Home
ಸುದ್ದಿಜಾಲ

ಅಧಿಕ ಡೇಟಾ ಬಳಸುವ ಗ್ರಾಹಕರಿಗೆ ಸಿಹಿಸುದ್ದಿ; ಈ ಪ್ಲ್ಯಾನಿನಲ್ಲಿ ಎಕ್ಸ್‌ಟ್ರಾ 50GB ಡೇಟಾ ಸಿಗುತ್ತೆ!

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಇತ್ತೀಚಿಗೆ ರೀಚಾರ್ಜ್‌ ಯೋಜನೆಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಬಿಸಿ ತುಪ್ಪವಾದಂತೆ ಆಗಿದೆ. ಅದಾಗ್ಯೂ, ಚಂದಾದಾರರ ಮನ ಗೆಲ್ಲಲು ಸಂಸ್ಥೆಗಳು ಹೆಚ್ಚುವರಿ ಕೊಡುಗೆ ನೀಡುವ ರೀಚಾರ್ಜ್‌ ಯೋಜನೆಗಳನ್ನು ಸಹ ತಿಳಿಸಿವೆ. ಆ ಪೈಕಿ ದೇಶದ ತೃತೀಯ ದೊಡ್ಡ ಟೆಲಿಕಾಂ ಸಂಸ್ಥೆಯಾದ ವಿ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್‌ ಯೋಜನೆವೊಂದರಲ್ಲಿ ಹೆಚ್ಚುವರಿಯಾಗಿ 50GB ಡೇಟಾ ಘೋಷಣೆ ಮಾಡಿದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದೆ.

ಹೌದು, ವಿ ಟೆಲಿಕಾಂನ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಹೆಚ್ಚುವರಿ ಎಕ್ಸ್‌ಟ್ರಾ ಡೇಟಾ ಪ್ರಯೋಜನ ಒಳಗೊಂಡಿವೆ. ಹಾಗೆಯೇ ವಿ ಟೆಲಿಕಾಂನ 451ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಇದೀಗ ಗ್ರಾಹಕರಿಗೆ ಹೆಚ್ಚುವರಿಯಾಗಿ 50GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅಲ್ಲದೇ ಈ ಯೋಜನೆಯು ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಇರುವುದು ಆಕರ್ಷಕ ಎನಿಸಿದೆ. ಹಾಗಾದರೇ ವಿ ಟೆಲಿಕಾಂನ ಈ ಯೋಜನೆಯ ಹಾಗೂ ಇತರೆ ಎಕ್ಸ್‌ಟ್ರಾ ಡೇಟಾದ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಧಿಕ ಡೇಟಾ ಬಳಸುವ ಗ್ರಾಹಕರಿಗೆ ಸಿಹಿಸುದ್ದಿ; ಈ ಪ್ಲ್ಯಾನಿನಲ್ಲಿ ಎಕ್ಸ್‌ಟ್ರಾ 50GB

ವಿ ಟೆಲಿಕಾಂ 451ರೂ. ಪೋಸ್ಟ್‌ಪೇಯ್ಡ್‌ ಯೋಜನೆ

ವಿ ಟೆಲಿಕಾಂ ಸಂಸ್ಥೆಯ 451ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ವಿ ಟೆಲಿಅಕಂ ಬಳಕೆದಾರರಿಗೆ ಅತ್ಯಂತ ಉತ್ತಮ ಹಾಗೂ ಬೇಸ್ ಪೋಸ್ಟ್‌ಪೇಯ್ಡ್ ಮೊಬೈಲ್ ರೀಚಾರ್ಜ್ ಆಗಿದೆ. ಈ ಯೋಜನೆಯಲ್ಲಿ 200GB ರೋಲ್‌ಓವರ್ ಪ್ರಯೋಜನದೊಂದಿಗೆ 50GB FUP ಡೇಟಾ ಸೌಲಭ್ಯ ಸಹ ಹಾಗೂ ಹೆಚ್ಚುವರಿ ಪ್ರಯೋಜನಗಳು ದೊರೆಯುತ್ತವೆ.

ಅಲ್ಲದೇ ಈ ಯೋಜನೆಯಲ್ಲಿ ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಹಾಗೂ ತಿಂಗಳಿಗೆ 3000 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಇದರೊಂದಿಗೆ ಹೆಚ್ಚುವರಿ ಪ್ರಯೋಜನಗಳಲ್ಲಿ ವಿ ಗೇಮ್ಸ್‌, ಸನ್‌ನೆಕ್ಸ್ಟ್‌, ಡಿಸ್ನಿ+ ಹಾಟ್‌ಸ್ಟಾರ್, ಸೋನಿಲೈವ್‌, EaseMyTrip ರಿಯಾಯಿತಿಗಳು ಲಭ್ಯ ಆಗಲಿವೆ.

ವಿ ಟೆಲಿಕಾಂ 901ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂ ಸಂಸ್ಥೆಯ 901ರೂ. ಪ್ರೀಪೇಯ್ಡ್‌ ಯೋಜನೆಯು 3GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 70 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಬಳಕೆದಾರರಿಗೆ ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌, ವಿಕೇಂಡ್ ಡೇಟಾ ರೋಲ್‌ಓವರ್ ಹಾಗೂ ಹೆಚ್ಚುವರಿಯಾಗಿ 48GB ಡೇಟಾ ಪ್ರಯೋಜನಗಳ ಗ್ರಾಹಕರಿಗೆ ಸಿಗಲಿದೆ.

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್‌

ವಿ ಟೆಲಿಕಾಂನ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ 3 GB ದೈನಂದಿನ ಡೇಟಾ ಪ್ರಯೋಜನ ಪಡೆದಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಲಭ್ಯ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್‌, ವಿಕೇಂಡ್ ಡೇಟಾ ರೋಲ್‌ಓವರ್ ಹಾಗೂ ಹೆಚ್ಚುವರಿಯಾಗಿ 16GB ಡೇಟಾ ಪ್ರಯೋಜನಗಳ ಗ್ರಾಹಕರಿಗೆ ಸಿಗಲಿದೆ.

ವಿ ಟೆಲಿಕಾಂ 902ರೂ. ಪ್ರೀಪೇಯ್ಡ್‌ ಪ್ಲ್ಯಾನ್‌

ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್‌ ಪ್ರತಿದಿನ 2 GB ಡೇಟಾ ಪ್ರಯೋಜನ ಹೊಂದಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಓಟಿಟಿ ಸೌಲಭ್ಯಗಳು ಸಿಗಲಿವೆ.

Best Mobiles in India

English summary
Vi is Offering 50GB Additional Data with Rs 451 Postpaid Plan. Check out other benefits and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+