ಮತ್ತೆ ಎರಡು ಹೊಸ ಪ್ಲ್ಯಾನ್ ಪರಿಚಯಿಸಿದ ವಿ!..ಭರ್ಜರಿ ಡೇಟಾ ಗ್ಯಾರಂಟಿ!
ಭಾರತೀಯ ಟೆಲಿಕಾಂ ವಲಯದಲ್ಲಿ ತೃತೀಯ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (Vi) ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಇದೀಗ ಮತ್ತೆ ಎರಡು ನೂತನ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಯೋಜನೆಯು 400ರೂ. ಒಳಗೆ ಲಭ್ಯ ಇರುವುದು ಚಂದಾದಾರರಿಗೆ ಸಂತಸದ ಸಂಗತಿ ಎನ್ನಬಹುದು.
ಹೌದು, ವಿ ಟೆಲಿಕಾಂ ನೂತನವಾಗಿ 368ರೂ. ಮತ್ತು 369ರೂ. ಪ್ರೀಪೇಯ್ಡ್ ಪ್ಲಾನ್‌ಗಳನ್ನು (vi new prepaid plan) ಲಾಂಚ್ ಮಾಡಿದೆ. ಈ ನೂತನ ಪ್ಲ್ಯಾನ್ಗಳು ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇದಲ್ಲದೇ ಈ ಪ್ಲ್ಯಾನ್‌ಗಳು ವಿಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಹಾಗೂ ಓಟಿಟಿ ಪ್ರಯೋಜನಗಳ ಪಡೆದಿವೆ.

ಈ ಎರಡು ಯೋಜನೆಗಳು ಅನಿಯಮಿತ ವಾಯಿಸ್ ಕರೆ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಒಳಗೊಂಡಿವೆ. ಗ್ರಾಹಕರು ಅಧಿಕೃತ ವಿ ಟೆಲಿಕಾಂ ಆಪ್ ಮೂಲಕ ರೀಚಾರ್ಜ್ ಮಾಡಬಹುದು. ಹಾಗಾದರೆ ವಿ ಟೆಲಿಕಾಂನ 368ರೂ. ಮತ್ತು 369ರೂ. ಪ್ಲ್ಯಾನ್ ಪ್ರಯೋಜನಗಳೆನು ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 368ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು : ವಿ ಟೆಲಿಕಾಂನ 368ರೂ. ಪ್ರಿಪೇಯ್ಡ್ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಇದು ಅನಿಯಮಿತ ಕರೆ ಸೌಲಭ್ಯ, ದಿನನಿತ್ಯ 2 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ನೀಡಲಿದೆ. ಇದರೊಂದಿಗೆ ಸೋನಿಲೈವ್ (sonyliv) ಓಟಿಟಿ ಚಂದಾದಾರಿಕೆ ಸಹ ಲಭ್ಯ. ಇದರೊಂದಿಗೆ ಹೆಚ್ಚುವರಿಯಾಗಿ ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಸಿಗಲಿದ್ದು, ಜೊತೆಗೆ ವಿ ಆಪ್ಸ್ ಲಭ್ಯ.
ವಿ ಟೆಲಿಕಾಂ 369ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು : ವಿ ಟೆಲಿಕಾಂನ 369ರೂ. ಪ್ರಿಪೇಯ್ಡ್ ಪ್ಲಾನ್ ಸಹ 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಇದು ಸಹ ಅನಿಯಮಿತ ಕರೆ ಸೌಲಭ್ಯ, ದಿನನಿತ್ಯ 2 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ನೀಡಲಿದೆ. ಇದರೊಂದಿಗೆ ಸನ್‌ನೆಕ್ಸ್ಟ್ (sunNXT) ಓಟಿಟಿ ಚಂದಾದಾರಿಕೆ ಸಹ ಲಭ್ಯ. ಇದರೊಂದಿಗೆ ಹೆಚ್ಚುವರಿಯಾಗಿ ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಸಿಗಲಿದ್ದು, ಜೊತೆಗೆ ವಿ ಆಪ್ಸ್ ಲಭ್ಯ.

ವಿ ಟೆಲಿಕಾಂ 359ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು : ವಿ ಟೆಲಿಕಾಂ 359ರೂ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿನಿತ್ಯ 3 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ 100 ಎಸ್‌ಎಂಎಸ್ ಪ್ರಯೋಜನ ಕೂಡ ಲಭ್ಯವಿದೆ.
ವಿ ಟೆಲಿಕಾಂ 601ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು : ವಿ ಟೆಲಿಕಾಂನ 601ರೂ. ಪ್ರಿಪೇಯ್ಡ್ ಪ್ಲಾನ್ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಅನಿಯಮಿತ ಕರೆ, ದಿನನಿತ್ಯ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ನೀಡಲಿದೆ.
ಇನ್ನು ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದ್ದು, ಒಟ್ಟು ವ್ಯಾಲಿಡಿಟಿ ಅವಧಿಗೆ 84GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 16 GB ಡೇಟಾ ಸೌಲಭ್ಯ ಸಹ ಸಿಗಲಿದೆ. ಜೊತೆಗೆ ವಿ ಆಪ್ಸ್ ಹಾಗೂ ಡೇಟಾ ರೋಲ್ ಓವರ್ ಸೌಲಭ್ಯ ಸಿಗಲಿದೆ.


Click it and Unblock the Notifications








