Home
ಸುದ್ದಿಜಾಲ

ವಿ ಟೆಲಿಕಾಂನಿಂದ ಎರಡು ಅಗ್ಗದ ಪ್ಲ್ಯಾನ್ ಬಿಡುಗಡೆ!..ಡೇಟಾ ಸೌಲಭ್ಯ ಎಷ್ಟಿದೆ?

ದೇಶದ ಮೂರನೇ ದೊಡ್ಡ ಟೆಲಿಕಾಂ ಕಂಪೆನಿ ಆಗಿ ವಿ ಟೆಲಿಕಾಂ ಗುರುತಿಸಿಕೊಂಡಿದೆ. ಚಂದಾದಾರರನ್ನು ತನ್ನತ್ತ ಆಕರ್ಷಿಸುವುದಕ್ಕೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಮುನ್ನಡೆದಿದೆ. ಏರ್‌ಟೆಲ್‌, ಜಿಯೋ ಟೆಲಿಕಾಂಗಳ ಪೈಪೋಟಿ ಎದುರಿಸುತ್ತಿರುವ ವಿ ಟೆಲಿಕಾಂ ಇದೀಗ ಮತ್ತೆ ಎರಡು ನೂತನ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಸದ್ಯ ವೋಡಾಫೋನ್‌ ಐಡಿಯಾ ಭಾರತದಲ್ಲಿ ವಿ 195ರೂ. ಮತ್ತು ವಿ 319ರೂ. ಬೆಲೆಯಲ್ಲಿ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಲಾಂಚ್‌ ಮಾಡಿದೆ.

ವ್ಯಾಲಿಡಿಟಿ

ಹೌದು, ವಿ ಟೆಲಿಕಾಂ ನೂತನವಾಗಿ ಎರಡು ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ ವಿ 195ರೂ. ಮತ್ತು ವಿ 319ರೂ ಆಗಿವೆ. ಈ ಎರಡು ಪ್ಲಾನ್‌ಗಳು ಕ್ರಮವಾಗಿ 31 ದಿನಗಳ ವ್ಯಾಲಿಡಿಟಿಯನ್ನು ಪಡೆದಿವೆ. ಕಡಿಮೆ ದರದಲ್ಲಿ ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಎರಡು ಪ್ರಿಪೇಯ್ಡ್‌ ಯೋಜನೆಗಳು ಆಕರ್ಷಕ ಎನಿಸುತ್ತವೆ. ಹಾಗಾದರೇ ವಿ 195ರೂ. ಮತ್ತು ವಿ 319ರೂ. ಯೋಜನೆಗಳ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 195ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂ 195ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂನ 195ರೂ ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು ಪೂರ್ಣ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಒಟ್ಟು 300 ಎಸ್‌ಎಮ್‌ಎಸ್‌ ಪ್ರಯೋಜನ ಹೊಂದಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಸಹ ಲಭ್ಯ ಆಗುತ್ತವೆ.

ವಿ ಟೆಲಿಕಾಂ 319ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂ 319ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂನ 319ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಆಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಸಹ ಲಭ್ಯ ಆಗುತ್ತವೆ.

ವಿ ಟೆಲಿಕಾಂ 107ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂ 107ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂನ 107ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು 200 MB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಹಾಗೆಯೇ 107 ರೂ. ಮೌಲ್ಯದ ಟಾಕ್‌ಟೈಮ್‌ ಸಿಗಲಿದ್ದು, ಪ್ರತಿ ನಿಮಿಷಕ್ಕೆ 1 ಪೈಸೆ ಇರುತ್ತದೆ. ಅಗ್ಗದ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ಬಯಸೋರಿಗೆ ಉತ್ತಮ ಆಗಿದೆ.

ವಿ ಟೆಲಿಕಾಂ 111ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂ 111ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ವಿ ಟೆಲಿಕಾಂನ 111ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು 200 MB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಹಾಗೆಯೇ 111 ರೂ. ಮೌಲ್ಯದ ಟಾಕ್‌ಟೈಮ್‌ ಸಿಗಲಿದ್ದು ಪ್ರತಿ ನಿಮಿಷಕ್ಕೆ 1 ಪೈಸೆ ಇರುತ್ತದೆ. ಅಗ್ಗದ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ಬಯಸೋರಿಗೆ ಉತ್ತಮ ಆಗಿದೆ.

Best Mobiles in India

English summary
Vi Launches Rs 195 and Rs 319 Plans with 31 Days Validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+