊಂದಿಗೆ ವಿ ಆಪ್ಸ್‌ಗಳು ಲಭ್ಯವಾಗಲಿವೆ.

Best Mobiles in India

English summary
V Telecom has introduced a new low cost recharge plan in India. This is the best plan for keep sim active. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+