ವಿ ಟೆಲಿಕಾಂನಿಂದ ಹೊಸ ಪ್ಲ್ಯಾನ್!..ಅನಿಯಮಿತ ಡೇಟಾ ಜೊತೆಗೆ ಉಚಿತ ಓಟಿಟಿ ಪ್ರಯೋಜನ!
ದೇಶದ ಮೂರನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ವಿ ಟೆಲಿಕಾಂ (Vi) ಗುರುತಿಸಿಕೊಂಡಿದೆ. ಚಂದಾದಾರರನ್ನು ತನ್ನತ್ತ ಆಕರ್ಷಿಸುವುದಕ್ಕೆ ಹಲವು ಅತ್ಯುತ್ತಮ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದ್ದು, ಹಾಗೆಯೇ ಕೆಲವೊಂದು ಬೊಂಬಾಟ್ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಇದೀಗ ಮತ್ತೆ ಮೂರು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಹೊಸದಾಗಿ ಪರಿಚಯಿಸಿದ್ದು, ಈ ಯೋಜನೆಗಳು ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿವೆ.

ಹೌದು, ವಿ ಟೆಲಿಕಾಂ ನೂತನವಾಗಿ ಮೂರು ಹೊಸ ಪೋಸ್ಟ್‌ಪೇಯ್ಡ್ (postpaid plans) ಪ್ಲಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ ವಿ 401ರೂ. ವಿ 501ರೂ ಮತ್ತು ವಿ 701ರೂ ಯೋಜನೆ ಆಗಿವೆ. ಈ ಮೂರು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಪಡೆದಿದ್ದು, ಕೆಲವು ಜನಪ್ರಿಯ ಓಟಿಟಿ ಚಂದಾದಾರಿಕೆಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಹಾಗಾದರೆ ವಿ ಟೆಲಿಕಾಂನ ಈ ಮೂರು ನೂತನ ಯೋಜನೆಗಳ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂನ 401ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ 50GB ಡೇಟಾ ಪ್ರಯೋಜನ ಜೊತೆಗೆ ಒಂದು ತಿಂಗಳ ಅವಧಿಗೆ 3000 ಉಚಿತ ಎಸ್ಎಮ್ಎಸ್ ಸೌಲಭ್ಯ ದೊರೆಯಲಿದೆ. ಇನ್ನು ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ 200GB ಡೇಟಾ ರೋಲ್ ಓವರ್ ಪ್ರಯೋಜನ ಸಿಗಲಿದ್ದು, ಹೆಚ್ಚುವರಿಯಾಗಿ ಸೋನಿಲೈವ್ ಚಂದಾದಾರಿಕೆ, ಜೀ5, ಹಂಗಾಮಾ ಮ್ಯೂಸಿಕ್, ಇತರೆ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ವಿ ಟೆಲಿಕಾಂನ 501ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ 90 GB ಡೇಟಾ ಪ್ರಯೋಜನ ಜೊತೆಗೆ ಒಂದು ತಿಂಗಳ ಅವಧಿಗೆ 3000 ಉಚಿತ ಎಸ್ಎಮ್ಎಸ್ ಸೌಲಭ್ಯ ದೊರೆಯಲಿದೆ. ಇನ್ನು ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ 200GB ಡೇಟಾ ರೋಲ್ ಓವರ್ ಪ್ರಯೋಜನ ಸಿಗಲಿದ್ದು, ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ, ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಜೀ5, ಹಂಗಾಮಾ ಮ್ಯೂಸಿಕ್, ಇತರೆ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ವಿ ಟೆಲಿಕಾಂನ 701ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 701ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಅನಿಯಮಿತ ಡೇಟಾ ಪ್ರಯೋಜನ ಲಬ್ಯವಾಗಲಿದೆ. ಅಲ್ಲದೇ ಒಂದು ತಿಂಗಳ ಅವಧಿಗೆ 3000 ಉಚಿತ ಎಸ್ಎಮ್ಎಸ್ ಸೌಲಭ್ಯ ದೊರೆಯಲಿದೆ. ಇನ್ನು ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ, ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಜೀ5, ಹಂಗಾಮಾ ಮ್ಯೂಸಿಕ್, ಇತರೆ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ವಿ ಟೆಲಿಕಾಂನ 1101ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 1101ರೂ REDX ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಅನಿಯಮಿತ ಡೇಟಾ ಪ್ರಯೋಜನ ಲಬ್ಯವಾಗಲಿದೆ. ಅಲ್ಲದೇ ಒಂದು ತಿಂಗಳ ಅವಧಿಗೆ 3000 ಉಚಿತ ಎಸ್ಎಮ್ಎಸ್ ಸೌಲಭ್ಯ ದೊರೆಯಲಿದೆ.

ಇನ್ನು ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ, ಹಾಗೆಯೇ ಒಂದು ವರ್ಷದ ಸೋನಿಲೈವ್ ಓಟಿಟಿ ಚಂದಾದಾರಿಕೆ ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಜೀ5, ಹಂಗಾಮಾ ಮ್ಯೂಸಿಕ್, ಇತರೆ ವಿ ಆಪ್ಸ್‌ಗಳು ಲಭ್ಯವಾಗಲಿವೆ.


Click it and Unblock the Notifications








