Home
ಸುದ್ದಿಜಾಲ

ವಿ ಟೆಲಿಕಾಂನಿಂದ ಅಗ್ಗದ ಬೆಲೆಯಲ್ಲಿ ಎರಡು ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌!

ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ವಿ ಟೆಲಿಕಾಂ ಕೂಡ ಸೇರಿದೆ. ಗ್ರಾಹಕರನ್ನು ತನ್ನ ಕಡೆಗೆ ಆಕರ್ಷಿಸುವುದಕ್ಕೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಏರ್‌ಟೆಲ್‌, ಜಿಯೋ ಟೆಲಿಕಾಂಗಳ ಪೈಪೋಟಿ ಎದುರಿಸುತ್ತಿರುವ ವಿ ಟೆಲಿಕಾಂ ಇದೀಗ ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಸದ್ಯ ವೋಡಾಫೋನ್‌ ಐಡಿಯಾ ಭಾರತದಲ್ಲಿ 327ರೂ. ಮತ್ತು 377ರೂ. ಬೆಲೆಯಲ್ಲಿ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಲಾಂಚ್‌ ಮಾಡಿದೆ. ಈ ಎರಡು ಪ್ಲಾನ್‌ಗಳು ಕ್ರಮವಾಗಿ 30 ಹಾಗೂ 31ದಿನಗಳ ಮಾನ್ಯತೆಯನ್ನು ನೀಡಲಿವೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ಭಾರತದಲ್ಲಿ ಎರಡು ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು ಒಂದು ತಿಂಗಳ ಅವಧಿಯ ಮಾನ್ಯತೆಯನ್ನು ಹೊಂದಿವೆ. ಜೊತೆಗೆ ಅನಿಯಮಿತ ಕರೆಗಳು, Vi ಮೂವೀಸ್‌ ಮತ್ತು ಟಿವಿ ಚಂದಾದಾರಿಕೆಯನ್ನು ನೀಡಲಿವೆ. ಇದಲ್ಲದೆ ವಿ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ನೀಡಲಿವೆ. ಈ ಪ್ಲಾನ್‌ಗಳು ಟ್ರಾಯ್‌ನ ಹೊಸ ಕ್ರಮವು ಜಾರಿಗೆ ಬಂದ ನಂತರ ಪರಿಚಯಿಸಿದ ಪ್ಲಾನ್‌ಗಳಾಗಿವೆ. ಇನ್ನುಳಿದಂತೆ ಈ ಪ್ರಿಪೇಯ್ಡ್‌ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ 327ರೂ.ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 327ರೂ.ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ ವೆಬ್‌ಸೈಟ್ ಪ್ರಕಾರ, ಹೊಸ 327ರೂ.ಗಳ ಪ್ರಿಪೇಯ್ಡ್ ಪ್ಲಾನ್‌ ಅನಿಯಮಿತ ಧ್ವನಿ ಕರೆಗಳು, ದೈನಂದಿನ ಆಧಾರದ ಮೇಲೆ 100 SMS ಸಂದೇಶಗಳು ಮತ್ತು ಒಟ್ಟು 25GB ಡೇಟಾಗೆ ಪ್ರವೇಶವನ್ನು ನೀಡಲಿದೆ. ಈ ಪ್ಲಾನ್‌ 30 ದಿನಗಳ ಮಾನ್ಯತೆಯನ್ನು ನೀಡಲಿದೆ. ಇದಲ್ಲದೆ Vi ಮೂವೀಸ್‌ ಮತ್ತು ಟಿವಿ ಚಂದಾದಾರಿಕೆಯನ್ನು ನೀಡಲಿವೆ.

ವಿ ಟೆಲಿಕಾಂ 337ರೂ. ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂ 337ರೂ. ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂನ 337ರೂ. ಪ್ರಿಪೇಯ್ಡ್ ಪ್ಲಾನ್‌ 31 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸಂದೇಶಗಳ ಪ್ರಯೋಜನ ಪಡೆಯಬಹುದು.ಇದಲ್ಲದೆ ಒಟ್ಟು 28GB ಡೇಟಾ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಇದಲ್ಲದೆ ಈ ರೀಚಾರ್ಜ್ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ವಿ ಮೂವೀಸ್‌ ಮತ್ತು TV ​​ಅಪ್ಲಿಕೇಶನ್‌ಗೆ ಪೂರಕ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

ಏರ್‌ಟೆಲ್

ಇನ್ನು ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕೂಡ ಗ್ರಾಹಕರಿಗೆ ಇದೇ ರೀತಿಯ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಇತ್ತೀಚೆಗೆ, ಏರ್‌ಟೆಲ್ ಕಂಪೆನಿ 296ರೂ. ಮತ್ತು 319ರೂ. ಮೌಲ್ಯದ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಎರಡೂ ಯೋಜನೆಗಳು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸಂದೇಶ ಸೌಲಭ್ಯ ಲಬ್ಯವಿದೆ. ಇದರಲ್ಲಿ ಏರ್‌ಟೆಲ್‌ 296ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 25GB ಡೇಟಾ ಪ್ರಯೋಜನ ನೀಡಲಿದ್ದು, 30 ದಿನಗಳ ಮಾನ್ಯತೆ ನೀಡಲಿದೆ. ಆದರೆ 319ರೂ. ಬೆಲೆಯ ಪ್ಲಾನ್‌ ಒಂದು ತಿಂಗಳ ಮಾನ್ಯತೆ ಹೊಂದಿದೆ.

ಜಿಯೋ ಟೆಲಿಕಾಂ

ಇದಲ್ಲದೆ ಜಿಯೋ ಟೆಲಿಕಾಂ ಕೂಡ 259ರೂ ಬೆಲೆಯ ಪ್ಲಾನ್‌ ಪರಿಚಯಿಸಿದೆ. ಇದು ಕ್ಯಾಲೆಂಡರ್‌ ತಿಂಗಳ ಮಾನ್ಯತೆಯ ಪ್ಲಾನ್‌ ಆಗಿದ್ದು, ಪ್ರತಿ ತಿಂಗಳು ಕೇವಲ ಒಂದು ರೀಚಾರ್ಜ್ ದಿನಾಂಕವನ್ನು ನೆನಪಿಟ್ಟುಕೊಳ್ಳಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ 1.5GB ಹೈ-ಸ್ಪೀಡ್ ಡೇಟಾ ಪ್ರಯೋಜನವನ್ನು ನೀಡಲಿದ್ದು, ನಂತರ 64Kbpsಗೆ ಡೇಟಾ ವೇಗವನ್ನು ಇಳಿಯುತ್ತದೆ. ಇದು ಅನಿಯಮಿತ ಧ್ವನಿ ಕರೆಗಳು, ದೈನಂದಿನ 100 SMS ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ. ಇದು ನಿಯಮಿತ ರೀಚಾರ್ಜ್ ಪ್ಲಾನ್‌ಗಿಂತ ಭಿನ್ನವಾಗಿದ್ದು, ನಿಗದಿತ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ.

Best Mobiles in India

English summary
Vi has introduced two new prepaid recharge plans in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+