ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಜೊತೆಗೆ 48GB ಎಕ್ಸ್‌ಟ್ರಾ ಡೇಟಾ ಸಿಗುತ್ತೆ!
ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳೊಂದಿಗೆ ಪ್ರಬಲ ಪೈಪೋಟಿ ನೀಡುತ್ತಾ ಮುನ್ನಡೆದಿರುವ ವಿ ಟೆಲಿಕಾಂ (Vi), ತನ್ನ ಕೆಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ವಿ ಟೆಲಿಕಾಂ ಸಂಸ್ಥೆಯ ಬಹುತೇಕ ಪ್ರೀಪೇಯ್ಡ್ ಯೋಜನೆಗಳು ದೈನಂದಿನ ಡೇಟಾ ಸೌಲಭ್ಯ ಪಡೆದಿವೆ. ಆ ಪೈಕಿ ಸಂಸ್ಥೆಯ ಇನ್ನು ಕೆಲವು ಪ್ಲ್ಯಾನ್‌ಗಳು ಡೇಟಾ, ಬಿಗ್ ವ್ಯಾಲಿಡಿಟಿ ಜೊತೆಗೆ ಓಟಿಟಿ ಪ್ರಯೋಜನ ಸಹ ಪಡೆದಿವೆ. ಆ ಪೈಕಿ ಹೆಚ್ಚಿವರಿಯಾಗಿ 48GB ಡೇಟಾ ಪ್ರಯೋಜನ ಪಡೆದಿರುವ ರೀಚಾರ್ಜ್ ಪ್ಲ್ಯಾನ್‌ವೊಂದು ಚಂದಾದಾರರನ್ನು ಆಕರ್ಷಿಸಿದೆ.
ಹೌದು, ವಿ ಟೆಲಿಕಾಂನ ಕೆಲವು ಪ್ಲ್ಯಾನ್‌ಗಳು ಹೆಚ್ಚುವರಿ ಎಕ್ಸ್‌ಟ್ರಾ ಡೇಟಾ ಪ್ರಯೋಜನ ಪಡೆದಿವೆ. ಅವುಗಳ ಪೈಕಿ 901ರೂ. ರೀಚಾರ್ಜ್ ಪ್ಲ್ಯಾನ್ 48GB ಎಕ್ಸ್‌ಟ್ರಾ ಡೇಟಾ ಪ್ರಯೋಜನದೊಂದಿಗೆ ಗಮನ ಸೆಳೆದಿದೆ. ಇದರೊಂದಿಗೆ ಈ ಯೋಜನೆಯು ದೈನಂದಿನ ಡೇಟಾ, ದೀರ್ಘ ವ್ಯಾಲಿಡಿಟಿ, ವಾಯಿಸ್ ಕರೆ, ಎಸ್‌ಎಮ್‌ಎಸ್ ಪ್ರಯೋಜನಗಳನ್ನು ಕೂಡಾ ಪಡೆದುಕೊಂಡಿದೆ. ಹಾಗಾದರೇ ವಿ ಟೆಲಿಕಾಂನ ಈ ಪ್ಲ್ಯಾನಿನ ಇತರೆ ಪ್ರಯೋಜನ ಬಗ್ಗೆ ಮತ್ತು ಕೆಲವು ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 901ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂ ಸಂಸ್ಥೆಯ 901ರೂ. ಪ್ರೀಪೇಯ್ಡ್ ಯೋಜನೆಯು 3 GB ದೈನಂದಿನ ಡೇಟಾ ಪ್ರಯೋಜನ ಪಡೆದಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಬಳಕೆದಾರರಿಗೆ ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ವಿಕೇಂಡ್ ಡೇಟಾ ರೋಲ್‌ಓವರ್ ಹಾಗೂ ಹೆಚ್ಚುವರಿಯಾಗಿ 48GB ಡೇಟಾ ಪ್ರಯೋಜನಗಳ ಗ್ರಾಹಕರಿಗೆ ಸಿಗಲಿದೆ.
ವಿ ಟೆಲಿಕಾಂ 601ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂನ 601ರೂ. ಪ್ರೀಪೇಯ್ಡ್ ಪ್ಲ್ಯಾನ್ 3 GB ದೈನಂದಿನ ಡೇಟಾ ಪ್ರಯೋಜನ ಪಡೆದಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಬಳಕೆದಾರರಿಗೆ ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ವಿಕೇಂಡ್ ಡೇಟಾ ರೋಲ್‌ಓವರ್ ಹಾಗೂ ಹೆಚ್ಚುವರಿಯಾಗಿ 16GB ಡೇಟಾ ಪ್ರಯೋಜನಗಳ ಗ್ರಾಹಕರಿಗೆ ದೊರೆಯಲಿದೆ.
ವಿ ಟೆಲಿಕಾಂ 1066ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂನ 1066ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರತಿದಿನ 2 GB ಡೇಟಾ ಪ್ರಯೋಜನ ಹೊಂದಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಬಳಕೆದಾರರಿಗೆ ಈ ಪ್ಲ್ಯಾನಿನಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ವಿಕೇಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳ ಗ್ರಾಹಕರಿಗೆ ದೊರೆಯಲಿದೆ.
ವಿ ಟೆಲಿಕಾಂ 902ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂನ 902ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರತಿದಿನ 2 GB ಡೇಟಾ ಪ್ರಯೋಜನ ಹೊಂದಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಬಳಕೆದಾರರಿಗೆ ಈ ಪ್ಲ್ಯಾನಿನಲ್ಲಿ ಸನ್ ನೆಕ್ಸ್ಟ್ ಟಿವಿ ಚಂದಾದಾರಿಕೆ, ವಿಕೇಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳ ಗ್ರಾಹಕರಿಗೆ ಸಿಗಲಿದೆ.


Click it and Unblock the Notifications








