ವಿ ನಿಂದ 296 ರೂ. ಗಳ ರೀಚಾರ್ಜ್ ಪ್ಲ್ಯಾನ್; ಎಷ್ಟು ದಿನದ ಮಾನ್ಯತೆ?
ಪ್ರಮುಖ ಟೆಲಿಕಾಂ ಸೇವೆಗಳಾದ ಏರ್‌ಟೆಲ್, ಜಿಯೋ ಹಾಗೂ ವಿ ವಿಭಿನ್ನವಾದ ರೀಚಾರ್ಜ್ ಸೇವೆಗಳನ್ನು ನೀಡುವ ಮೂಲಕ ಅವರನ್ನು ಸೆಳೆಯಲು ಮುಂದಾಗಿವೆ. ಅದರಂತೆ ವಿ ಏರ್‌ಟೆಲ್ ಹಾಗೂ ಜಿಯೋ ವಿರುದ್ಧ ಸೆಣಸಲು ಮತ್ತೊಂದು ಹೊಸ ಪ್ಲ್ಯಾನ್ ಬಗ್ಗೆ ಘೋಷಣೆ ಮಾಡಿದೆ.
ಹೌದು, ಟೆಲಿಕಾಂ ಕ್ಷೇತ್ರದಲ್ಲಿ ಎಲ್ಲಾ ಸಂಸ್ಥೆಗಳು ಒಂದಕ್ಕೊಂದು ತೀವ್ರ ಪೈಪೋಟಿಯಲ್ಲಿ ವಿವಿಧ ಆಫರ್‌ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಾ ಬರುತ್ತಿವೆ. ಅದರಂತೆ ಏರ್‌ಟೆಲ್ ಹಾಗೂ ಜಿಯೋಗೆ ಪ್ರತಿಸ್ಪರ್ಧಿಯಾಗಿರುವ ವಿ ಇದೀಗ 296 ರೂ. ಗಳ ರೀಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ. ಈ ಪ್ಲ್ಯಾನ್ ಮೂಲಕ ಬೃಹತ್ ಡೇಟಾ ಪ್ಯಾಕ್‌ನೊಂದಿಗೆ ಬಳಕೆದಾರರು 30 ದಿನಗಳ ಮಾನ್ಯತೆಯನ್ನು ಪಡೆದುಕೊಳ್ಳಬಹುದಾಗಿದೆ.

ವೊಡಾಫೋನ್ ಐಡಿಯಾದ 296 ರೂ. ಗಳ ಪ್ಲ್ಯಾನ್
ವೊಡಾಫೋನ್ ಐಡಿಯಾದ ಈ 296 ರೂ. ಗಳ ಪ್ಲ್ಯಾನ್ ಮೂಲಕ ಬಳಕೆದಾರರು 25GB ಯ ಬೃಹತ್ ಡೇಟಾದ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ಅನಿಯಮಿತ ವಾಯ್ಸ್‌ಕಾಲ್ ಮತ್ತು ಪ್ರತಿದಿನವೂ 100 ಉಚಿತ ಎಸ್‌ಎಮ್‌ಎಸ್ ನ ಪ್ರಯೋಜನ ಸಿಗಲಿದೆ. ಈ ಹೊಸ 296 ರೂ. ಗಳ ಪ್ಲ್ಯಾನ್ ಈಗಾಗಲೇ ಏರ್‌ಟೆಲ್ ಹಾಗೂ ಜಿಯೋ ಬಳಕೆದಾರರಿಗೆ ಲಭ್ಯವಿದ್ದು, ಇವುಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಈಗ ವೊಡಾಫೋನ್ ಐಡಿಯಾ ಈ ಪ್ಲ್ಯಾನ್ ಘೋಷಣೆ ಮಾಡಿದೆ.
ಈ ಹೊಸ ಪ್ಲ್ಯಾನ್ ಯಾರಿಗೆ ಅನುಕೂಲ
ವೊಡಾಫೋನ್ ಐಡಿಯಾದ 296 ರೂ. ಗಳ ಹೊಸ ಪ್ಲ್ಯಾನ್ 30 ದಿನಗಳ ರೌಂಡ್ ಆಫ್ ಮಾನ್ಯತೆ ಮತ್ತು ಬೃಹತ್ ಡೇಟಾದೊಂದಿಗೆ ಅಲ್ಪಾವಧಿಯ ಯೋಜನೆಯನ್ನು ಬಯಸುವ ಬಳಕೆದಾರರಿಗಾಗಿ ಪರಿಚಯಿಸಲಾಗಿದೆ ಎಂದು ವಿ ತಿಳಿಸಿದೆ. ಈ ಮೂಲಕ ಬಳಕೆದಾರರು ಈ ಪ್ಲ್ಯಾನ್‌ನಲ್ಲಿ ಕೆಲವು ಪ್ರಯೋಜನವನ್ನಷ್ಟೇ ಪಡೆದುಕೊಳ್ಳಬಹುದಾಗಿದೆ.

296 ರೂ. ಪ್ಲ್ಯಾನ್‌ನ ಹೆಚ್ಚುವರಿ ಪ್ರಯೋಜನ ಏನು?
ಈ ಪ್ಲ್ಯಾನ್‌ನಲ್ಲಿಅನಿಯಮಿತ ಪ್ರಯೋಜನ ಇರುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ಆದರೆ, ಇದರ ಹೆಚ್ಚುವರಿ ಪ್ರಯೋಜನ ಎಂದರೆ ವಿ ಮೂವಿಸ್& ಟಿವಿ ಸೌಲಭ್ಯ ಮಾತ್ರ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಈ ಪ್ಲ್ಯಾನ್ 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗಿದ್ರೆ, ಏರ್‌ಟೆಲ್ ಹಾಗೂ ಜಿಯೋದ ಇದೇ ದರದ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯ ಇದೆ ಎನ್ನುವುದನ್ನು ನೋಡೋಣ ಬನ್ನಿ.
ಏರ್‌ಟೆಲ್‌ನ 296 ರೂ. ಪ್ಲ್ಯಾನ್
ಏರ್‌ಟೆಲ್ ತನ್ನ 296 ರೂ. ಗಳ ರೀಚಾರ್ಜ್ ಪ್ಲ್ಯಾನ್‌ನಲ್ಲಿ 25GB ಡೇಟಾ ಒದಗಿಸಲಿದ್ದು, ಅನಿಯಮಿತ ವಾಯ್ಸ್ ಕಾಲ್ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್ ಸೇವೆ ಸಿಗಲಿದೆ. ಜೊತೆಗೆ ಹಲವು ಪ್ರಯೋಜನಗಳು ಬಳಕೆದಾರರಿಗೆ ಲಭ್ಯವಾಗಲಿದ್ದು, ಅಪೊಲೊ 24|7 ಸರ್ಕಲ್, ಫಾಸ್ಟ್ಯಾಗ್ ನಲ್ಲಿ 100 ರೂ. ಗಳ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ, ಉಚಿತ ಹಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಸೇವೆ ಪಡೆದುಕೊಳ್ಳಬಹುದಾಗಿದೆ. ಇದರ ಮಾನ್ಯತೆ 30 ದಿನಗಳವರೆಗೆ ಇರಲಿದೆ.
ರಿಲಯನ್ಸ್ ಜಿಯೋದ 296 ರೂ. ಪ್ಲ್ಯಾನ್
ಜಿಯೋದ ಸಂಸ್ಥೆಯು ಸಹ ಇದೇ ಇದರ ಪ್ಲ್ಯಾನ್ ಹೊಂದಿದ್ದು, ಈ ಮೂಲಕ ಬಳಕೆದಾರರು 25GB ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯದ ಜೊತೆಗೆ ದಿನವೂ 100 ಎಸ್‌ಎಮ್‌ಎಸ್ ಸೇವೆ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಹಾಗೂ ಜಿಯೋ ಸೆಕ್ಯುರಿಟಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರ ಮಾನ್ಯತೆ ಸಹ 30 ದಿನಗಳಾಗಿವೆ.

ಹಾಗಿದ್ರೆ, ಈ ಮೂರರಲ್ಲಿ ಯಾವುದು ಉತ್ತಮ ?
ಏರ್‌ಟೆಲ್, ಜಿಯೋ ಹಾಗೂ ವಿ ಒಂದೇ ದರದ ರೀಚಾರ್ಜ್‌ಪ್ಲ್ಯಾನ್ ಹೊಂದಿವೆಯಾದರೂ ಇತರೆ ಪ್ರಯೋಜನದ ವಿಚಾರಕ್ಕೆ ಬಂದರೆ ಹಲವು ವ್ಯತ್ಯಾಸ ಇವೆ. ಅಂದರೆ ವಿ ಕೇವಲ ಒಂದು ಹೆಚ್ಚುವರಿ ಪ್ರಯೋಜನ ನೀಡಿದರೆ, ಜಿಯೋ ಹಾಗೂ ಏರ್‌ಟೆಲ್ ಬರೋಬ್ಬರಿ ನಾಲ್ಕು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಹೀಗಾಗಿ ಏರ್‌ಟೆಲ್ ಹಾಗೂ ಜಿಯೋದ ಬಳಕೆದಾರರು ಹಲವು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








