ಹೊಸ ವರ್ಷದಲ್ಲಿ ಈ ಮೊಬೈಲ್ ರೀಚಾರ್ಜ್ ಪ್ಲ್ಯಾನ್ ಗಮನ ಸೆಳೆಯುತ್ತೆ!..ಜಸ್ಟ್ 99ರೂ!
ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎನಿಸಿರುವ ವಿ ಟೆಲಿಕಾಂ ಈಗಾಗಲೇ ಹಲವು ರೀಚಾರ್ಜ್ ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇನ್ನೇನು ಹೊಸ ವರ್ಷ ಬಂದೇ ಬಿಡ್ತು, ನೂತನ 2025 ರಲ್ಲಿಯೂ ವಿ ಅಗ್ಗದ ವ್ಯಾಲಿಡಿಟಿ ಯೋಜನೆ ಆಯ್ಕೆಯನ್ನು ಒಳಗೊಂಡಿದೆ. ಅದುವೇ 99ರೂ. ರೀಚಾರ್ಜ್ ಪ್ಲ್ಯಾನ್. ಇದು ಅತ್ಯುತ್ತಮ ವ್ಯಾಲಿಡಿಟಿ ಪ್ಲ್ಯಾನ್ ಆಗಿ ಗಮನ ಸೆಳೆದಿದೆ.
ಹೌದು, ವಿ ಟೆಲಿಕಾಂ ಅಗ್ಗದ ದರದಲ್ಲಿ ಹಲವು ಯೋಜನೆಗಳ ಆಯ್ಕೆ ಪಡೆದಿದೆ. ಅವುಗಳಲ್ಲಿ ವಿ 99ರೂ. ರೀಚಾರ್ಜ್ ಯೋಜನೆ ಸಹ ಒಂದು. ಇದು ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಯೋಜನೆ ಎನಿಸಿದೆ. ಹಾಗಾದರೇ ವಿ ಟೆಲಿಕಾಂನ ಈ 99ರೂ. ರೀಚಾರ್ಜ್ ಯೋಜನೆಯ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 99ರೂ. ರೀಚಾರ್ಜ್ ಯೋಜನೆ
ವಿ ಟೆಲಿಕಾಂನ ಈ ಅಗ್ಗದ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನಿನಲ್ಲಿ ಒಟ್ಟು 15 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 200MB ಡೇಟಾ ಸೌಲಭ್ಯ ಸಹ ಲಭ್ಯ ಆಗಲಿದೆ. ಅಲ್ಲದೇ 99ರೂ ಟಾಕ್‌ಟೈಮ್ ಇರುತ್ತದೆ. ಅಂದಹಾಗೆ ಈ ಯೋಜನೆಯಲ್ಲಿ ಹೊರ ಹೋಗುವ ಎಸ್‌ಎಮ್‌ಎಸ್ ಸೇವೆ ಲಭ್ಯ ಇರುವುದಿಲ್ಲ.
ವಿ ಟೆಲಿಕಾಂ 349ರೂ. ರೀಚಾರ್ಜ್ ಯೋಜನೆ
ವಿ ಸಂಸ್ಥೆಯ 349ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಸಿಗಲಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.
ವಿ ಟೆಲಿಕಾಂ 365ರೂ. ರೀಚಾರ್ಜ್ ಯೋಜನೆ
ವಿ ಸಂಸ್ಥೆಯ 365ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯ ಇದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ದೊರೆಯುತ್ತದೆ. ಅಂದಹಾಗೆ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.
ವಿ ಟೆಲಿಕಾಂ 449ರೂ. ರೀಚಾರ್ಜ್ ಯೋಜನೆ
ವಿ ಸಂಸ್ಥೆಯ 449ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಹೆಚ್ಚುವರಿಯಾಗಿ ಜೀ5, ಸೋನಿ ಲೈವ್ ಸೇರಿ ಇತರೆ ಓಟಿಟಿ ಪ್ರಯೋಜನ ಸಹ ಲಭ್ಯ.


Click it and Unblock the Notifications








