ವೊಡಾಫೋನ್-ಐಡಿಯಾದಿಂದ ಹೊಸ 351ರೂ.ಪ್ಲ್ಯಾನ್; 100GB ಡೇಟಾ!
ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಗಳು ಈಗ ಹೊಸದಾಗಿ ಜಂಟಿಯಾಗಿ Vi ಹೆಸರಿನಿಂದ ಗುರುತಿಸಿಕೊಂಡಿವೆ. ವೊಡಾಫೋನ್ ಐಡಿಯಾ ಜೊತೆಯಾಗಿ ಈಗ ಹೊಸ ಬ್ರ್ಯಾಂಡ್ Vi ನಲ್ಲಿ ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್ ಘೋಷಿಸಿದೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಹಾಗೂ ಅಧಿಕ ಇಂಟರ್ನೆಟ್ ಅಗತ್ಯ ಇರುವ ಗ್ರಾಹಕರಿಗಾಗಿ Vi ಟೆಲಿಕಾಂ ಅನುಕೂಲಕರ ಯೋಜನೆಯನ್ನು ತಿಳಿಸಿದೆ.

ಹೌದು, Vi ಟೆಲಿಕಾಂ ಇದೀಗ 351ರೂ.ಗಳ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಅನ್ನು ಪರಿಚಯಿದೆ. ಈ ಹೊಸ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 100GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ದೊರೆಯುತ್ತದೆ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಹಾಗೂ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆಯು ಸೂಕ್ತ ಅನಿಸಲಿದೆ. ಈ ಹೊಸ ಡೇಟಾ ವೋಚರ್‌ನ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

Vi 351ರೂ. ಡೇಟಾ ಪ್ಲ್ಯಾನ್
ವೋಡಾಫೋನ-ಐಡಿಯಾ 351ರೂ. ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 100GB ಡೇಟಾ ಸೌಲಭ್ಯ ದೊರೆಯುತ್ತದೆ. ಹಾಗೆಯೇ ವೊಡಾಫೋನ್-ಐಡಿಯಾ ಟೆಲಿಕಾಂ ಡಬಲ್ ಡೇಟಾ ಕೊಡುಗೆಯ ಯೋಜನೆಗಳನ್ನು ಹೊಂದಿವೆ. ಆ ಪ್ಲ್ಯಾನ್‌ಗಳ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿರಿ.

ವೊಡಾಫೋನ್-ಐಡಿಯಾ 299ರೂ. ಪ್ಲ್ಯಾನ್
ವೊಡಾಫೋನಿನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಡಬಲ್ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದ್ದು, ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

ವೊಡಾಫೋನ್-ಐಡಿಯಾ 499ರೂ. ಪ್ಲ್ಯಾನ್
ವೊಡಾಫೋನಿನ 499ರೂ. ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದ್ದು, ಡಬಲ್ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದೆ. ಹೀಗಾಗಿ ಈ ಪ್ಲ್ಯಾನಿನಲ್ಲಿ ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

ವೊಡಾಫೋನ್-ಐಡಿಯಾ 699ರೂ. ಪ್ಲ್ಯಾನ್
ವೊಡಾಫೋನಿನ 699ರೂ. ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಡಬಲ್ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದ್ದು, ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಆದರೆ ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಒಟ್ಟು 168GB ಡೇಟಾ ಲಭ್ಯ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.


Click it and Unblock the Notifications




