ವಿ ಸಂಸ್ಥೆಯಿಂದ ಎರಡು ಅಗ್ಗದ ಪ್ಲ್ಯಾನ್ ಲಾಂಚ್!...ಬೆದರಿದ ಜಿಯೋ, ಏರ್‌ಟೆಲ್!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ ಈಗಾಗಲೇ ಹಲವು ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಚಂದಾದಾರರನ್ನು ಆಕರ್ಷಿಸಿದೆ. ಅದೇ ಹಾದಿಯಲ್ಲಿ ಮತ್ತೆ ಮುಂದೆ ಸಾಗಿರುವ ವಿ ಟೆಲಿಕಾಂ ಇನ್ನಷ್ಟು ಚಂದಾದಾರರನ್ನು ತನ್ನ ತೆಕ್ಕೆಗೆ ಸೆಳೆಯಲು ಇದೀಗ ಮತ್ತೆ ಎರಡು ಹೊಸ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಹೌದು, ವಿ ಟೆಲಿಕಾಂ ನೂತನವಾಗಿ 198ರೂ. ಮತ್ತು 204ರೂ. ರೀಚಾರ್ಜ್ ಪ್ಲಾನ್‌ಗಳನ್ನು (vi new prepaid plan) ಬಿಡುಗಡೆ ಮಾಡಿದೆ. ಈ ನೂತನ ರೀಚಾರ್ಜ್ ಯೋಜನೆಗಳು ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಜೊತೆಗೆ ಇತರೆ ಭಿನ್ನ ಪ್ರಯೋಜನವನ್ನು ಈ ಪ್ಲ್ಯಾನ್‌ಗಳು ಒಳಗೊಂಡಿದೆ. ಹಾಗಾದರೆ ವಿ ಟೆಲಿಕಾಂನ ಈ ಎರರು ಪ್ಲ್ಯಾನ್ ಪ್ರಯೋಜನಗಳೆನು ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 198ರೂ. ರೀಚಾರ್ಜ್ ಯೋಜನೆ ಮಾಹಿತಿ : ವಿ ಟೆಲಿಕಾಂ ಹೊಸದಾಗಿ ಬಿಡುಗಡೆ ಮಾಡಿರುವ ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಒಟ್ಟು 500MB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ 198ರೂ. ಟಾಕ್‌ಟೈಮ್ ಅವಧಿ ಸಹ ದೊರೆಯುತ್ತದೆ. ಈ ಯೋಜನೆಯು ಗುಜರಾತ್ ಹಾಗೂ ಮುಂಬೈ ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯ.
ವಿ ಟೆಲಿಕಾಂ 204ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ : ವಿ ಟೆಲಿಕಾಂ ಹೊಸದಾಗಿ ಬಿಡುಗಡೆ ಮಾಡಿರುವ 204ರೂ ರೀಚಾರ್ಜ್ ಪ್ಲ್ಯಾನ್ ಸಹ ಒಟ್ಟು 30 ದಿನಗಳ ವ್ಯಾಲಿಡಿಟಿ ವಾಯ್ದೆ ಅನ್ನು ಪಡೆದಿದೆ. ಈ ಅವಧಿಯಲ್ಲಿ ಚಂದಾದಾರರಿಗೆ ಒಟ್ಟು 500MB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರ ಜೊತೆಗೆ ಈ ಪ್ಲ್ಯಾನಿನಲ್ಲಿ 204ರೂ. ಟಾಕ್‌ಟೈಮ್ ಅವಧಿ ಸಹ ಸಿಗಲಿದೆ. ಈ ಪ್ಲ್ಯಾನ್ ಗುಜರಾತ್ ಹಾಗೂ ಮುಂಬೈ ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯ.
ವಿ 601ರೂ. ರೀಚಾರ್ಜ್ ಪ್ಲಾನ್ ಮಾಹಿತಿ : ವಿ ಸಂಸ್ಥೆಯ 601ರೂ. ಪ್ರಿಪೇಯ್ಡ್ ಪ್ಲಾನ್ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಅನಿಯಮಿತ ಕರೆ, ನಿತ್ಯ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ನೀಡಲಿದೆ. ಇನ್ನು ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದ್ದು, ಒಟ್ಟು ವ್ಯಾಲಿಡಿಟಿ ಅವಧಿಗೆ 84GB ಡೇಟಾ ಸೌಲಭ್ಯ ಲಭ್ಯವಾಗಲಿದೆ.
ವಿ ಟೆಲಿಕಾಂ 369ರೂ. ರೀಚಾರ್ಜ್ ಪ್ಲಾನ್ ಮಾಹಿತಿ : ವಿ ಸಂಸ್ಥೆಯ 369ರೂ. ರೀಚಾರ್ಜ್ ಪ್ಲಾನ್ ಇದು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಅನಿಯಮಿತ ಧ್ವನಿ ಕರೆಯ ಸೌಲಭ್ಯ, ದಿನವೂ 2 GB ಡೇಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಖಚಿತ ಲಭ್ಯ. ಹಾಗೆಯೇ ಸನ್‌ನೆಕ್ಸ್ಟ್ ಓಟಿಟಿ ಚಂದಾದಾರಿಕೆ ಸಹ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಸಿಗಲಿದೆ.
ವಿ ಟೆಲಿಕಾಂ 359ರೂ. ರೀಚಾರ್ಜ್ ಪ್ಲಾನ್ ಮಾಹಿತಿ ಇಲ್ಲಿದೆ : ವಿ ಟೆಲಿಕಾಂ 359ರೂ ರೀಚಾರ್ಜ್ ಪ್ಲಾನ್ 28 ದಿನಗಳ ವ್ಯಾಲಿಡಿಟಿ ವಾಯ್ದೆ ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿನಿತ್ಯ 3 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ 100 ಎಸ್‌ಎಂಎಸ್ ಪ್ರಯೋಜನ ಕೂಡ ಲಭ್ಯವಿದೆ.


Click it and Unblock the Notifications








