ವೊಡಾಫೋನ್‌ ಐಡಿಯಾದಿಂದ ವೈ-ಫೈ ಹಾಟ್‌ಸ್ಪಾಟ್‌ ಡಿವೈಸ್‌ ಲಾಂಚ್!

|

ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಗಳು ಈಗ ಹೊಸದಾಗಿ ಜಂಟಿಯಾಗಿ ನೂತನ Vi ಹೆಸರಿನಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿವೆ. ವೊಡಾಫೋನ್ ಐಡಿಯಾ ಜೊತೆಯಾಗಿ ಈಗ ಕೆಲವು ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಮತ್ತೆ ಆಕರ್ಷಿಸಿದೆ. ಅದೇ ರೀತಿ ಹೊಸ ಬ್ರ್ಯಾಂಡ್ Vi ನಲ್ಲಿ ಸಂಸ್ಥೆಯು ನೂತನವಾಗಿ 4G ಹಾಟ್‌ಸ್ಪಾಟ್‌ ಡಿವೈಸ್‌ ಅನ್ನು ಅನಾವರಣ ಮಾಡಿದೆ.

ಇಂಟರ್ನೆಟ್

ಹೌದು, ಸದ್ಯ ಗ್ರಾಹಕರಿಗೆ ವೇಗದ ಇಂಟರ್ನೆಟ್ ಅಗತ್ಯ ಹೆಚ್ಚಿದೆ. ಮೊಬೈಲ್ ಅಧಿಕ ಡೇಟಾ ಇದ್ದರೂ ಬಹುತೇಕ ಗ್ರಾಹಕರು ಹಾಟ್‌ಸ್ಪಾಟ್ ಡಿವೈಸ್‌ಗಳ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ Vi ಟೆಲಿಕಾಂ ಇದೀಗ ಹೊಸ ವೈ-ಫೈ ಹಾಟ್‌ಸ್ಪಾಟ್‌ (Vi 4G MiFi) ಡಿವೈಸ್ ಅನ್ನು ಪರಿಚಯಿಸಿದೆ. ಈ ಡಿವೈಸ್‌ ಬಳಕೆದಾರರಿಗೆ ಒಟ್ಟು 15 ಇತರೆ ಡಿವೈಸ್‌ಗಳನ್ನು ಕನೆಕ್ಟ್‌ ಮಾಡುವು ಅನುಕೂಲ ಒದಗಿಸುವ ಸಾಮರ್ಥ್ಯ ಪಡೆದಿದೆ.

MiFi

ವೊಡಾಫೋನಿನ ಈ ಹೊಸ MiFi ಹಾಟ್‌ಸ್ಪಾಟ್‌ ಸಾಧನವು 150 Mbps ವರೆಗೆ ಡೇಟಾ ವೇಗವನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. 3G ಸಾಧನ ಮತ್ತು ವೈ-ಫೈ ವೈಶಿಷ್ಟ್ಯವನ್ನು ಹೊಂದಿರುವ ಬಳಕೆದಾರರು 4G ವೇಗವನ್ನು ಆನಂದಿಸಲು Vi ಯಿಂದ MiFi ಸಾಧನಕ್ಕೆ ಸಂಪರ್ಕ ಸಾಧಿಸಬಹುದು. ವೊಡಾಫೋನ್ ಐಡಿಯಾದ ಈ ಡಿವೈಸ್‌ ಒಟ್ಟು ಏಳು ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಒದಗಿಸುತ್ತದೆ. ಹಾಗೆಯೇ ಮೈಕ್ರೊ ಎಸ್‌ಡಿ ಕಾರ್ಡ್‌ಗಳನ್ನು 32GB ವರೆಗೆ ತೆಗೆದುಕೊಳ್ಳಬಹುದು.

150 Mbps

ಇನ್ನು ಈ ಡಿವೈಸ್‌ 150 Mbps ವರೆಗೆ ಡೌನ್‌ಲಿಂಕ್ ಅಥವಾ ಡೌನ್‌ಲೋಡ್ ವೇಗವನ್ನು ತಲುಪಿಸಲು ಮತ್ತು 50 Mbps ವೇಗವನ್ನು ಅಪ್‌ಲಿಂಕ್ ಮಾಡಲು ಸಮರ್ಥವಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಆದಾಗ್ಯೂ, ವೇಗವು ನಿಮ್ಮ ಪ್ರದೇಶದಲ್ಲಿನ 4G ಸಿಗ್ನಲ್ ಬಲವನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. Vi R217 4G MiFi ನಲ್ಲಿ LTE ಬ್ಯಾಂಡ್‌ಗಳು 800/900/1800/2100/2500Mhz, 900/1800 Mhz ನ GSM ಬ್ಯಾಂಡ್‌ಗಳು ಮತ್ತು 900/1800/2100Mhz ನ UMTS ಬ್ಯಾಂಡ್‌ಗಳನ್ನು ಹೊಂದಿದೆ.

ಐಡಿಯಾ

ವೊಡಾಫೋನ್ ಐಡಿಯಾ ಅಥವಾ Vi 4G MiFi ಸಾಧನದ ಬೆಲೆಯು 3,199ರೂ. ಆಗಿದೆ. ಜಿಯೋ, ಏರ್‌ಟೆಲ್‌ ಸೇರಿದಂತೆ ಇತರೆ ಹಾಟ್‌ಸ್ಪಾಟ್‌ ಡಿವೈಸ್‌ಗಳಿಗೆ ಹೋಳಿಸಿದರೇ ವಿ ಹಾಟ್‌ಸ್ಪಾಟ್‌ ಸಾಧನದ ದರ ದುಬಾರಿ ಅನಿಸಲಿದೆ. ಜಿಯೋ, ಏರ್‌ಟೆಲ್‌ ಹಾಗೂ ಇತರೆ ಕೆಲವು ಬ್ರ್ಯಾಂಡ್‌ಗಳ ಹಾಟ್‌ಸ್ಪಾಟ್‌ ಡಿವೈಸ್‌ಗಳು 2,000 ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸಬಹುದು.

Most Read Articles
Best Mobiles in India

English summary
The MiFi device is capable of delivering data speeds up to 150 Mbps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X