Home
ಸುದ್ದಿಜಾಲ

ಅತೀ ಕಡಿಮೆ ಬೆಲೆಗೆ ಹೊಸ ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌; ಅತ್ಯುತ್ತಮ ಕೊಡುಗೆಗಳು!

ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (VI) ತನ್ನ ಗ್ರಾಹಕರಿಗೆ ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಸಂಸ್ಥೆಯು ಇದೀಗ ನೂತನವಾಗಿ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ್ದು, ಗ್ರಾಹಕರ ಗಮನ ಸೆಳೆದಿದೆ. ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಯೋಜನೆಗಳು 150ರೂ. ಗಳ ಒಳಗೆ ಇರುವುದು ಹೈಲೈಟ್‌ ಎನಿಸಿದೆ.

ಹೌದು, ವಿ ಟೆಲಿಕಾಂ ಸಂಸ್ಥೆಯು ನೂತನವಾಗಿ ಎರಡು ಅಗ್ಗದ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅವುಗಳು ಕ್ರಮವಾಗಿ 128ರೂ ಮತ್ತು 138ರೂ. ಆಗಿವೆ. ಈ ನೂತನ ಯೋಜನೆಗಳು ಅತ್ಯುತ್ತಮ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಗ್ರಾಹಕರು ತಮ್ಮ ಎರಡನೇ ಸಿಮ್‌ ಸಕ್ರಿಯ ಇಡಲು ಪೂರಕ ಎನಿಸುತ್ತವೆ. ಹಾಗಾದರೇ ವಿ ಟೆಲಿಕಾಂನ ಈ ಹೊಸ ಯೋಜನೆಗಳ ಬಗ್ಗೆ ಇತರೆ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಅತೀ ಕಡಿಮೆ ಬೆಲೆಗೆ ಹೊಸ ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌; ಅತ್ಯುತ್ತಮ ಕೊಡುಗೆಗಳು!

ವಿ ಟೆಲಿಕಾಂ 128ರೂ. ರೀಚಾರ್ಜ್‌ ಯೋಜನೆ

ವಿ ಟೆಲಿಕಾಂ (Vi Telecom) ಸಂಸ್ಥೆಯ ಈ ನೂತನ 128ರೂ. ಯೋಜನೆಯು 18 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ಯೋಜನೆಯು 100MB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಇದರೊಂದಿಗೆ ಸ್ಥಳೀಯ/ರಾಷ್ಟ್ರೀಯ ಕರೆಗಳನ್ನು 2.5 ಪೈಸೆ / ಸೆಕೆಂಡಿಗೆ ನೀಡುತ್ತದೆ. ಅಲ್ಲದೇ 10 ಸ್ಥಳೀಯ ಆನ್-ನೆಟ್ ರಾತ್ರಿ ನಿಮಿಷಗಳು ಸಹ ಇವೆ. ಈ ರಾತ್ರಿ ನಿಮಿಷಗಳು 11 PM ರಿಂದ 6 AM ವರೆಗೆ ಗ್ರಾಹಕರಿಗೆ ಲಭ್ಯ ಇರುತ್ತವೆ. ಅಂದಹಾಗೆ ಈ ರೀಚಾರ್ಜ್‌ ಯೋಜನೆಯ ಜೊತೆಗೆ ಯಾವುದೇ ಹೊರಹೋಗುವ ಎಸ್‌ಎಂಎಸ್‌ಗಳ ಪ್ರಯೋಜನ ಲಭ್ಯ ಇಲ್ಲ.

ವಿ ಟೆಲಿಕಾಂ 138 ರೂ. ರೀಚಾರ್ಜ್‌ ಯೋಜನೆ

ವಿ ಟೆಲಿಕಾಂ (Vi Telecom) ಸಂಸ್ಥೆಯ ಈ ನೂತನ 138 ರೂ. ಯೋಜನೆಯು 20 ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ಯೋಜನೆಯು 100MB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಇದರೊಂದಿಗೆ ಸ್ಥಳೀಯ/ರಾಷ್ಟ್ರೀಯ ಕರೆಗಳನ್ನು 2.5 ಪೈಸೆ / ಸೆಕೆಂಡಿಗೆ ನೀಡುತ್ತದೆ. ಅಲ್ಲದೇ 10 ಸ್ಥಳೀಯ ಆನ್-ನೆಟ್ ರಾತ್ರಿ ನಿಮಿಷಗಳು ಸಹ ಇವೆ. ಈ ರಾತ್ರಿ ನಿಮಿಷಗಳು 11 PM ರಿಂದ 6 AM ವರೆಗೆ ಗ್ರಾಹಕರಿಗೆ ಲಭ್ಯ ಇರುತ್ತವೆ. ಅಂದಹಾಗೆ ಈ ರೀಚಾರ್ಜ್‌ ಯೋಜನೆಯ ಜೊತೆಗೆ ಯಾವುದೇ ಹೊರಹೋಗುವ ಎಸ್‌ಎಂಎಸ್‌ಗಳ ಪ್ರಯೋಜನ ಲಭ್ಯ ಇಲ್ಲ.

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಮಾಹಿತಿ

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ದೈನಂದಿನ 1 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ದೊರೆಯುತ್ತದೆ.

ವಿ ಟೆಲಿಕಾಂನ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಮಾಹಿತಿ

ವಿ ಟೆಲಿಕಾಂನ 349ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ನಿತ್ಯ 1.5 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಮೂರು ದಿನಗಳಿಗೆ 5GB ಎಕ್ಸ್‌ಟ್ರಾ ಡೇಟಾ ಪ್ರಯೋಜನ ಸಹ ಲಭ್ಯ.

Best Mobiles in India

English summary
Vi Launches Affordable Validity Recharge Plans Under Rs 150. check plans benefits details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+