Home
ಸುದ್ದಿಜಾಲ

Vi ನಿಂದ ಎರಡು ಹೊಸ ರೀಚಾರ್ಜ್‌ ಪ್ಲ್ಯಾನ್‌ ಘೋಷಣೆ; ಮಾನ್ಯತೆ ದಿನಗಳೆಷ್ಟು ಗೊತ್ತಾ!?

ಏರ್‌ಟೆಲ್‌, ಜಿಯೋ ಹಾಗೂ ಬಿಎಸ್‌ಎನ್‌ಎಲ್‌ಗೆ ಪ್ರತಿಸ್ಪರ್ಧಿಯಾಗಿರುವ ವಿ ಈಗಾಗಲೇ ಸಾಕಷ್ಟು ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಬದಲಾವಣೆ ಮಾಡುವ ಮೂಲಕ ಅಥವಾ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಈಗ ಎರಡು ಅತ್ಯಾಕರ್ಷಕ ಪ್ಲ್ಯಾನ್‌ಗಳನ್ನು ಘೋಷಿಸಿದೆ.

ಹೌದು, ವೊಡಾಫೋನ್‌ ಐಡಿಯಾ ಗ್ರಾಹಕರಿಗೆ ಇನ್ಮುಂದೆ ಹೆಚ್ಚುವರಿ ಎರಡು ಹೊಸ ಪ್ಲ್ಯಾನ್‌ಗಳು ಲಭ್ಯವಾಗಲಿವೆ. ಈ ಪ್ಲ್ಯಾನ್‌ಗಳ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಹಾಗೂ ಮೆಸೆಜ್‌ , ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಯಾವುವು ಈ ಹೊಸ ರೀಚಾರ್ಜ್‌ ಪ್ಲ್ಯಾನ್?, ಈ ಪ್ಲ್ಯಾನ್‌ನಲ್ಲಿ ಏನೆಲ್ಲಾ ಪ್ರಯೋಜನ ಇದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Vi ನಿಂದ ಎರಡು ಹೊಸ ರೀಚಾರ್ಜ್‌ ಪ್ಲ್ಯಾನ್‌ ಘೋಷಣೆ; ಮಾನ್ಯತೆ ದಿನಗಳೆಷ್ಟು ಗೊತ್ತಾ!

289 ರೂ. ಗಳ ರೀಚಾರ್ಜ್‌ ಪ್ಲ್ಯಾನ್

ಭಾರತದಲ್ಲಿ ವಿ 289 ರೂ. ಗಳು ಮತ್ತು 429 ರೂ. ಗಳ ಎರಡು ಪ್ರಿಪೇಯ್ಡ್‌ ರೀಚಾರ್ಜ್ ಪ್ಲ್ಯಾನ್‌ಗಳನ್ನು ಘೋಷಿಸಿದೆ. ಅದರಂತೆ ಈ 289 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ನಲ್ಲಿ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಹಾಗೂ 600 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 4GB ಡೇಟಾ ಸೌಲಭ್ಯ ಈ ಪ್ಲ್ಯಾನ್‌ನಿಂದ ಲಭ್ಯ. ಇನ್ನುಳಿದಂತೆ ಈ ಪ್ಲ್ಯಾನ್‌ 48 ದಿನಗಳ ಮಾನ್ಯತೆಯನ್ನು ಹೊಂದಿದೆ.

429 ರೂ. ಗಳ ರೀಚಾರ್ಜ್‌ ಪ್ಲ್ಯಾನ್

ದೀರ್ಘ ಸಮಯದ ವರೆಗೆ ರೀಚಾರ್ಜ್‌ ವಿಷಯಕ್ಕೆ ಹೋಗಬಾರದು ಎಂದಾದರೆ ಈ ಪ್ಲ್ಯಾನ್‌ ಸೂಕ್ತವಾಗಿದೆ. ಇದರಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಒಟ್ಟಾರೆ 6GB ಡೇಟಾ ಸೌಲಭ್ಯ ಹಾಗೂ 1,000 ಎಸ್‌ಎಮ್‌ಎಸ್‌ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ನೀವು 78 ದಿನಗಳವರೆಗೆ ಯಾವುದೇ ಸಮಸ್ಯೆ ಇಲ್ಲದೆ ಕರೆಯಲ್ಲಿ ತಲ್ಲೀನವಾಗಬಹುದು. ಈ ಎರಡೂ ರೀಚಾರ್ಜ್ ಪ್ಲ್ಯಾನ್‌ಗಳನ್ನು ಈಗ ಆನ್‌ಲೈನ್ ವಿ ಸ್ಟೋರ್ ಮತ್ತು ಅಧಿಕೃತ ವಿ ರಿಟೇಲರ್‌ ಸ್ಟೋರ್‌ನಲ್ಲಿ ಮಾಡಿಸಿಕೊಳ್ಳಬಹುದಾಗಿದೆ.

Vi ನಿಂದ ಎರಡು ಹೊಸ ರೀಚಾರ್ಜ್‌ ಪ್ಲ್ಯಾನ್‌ ಘೋಷಣೆ; ಮಾನ್ಯತೆ ದಿನಗಳೆಷ್ಟು ಗೊತ್ತಾ!

ಈ ಎರಡೂ ಪ್ಲ್ಯಾನ್‌ಗಳು ಸಹ ಏರ್‌ಟೆಲ್‌ ಹಾಗೂ ಜಿಯೋಗೆ ಪೈಪೋಟಿ ನೀಡಲು ಮುಂದಾಗಿವೆ. ಯಾಕೆಂದರೆ ಏರ್‌ಟೆಲ್ ಅನಿಯಮಿತ ಕರೆ ಸೌಲಭ್ಯದೊಂದಿಗೆ 299 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಕಲ್ಪಿಸಿದ್ದು, ಈ ಮೂಲಕ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ 455 ರೂ. ಗಳ ಪ್ಲ್ಯಾನ್‌ ಸಹ ವಿವಿಧ ಸೌಲಭ್ಯ ಕಲ್ಪಿಸಿದ್ದು, 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಆದರೆ ಈ ಪ್ಲ್ಯಾನ್‌ಗಳು ವಿ ಗೂ ಬಹಳ ಅಂತರ ಇದೆ ಎಂದೇ ಹೇಳಬಹುದು

ಇನ್ನು ಜಿಯೋ ವಿಚಾರಕ್ಕೆ ಬರುವುದಾದರೆ ಜಿಯೋಗೆ 299 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ಮೂಲಕ ಗ್ರಾಹಕರಿಗೆ ವಿವಿಧ ಸೇವೆ ನೀಡುತ್ತಿದೆ. ಅಂದರೆ, ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಹಾಗೂ 100 ಎಸ್ಎಮ್‌ಎಸ್‌ ಸೇವೆ ಒದಗಿಸುತ್ತದೆ. ಈ ಮೂಲಕ ಏರ್‌ಟೆಲ್‌ಗಿಂತ ಒಂದು ಹೆಜ್ಜೆ ಮುಂದಿದೆ ಎಂದು ಹೇಳಬಹುದು. ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಹಾಗೂ ಜಿಯೋ ಕ್ಲೌಡ್‌ಗೆ ಚಂದಾದಾರಿಕೆ ಪಡೆದುಕೊಳ್ಳಬಹುದು. ಇದು 28 ದಿನಗಳ ಮಾನ್ಯತೆ ಹೊಂದಿದೆ.

Vi ನಿಂದ ಎರಡು ಹೊಸ ರೀಚಾರ್ಜ್‌ ಪ್ಲ್ಯಾನ್‌ ಘೋಷಣೆ; ಮಾನ್ಯತೆ ದಿನಗಳೆಷ್ಟು ಗೊತ್ತಾ!

ಹಾಗೆಯೇ ಜಿಯೋದ ಮತ್ತೊಂದು 395 ರೂ. ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರು 6GB ಡೇಟಾ ಹಾಗೂ 1,000 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ಇದರೊಂದಿಗೆ ಜಿಯೋ ಸೂಟ್ ಆಪ್‌ ಚಂದಾದಾರಿಕೆ ಸೌಲಭ್ಯ ಸಹ ಇದರಿಂದ ಲಭ್ಯವಾಗಲಿದೆ. ಅಂತೆಯೇ ಈ ಸೇವೆಯನ್ನು ಬಳಕೆದಾರರು 84 ದಿನಗಳ ವರೆಗೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Vodafone Idea has announced two new plans for its customers of Rs 289 and Rs 429.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+