ವಿ ಟೆಲಿಕಾಂನ ಈ ಜನಪ್ರಿಯ ಪ್ಲ್ಯಾನ್‌ಗಳಲ್ಲಿ ಬದಲಾವಣೆ; ಗ್ರಾಹಕರಿಗೆ ಫುಲ್‌ ಶಾಕ್‌!

|

ದೇಶದ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ಅಧಿಕ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಸೌಲಭ್ಯ ನೀಡಿ ಗ್ರಾಹಕರನ್ನು ಖುಷಿ ಪಡಿಸಿವೆ. ಇದರೊಂದಿಗೆ ಜೊತೆಗೆ ಆಯ್ದ ಪ್ಲ್ಯಾನ್‌ಗಳಿಗೆ ಹೆಚ್ಚುವರಿಯಾಗಿ OTT ಸೇವಗಳ ಪ್ರಯೋಜನ ಘೋಷಿಸಿವೆ. ಈ ಪೈಕಿ (ವೊಡಾಫೋನ್) ವಿ ಟೆಲಿಕಾಂ ತನ್ನ ಕೆಲವು ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಡೇಟಾ, ವಾಯಿಸ್‌ ಕರೆ ಸೇರಿದಂತೆ ಹೆಚ್ಚುವರಿಯಾಗಿ ZEE ಪ್ರೀಮಿಯಂ ಸದಸ್ಯತ್ವದ ಕೊಡುಗೆ ಹೊಂದಿತ್ತು. ಆದ್ರೆ ತನ್ನ ಗ್ರಾಹಕರಿಗೆ ಈಗ ಬಿಗ್ ಶಾಕ್ ನೀಡಿದೆ.

ವಿ ಟೆಲಿಕಾಂನ ಈ ಜನಪ್ರಿಯ ಪ್ಲ್ಯಾನ್‌ಗಳಲ್ಲಿ ಬದಲಾವಣೆ; ಗ್ರಾಹಕರಿಗೆ ಫುಲ್‌ ಶಾಕ್‌!

ಹೌದು, ವಿ ಟೆಲಿಕಾಂ ಕೆಲವು ಯೋಜನೆಗಳು ZEE ಪ್ರೀಮಿಯಂ ಸದಸ್ಯತ್ವದ ಕೊಡುಗೆ ಹೊಂದಿವೆ. ಆದ್ರೆ ಕಂಪನಿಯು ಇದೀಗ 499ರೂ. ಬೆಲೆಗೂ ಮೇಲ್ಪಟ್ಟ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿ ZEE ಪ್ರೀಮಿಯಂ ಸದಸ್ಯತ್ವದ ಕೊಡುಗೆಗೆ ಕತ್ತರಿ ಹಾಕಿದೆ. ಟೆಲಿಕಾಂನ ಪೋಸ್ಟ್‌ಪೇಯ್ಡ್‌ ಯೋಜನೆಗಳು ಗ್ರಾಹಕರ ಗಮನ ಸೆಳೆದಿದ್ದವು, ಆದರೆ ಈಗ ಆ ಯೋಜನೆಗಳಲ್ಲಿ ಹೆಚ್ಚುವರಿಯಾಗಿ ಲಭ್ಯವಿದ್ದ ZEE ಪ್ರೀಮಿಯಂ ಸದಸ್ಯತ್ವದ ಸೌಲಭ್ಯವನ್ನು ತೆಗೆದು ಹಾಕಿದೆ. ಹಾಗಾದರೇ ವಿ ಟೆಲಿಕಾಂ ಯಾವೆಲ್ಲಾ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿ ZEE ಪ್ರೀಮಿಯಂ ಸದಸ್ಯತ್ವದ ಕೊಡುಗೆ ತೆಗೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂನ 1099ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್
ವಿ ಟೆಲಿಕಾಂನ 1099ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ತಿಂಗಳಿಗೆ 150 ಜಿಬಿ ಕ್ಯಾಪ್ ಮಾಡಿದ ಅನಿಯಮಿತ ಡೇಟಾ ಸೌಲಭ್ಯ ಹೊಂದಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಯೋಜನೆಯೊಂದಿಗೆ ಒಂದು ವರ್ಷದ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷ ಅಮೆಜಾನ್ ಪ್ರೈಮ್ ಸದಸ್ಯತ್ವ ಹಾಗೂ ರೋಮಿಂಗ್ ಸೌಲಭ್ಯ ಸಿಗಲಿದೆ.

ವಿ ಟೆಲಿಕಾಂನ ಈ ಜನಪ್ರಿಯ ಪ್ಲ್ಯಾನ್‌ಗಳಲ್ಲಿ ಬದಲಾವಣೆ; ಗ್ರಾಹಕರಿಗೆ ಫುಲ್‌ ಶಾಕ್‌!

ವಿ ಟೆಲಿಕಾಂನ 598ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌
ವಿ ಟೆಲಿಕಾಂನ 598ರೂ. ಯೋಜನೆಯ ದರದಲ್ಲಿ 50ರೂ. ಏರಿಕೆ ಆಗಿದ್ದು, ಈಗ 649ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.ಈ ಯೋಜನೆಯಲ್ಲಿ ಒಟ್ಟು 80GB ಡೇಟಾ ಪ್ರಯೋಜನ ದೊರೆಯಲಿದೆ. ಈ ಪ್ಲ್ಯಾನ್‌ ಇಬ್ಬರೂ ಸದಸ್ಯರಿಗೆ ಮಾತ್ರ ಅನ್ವಯವಾಗುತ್ತದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಇದರೊಂದಿಗೆ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 50GB ಮತ್ತು ಸೆಕೆಂಡರಿ ಸದಸ್ಯರಿಗೆ 30GB ಉಚಿತ ಡೇಟಾ ಲಭ್ಯವಾಗಲಿದೆ.

ವಿ ಟೆಲಿಕಾಂನ 749ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌
ವಿ ಟೆಲಿಕಾಂನ 749ರೂ. ಯೋಜನೆಯ ದರದಲ್ಲಿಯೂ ಸಹ 50ರೂ. ಏರಿಕೆ ಆಗಿದ್ದು, ಈಗ 799ರೂ. ಗಳಿಗೆ ಲಭ್ಯ. ಈ ಯೋಜನೆಯಲ್ಲಿ ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಇರಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಒಟ್ಟು 90GB ಡೇಟಾ ಸಿಗಲಿದ್ದು, ಪ್ರಾಥಮಿಕ ಸದಸ್ಯನಿಗೆ 60GB ಮತ್ತು ಸೆಕೆಂಡರಿ ಸದಸ್ಯರಿಬ್ಬರಿಗೂ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ.

ವಿ ಟೆಲಿಕಾಂನ ಈ ಜನಪ್ರಿಯ ಪ್ಲ್ಯಾನ್‌ಗಳಲ್ಲಿ ಬದಲಾವಣೆ; ಗ್ರಾಹಕರಿಗೆ ಫುಲ್‌ ಶಾಕ್‌!

ವಿ ಟೆಲಿಕಾಂನ 999ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌
ಈ ಪ್ಲ್ಯಾನ್‌ನಲ್ಲಿ ಐದು ಸದಸ್ಯರನ್ನು ಹೊಂದಲು ಅವಕಾಶವಿದ್ದು, ತಿಂಗಳ ಬೆಲೆಯು 999ರೂ. ಆಗಿದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಸಹ ಇರಲಿದೆ. ಹಾಗೆಯೇ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 80GB ಮತ್ತು ಉಳಿದ ನಾಲ್ಕು ಸದಸ್ಯಗೆ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ.

ಯಾವ ಯೋಜನೆಗಳಲ್ಲಿ ZEE ಪ್ರೀಮಿಯಂ ಲಭ್ಯ
ವಿ ಟೆಲಿಕಾಂ 499ರೂ.ಗೂ ಮೇಲ್ಪಟ್ಟ ಯೋಜನೆಗಳಲ್ಲಿ ZEE ಪ್ರೀಮಿಯಂ ಸೌಲಭ್ಯ ತೆಗೆದು ಹಾಕಿದೆ. ಹೀಗಾಗಿ ಸದ್ಯ ಕೆಲವು ಪ್ರಿಪೇಯ್ಡ್ ಯೋಜನೆಗಳ ZEE ಪ್ರೀಮಿಯಂ ಸೌಲಭ್ಯ ಲಭ್ಯವಿದೆ. ಅವುಗಳನ್ನು ನೋಡುವುದಾದರೇ 355ರೂ., 405ರೂ, 595ರೂ, 795ರೂ ಮತ್ತು 2,595ರೂ. ಯೋಜನೆಗಳು Zee ಪ್ರೀಮಿಯಂ ಚಂದಾದಾರಿಕೆ ಹೊಂದಿದೆ. ಈ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

ವಿ ಟೆಲಿಕಾಂನ 405ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಅವಧಿಯಲ್ಲಿ ಒಟ್ಟು 90GB ಡೇಟಾ ಪ್ರಯೋಜನ ಇದ್ದು, ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದ್ದು, ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

ವಿ ಟೆಲಿಕಾಂನ ಈ ಜನಪ್ರಿಯ ಪ್ಲ್ಯಾನ್‌ಗಳಲ್ಲಿ ಬದಲಾವಣೆ; ಗ್ರಾಹಕರಿಗೆ ಫುಲ್‌ ಶಾಕ್‌!

ವಿ ಟೆಲಿಕಾಂನ 595ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದ್ದು, ಜೊತೆಗೆ ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

ವಿ ಟೆಲಿಕಾಂನ 795ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದ್ದು, ಜೊತೆಗೆ ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

ವಿ ಟೆಲಿಕಾಂನ 2595ರೂ. ಪ್ಲ್ಯಾನ್
ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದ್ದು, ಜೊತೆಗೆ ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

Best Mobiles in India

English summary
Vi postpaid plans priced above Rs 499 used to offer free ZEE5 Premium subscription, but it is no longer valid.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X