ವಿ ನಿಂದ 549ರೂ.ಗಳ ಪ್ಲ್ಯಾನ್ ಘೋಷಣೆ: ಅರ್ಧ ವರ್ಷದ ಮಾನ್ಯತೆ!
ವಿ ಟೆಲಿಕಾಂ (vi) ತನ್ನ ಗ್ರಾಹಕರಿಗೆ ವಿವಿಧ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದ್ದು, ಈ ನಡುವೆ ಹೊಸದೊಂದು ರೀಚಾರ್ಜ್ ಪ್ಲ್ಯಾನ್ ಅನ್ನು ದಿಢೀರನೇ ಘೋಷಣೆ ಮಾಡಿದೆ. ಈ ಮೂಲಕ ಗ್ರಾಹಕರು ಕೆಲವೇ ಕೆಲವು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಏರ್‌ಟೆಲ್ ಹಾಗೂ ಜಿಯೋಗೆ ಶಾಕ್ ನೀಡಿದಂತೆ ಆಗಿದೆ.
ಹೌದು, ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ಜಿಯೋ ಹಾಗೂ ಬಿಎಸ್‌ಎನ್‌ಎಲ್ ವಿರುದ್ಧ ಸ್ಪರ್ಧಿಸುತ್ತಿರುವ ವಿ ಈಗಾಗಲೇ ಸಾಕಷ್ಟು ಪ್ರಯೋಜನ ನೀಡುವ ಹಲವು ರೀಚಾರ್ಜ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿದ್ದು, ಇದರ ನಡುವೆ 549ರೂ. ಗಳ ವಿಶೇಷ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಈ ಪ್ಲ್ಯಾನ್‌ನ ಪ್ರಮುಖ ವಿಶೇಷತೆ ಎಂದರೆ ಮಾನ್ಯತೆಯ ದಿನಗಳು. ಹಾಗಿದ್ರೆ, ಬನ್ನಿ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯ ಲಭ್ಯ?, ಎಷ್ಟು ದಿನಗಳ ಮಾನ್ಯತೆ ಹೊಂದಿದೆ ಎಂಬುದನ್ನು ತಿಳಿದುಕೊಳ್ಳೋಣ.

ವಿ ಟೆಲಿಕಾಂ 549ರೂ. ಪ್ಲ್ಯಾನ್: ವಿ ಟೆಲಿಕಾಂ ಯಾವುದೇ ರೀತಿಯ ಸದ್ದಿಲ್ಲದೆ ಹಾಗೂ ಪೂರ್ವ ಮಾಹಿತಿ ನೀಡದೆ ಇದ್ದಕ್ಕಿದ್ದಂತೆ ಈ 549ರೂ. ಗಳ ರೀಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದ್ದು, ಈ ಪ್ಲ್ಯಾನ್ ಅನ್ನು ದೇಶಾದ್ಯಂತ ಇರುವ ಗ್ರಾಹಕರು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಪ್ಲ್ಯಾನ್ ಸಂಪೂರ್ಣವಾಗಿ ಸಿಂಧುತ್ವವನ್ನು ಬಯಸುವ ಮತ್ತು ಡೇಟಾ ಪ್ರಯೋಜನಗಳ ಬಗ್ಗೆ ಕಾಳಜಿ ವಹಿಸದ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.
ಈ ಹೊಸ ಪ್ಲ್ಯಾನ್‌ನಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಓಟಿಟಿ ಸೇವೆಬೇಕು, ಹೆಚ್ಚಿನ ವಿಡಿಯೋ ವೀಕ್ಷಣೆ ಮಾಡಬೇಕು, ಉಚಿತ ಕರೆ ಹಾಗೂ ಇನ್ನಿತರೆ ಸೇವೆ ಸೇವೆ ಎನ್ನುವವರಿಗೆ ಇದು ಸರಿಯಾಗುವುದಿಲ್ಲ. ಬದಲಾಗಿ ಮೊದಲೇ ತಿಳಿಸಿದಂತೆ ದೀರ್ಘ ಸಮಯದವರೆಗೆ ನಿಮ್ಮ ಸಿಮ್ ಸಕ್ರಿಯವಾಗಿ ಇಟ್ಟುಕೊಳ್ಳಲು ಈ ರೀಚಾರ್ಜ್ ಪ್ಲ್ಯಾನ್ ಉತ್ತಮವಾಗಿದೆ.
ವಿ ಟೆಲಿಕಾಂ 549ರೂ.ಗಳ ಪ್ಲ್ಯಾನ್ ಪ್ರಯೋಜನಗಳು: ಈ ವಿಶೇಷ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಬಳಕೆದಾರರು ಒಟ್ಟಾರೆ 1GB ಡೇಟಾ ಮಾತ್ರ ಲಭ್ಯವಾಗಲಿದೆ. ಉಳಿದಂತೆ ಹೆಚ್ಚುವರಿ ಡೇಟಾ ಬೇಕು ಎಂದರೆ ಡೇಟಾ ವೋಚರ್‌ಗಳಿಗೆ ಚಂದಾದಾರರಾಗಬೇಕಾಗುತ್ತದೆ. ಇದಿಷ್ಟು ಮಾತ್ರವಲ್ಲ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳಿಗೆ 2.5 ಪೈಸೆಯನ್ನು ಪ್ರತಿ ಸೆಕೆಂಡಿಗೆ ಪಾವತಿ ಮಾಡಬೇಕಾಗುತ್ತದೆ. ಈ ಮೂಲಕ ನೀವು ಸೀಮಿತ ಟಾಕ್‌ಟೈಮ್ ಅನ್ನು ಮಾತ್ರ ಪಡೆಯುತ್ತೀರಿ.
ಈ ರೀಚಾರ್ಜ್ ಪ್ಲ್ಯಾನ್ ಯಾರಿಗೆ ಉತ್ತಮ: ವಿ ಟೆಲಿಕಾಂ 549ರೂ. ಗಳ ಪ್ಲ್ಯಾನ್ 180 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಂದರೆ ಹತ್ತಿರತ್ತಿರ ಅರ್ಧ ವರ್ಷದ ವರೆಗೆ ಇದನ್ನು ಬಳಕೆ ಮಾಡಬಹುದು. ಈ ಮೂಲಕ ಯಾರೆಲ್ಲಾ ಸೆಕೆಂಡರಿ ಸಿಮ್ ಆಗಿ ವಿ ಅನ್ನು ಬಳಕೆ ಮಾಡುತ್ತಾರೋ ಅವರಿಗೆ ಅತ್ಯಾನುಕೂಲ. ಇದರಿಂದ ನಿಮ್ಮ ಸಿಮ್ ದೀರ್ಘಾವಧಿಯವರೆಗೆ ಸಕ್ರಿಯವಾಗಿರಲಿದೆ.

ಈ ಪ್ಲ್ಯಾನ್‌ನಲ್ಲಿ ಬೇಸರ ಉಂಟುಮಾಡುವ ವಿಷಯ ಇದು: ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಉಚಿತ ಕರೆ ಇಲ್ಲ, ಇಂಟರ್ನೆಟ್ ಇಲ್ಲ ಸರಿ. ಆದರೆ ಎಸ್‌ಎಮ್‌ಎಸ್ ಸಹ ಇಲ್ಲದಿರುವುದು ಖಂಡಿತಾ ಬಳಕೆದಾರರು ಬೇಸರಪಡುವ ವಿಷಯವಾಗಿದೆ. 549ರೂ. ಗಳನ್ನು ಪಾವತಿಸಿ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಒಂದೇ ಒಂದು ಎಸ್‌ಎಮ್‌ಎಸ್ ಅನ್ನು ಉಚಿತವಾಗಿ ನೀಡುವುದಿಲ್ಲ ಎಂದರೆ ನಿರಾಶೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಅದಾಗ್ಯೂ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಪೋರ್ಟ್-ಔಟ್ ಎಸ್‌ಎಂಎಸ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ವಿ ಬಹಿರಂಗಪಡಿಸಿಲ್ಲ. ವಿಷಯ ಏನೆಂದರೆ TRAI ನಿರ್ದೇಶನದಂತೆ ಗ್ರಾಹಕರು ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡದ ಯೋಜನೆಗೆ ಚಂದಾದಾರರಾಗಿದ್ದರೂ ಸಹ 1900 ಗೆ ಎಸ್‌ಎಮ್‌ಎಸ್ ಅನ್ನು ಕಳುಹಿಸಲು ಗ್ರಾಹಕರಿಗೆ ಟೆಲ್ಕೋಗಳು ಅನುವು ಮಾಡಿಕೊಡಬೇಕಿದೆ.
ಈ ರೀಚಾರ್ಜ್ ಪ್ಲ್ಯಾನ್ ಬಳಕೆದಾರರಿಗೆ ಹಾಗೂ ಸಂಸ್ಥೆಗೆ ಯಾವ ರೀತಿಯಲ್ಲೂ ಸಹ ಸಹಾಯ ಮಾಡುವುದಿಲ್ಲ. ಅಂದರೆ ಈ ಪ್ಲ್ಯಾನ್‌ನಿಂದ ARPU ದರ ಹೆಚ್ಚಾಗುವುದಿಲ್ಲ. ಅದಾಗ್ಯೂ ಈ ಪ್ಲ್ಯಾನ್ ಅನ್ನು ಎಷ್ಟು ಜನ ಇಷ್ಟಪಡುತ್ತಾರೋ ಅಥವಾ ಎಷ್ಟರ ಮಟ್ಟಿಗೆ ಸಂಸ್ಥೆಗೆ ಹೆಸರು ತಂದುಕೊಡುತ್ತದೋ ಕಾದುನೋಡಬೇಕಿದೆ. ಈ ನಡುವೆ ವಿ ಕೆಲವು ವಾರಗಳ ಹಿಂದಷ್ಟೇ ಎರಡು ಹೊದ ಪ್ಲ್ಯಾನ್‌ಗಳನ್ನು ಪರಿಚಯಿಸಿತ್ತು.

ಈ 368ರೂ. ಮತ್ತು 369ರೂ. ಪ್ರೀಪೇಯ್ಡ್ ಪ್ಲಾನ್‌ಗಳು ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನವನ್ನು ನೀಡಲಿವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಇದರಿಂದ ಲಭ್ಯ. ಇದಲ್ಲದೇ ಈ ಪ್ಲ್ಯಾನ್‌ಗಳು ವಿಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಹಾಗೂ ಓಟಿಟಿ ಪ್ರಯೋಜನಗಳನ್ನೂ ಸಹ ನೀಡಲಿವೆ.


Click it and Unblock the Notifications








