Home
ಸುದ್ದಿಜಾಲ

ಈ ಮೊಬೈಲ್‌ ರೀಚಾರ್ಜ್‌ ಪ್ಲ್ಯಾನಿನ ಸೌಲಭ್ಯ ತಿಳಿದ್ರೆ, ವಾವ್‌ ಅಂತೀರಾ!..ಬೆಲೆ ಜಸ್ಟ್‌ 202ರೂ!

ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಾತಾವರಣ ಇದ್ದು, ವಿ ಟೆಲಿಕಾಂ ತನ್ನ ಚಂದಾದಾರರನ್ನು ಉಳಿಸಿಕೊಳ್ಳುವಲ್ಲಿ ಸರ್ಕಸ್ ನಡೆಸುತ್ತಾ ಸಾಗಿದೆ. ಸಂಸ್ಥೆಯ ಗ್ರಾಹಕರನ್ನು ಸೆಳೆಯಲು ಅಧಿಕ ಡೇಟಾ ಹಾಗೂ ಇತರೆ ಪ್ರಯೋಜನದ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿದೆ. ಅದೇ ಹಾದಿಯಲ್ಲಿ ಸಾಗಿರುವ ವಿ ಸಂಸ್ಥೆಯು ಈಗ ಜಬರ್ದಸ್ತ್ ಪ್ಲ್ಯಾನ್‌ವೊಂದನ್ನು ಪರಿಚಯಿಸಿ ಗಮನ ಸೆಳೆದಿದೆ.

ಹೌದು, ದೇಶದ ತೃತೀಯ ದೊಡ್ಡ ಟೆಲಿಕಾಂ ಸಂಸ್ಥೆ ಎಂದು ಗುರುತಿಸಿಕೊಂಡಿರುವ ವಿ ಟೆಲಿಕಾಂ ಕಂಪನಿಯು ಈಗ ಹೊಸದಾಗಿ 202ರೂ. ಬೆಲೆಯ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 13 ಓಟಿಟಿ ಚಂದಾದಾರಿಕೆ ಪ್ರಯೋಜನ ಪಡೆದಿರುವುದು ಪ್ರಮುಖ ಹೈಲೈಟ್‌ ಎನಿಸಿಕೊಂಡಿದೆ.

ಈ ಮೊಬೈಲ್‌ ಪ್ಲ್ಯಾನಿನ ಸೌಲಭ್ಯ ತಿಳಿದ್ರೆ, ವಾವ್‌ ಅಂತೀರಾ!..ಬೆಲೆ ಜಸ್ಟ್‌ 202ರೂ!

ಹಾಗೆಯೇ ಈ ಯೋಜನೆಯಲ್ಲಿ ಇತರೆ ಹೆಚ್ಚುವರಿ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಈ ಯೋಜನೆಯು ಪ್ರಸ್ತುತ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದ್ದು, ಇದು ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸುವುದಿಲ್ಲ. ಹಾಗಾದರೇ ವಿ ಟೆಲಿಕಾಂನ ಹೊಸ 202ರೂ. ರೀಚಾರ್ಜ್‌ ಯೋಜನೆ ಬಗ್ಗೆ ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಈ ಮೊಬೈಲ್‌ ಪ್ಲ್ಯಾನಿನ ಸೌಲಭ್ಯ ತಿಳಿದ್ರೆ, ವಾವ್‌ ಅಂತೀರಾ!..ಬೆಲೆ ಜಸ್ಟ್‌ 202ರೂ!

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜಿಯೋ, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ಜಿಯೋ ಇದೀಗ ಮತ್ತೆ ದೀರ್ಘಾವಧಿ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿದೆ. ಆ ಪೈಕಿ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯ ಒಂದು ಪ್ಲ್ಯಾನ್‌ ಹೈ ಎಂಡ್‌ ಪ್ರೈಸ್‌ ಪಡೆದಿದ್ದು, ಅಚ್ಚರಿ ಮೂಡಿಸಿದೆ.

ವಿ ಟೆಲಿಕಾಂ 202ರೂ. ರೀಚಾರ್ಜ್‌ ಪ್ಲಾನ್ ಪ್ರಯೋಜನಗಳು

ವಿ ಟೆಲಿಕಾಂನ 202ರೂ. ರೀಚಾರ್ಜ್‌ ಪ್ಲಾನ್ ಯೋಜನೆಯಲ್ಲಿ ಡಿಸ್ನಿ+ ಹಾಟ್‌ ಸ್ಟಾರ್‌, ಶೆಮರೂ ಮಿ, ಯುಪ್ ಟಿವಿ, ಸೋನಿ ಲೈವ್, ಸನ್‌ ನೆಕ್ಸ್ಟ್‌, ಡಿಸ್ಕವರಿ+, ಹಂಗಾಮಾ ಸೇರಿದಂತೆ ಒಟ್ಟು 13 ಓಟಿಟಿಗಳ 30 ದಿನಗಳ ಚಂದಾದಾರಿಕೆಯ ಪ್ರಯೋಜನ ಒಳಗೊಂಡಿದೆ.

ಇನ್ನುಳಿದಂತೆ ವಿ ಟೆಲಿಕಾಂನ 202ರೂ. ಯೋಜನೆಯು ವಿ ಮೂವೀಸ್‌ ಮತ್ತು ಟಿವಿ ಪ್ರೊ ಚಂದಾದಾರಿಕೆ ಪ್ರವೇಶವನ್ನು ಹೊರತುಪಡಿಸಿ, ಯೋಜನೆಯು ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿಲ್ಲ. ಸದ್ಯ ಈ ಯೋಜನೆಯು ವಿ ಅಪ್ಲಿಕೇಶನ್‌ನಲ್ಲಿ ಕಾಣಿಸುತ್ತದೆ. ಆದರೆ ಸದ್ಯಕ್ಕೆ ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಸ್ಟ್‌ ಮಾಡಲಾಗಿಲ್ಲ.

ಈ ಮೊಬೈಲ್‌ ಪ್ಲ್ಯಾನಿನ ಸೌಲಭ್ಯ ತಿಳಿದ್ರೆ, ವಾವ್‌ ಅಂತೀರಾ!..ಬೆಲೆ ಜಸ್ಟ್‌ 202ರೂ!

ವಿ 399ರೂ. ರೀಚಾರ್ಜ್‌ ಪ್ಲ್ಯಾನ್ ಸೌಲಭ್ಯಗಳು

ವಿ ಕಂಪನಿಯ 399ರೂ. ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಸೌಲಭ್ಯ ದೊರೆಯುತ್ತದೆ. ಡೇಟಾ ಜೊತೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನ ಅಲ್ಲದೇ ನಿತ್ಯವು 100 ಎಸ್‌ಎಂಎಸ್ ದೊರೆಯುತ್ತದೆ. ಇಷ್ಟೇ ಅಲ್ಲದೇ ಉಚಿತವಾಗಿ 5GB ಡೇಟಾ ಸೌಲಭ್ಯ ಲಭ್ಯ ಇದ್ದು, 3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಕೂಡಾ ಲಭ್ಯ.

ವಿ 719ರೂ. ರೀಚಾರ್ಜ್‌ ಪ್ಲ್ಯಾನ್ ಸೌಲಭ್ಯಗಳು

ವಿ ಕಂಪನಿಯ 719ರೂ. ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ದೈನಂದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಡೇಟಾ ಜೊತೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನ ಅಲ್ಲದೇ ನಿತ್ಯವು 100 ಎಸ್‌ಎಂಎಸ್ ಖಚಿತ ಸಿಗಲಿದೆ. ಇದರ ಜೊತೆಗೆ ಉಚಿತವಾಗಿ 5GB ಡೇಟಾ ಸೌಲಭ್ಯ ಸಿಗಲಿದೆ. ಜೊತೆಗೆ ವಿಕೆಂಡ್‌ ಡೇಟಾ ರೋಲ್‌ಓವರ್ ಪ್ರಯೋಜನ ಕೂಡಾ ಸಿಗಲಿದೆ.

Best Mobiles in India

English summary
Vi launched a new plan with 13 OTT subscription benefits. check out all benefits here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+