Home
ಸುದ್ದಿಜಾಲ

ವಿ ಟೆಲಿಕಾಂನ ಈ ಎರಡು ಪ್ಲ್ಯಾನ್‌ ಪರಿಷ್ಕರಣೆ: ಗ್ರಾಹಕರಿಗೆ ಮತ್ತಷ್ಟು ಸೌಲಭ್ಯ!

ವೊಡಾಫೋನ್ ಐಡಿಯಾ ಪ್ರಮುಖ ಟೆಲಿಕಾಂ ಸೇವೆ ನೀಡುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಇದು ಏರ್‌ಟೆಲ್‌ ಹಾಗೂ ಜಿಯೋಗೆ ಪೈಪೋಟಿ ನೀಡುತ್ತಾ ಬರುತ್ತಿದೆ. ಅದರಲ್ಲೂ ಈ ಏರ್‌ಟೆಲ್‌ ಹಾಗೂ ಜಿಯೋದ ಕೆಲವು ಪ್ಲ್ಯಾನ್‌ಗಳನ್ನೇ ಹೋಲುವ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಬರುತ್ತಿದ್ದು, ಈ ಮೂಲಕ ಗ್ರಾಹಕರಿಗೆ ವಿಶೇಷವಾದ ಸೌಲಭ್ಯ ಕಲ್ಪಿಸಿಕೊಡುತ್ತಿದೆ.

ಹೌದು, ಪ್ರಮುಖ ಟೆಲಿಕಾಂ ಸೇವೆಗಳಾದ ಏರ್‌ಟೆಲ್‌ ಹಾಗೂ ಜಿಯೋಗೆ ತೀವ್ರತರದಲ್ಲಿ ಪೈಪೋಟಿ ನೀಡುತ್ತಿರುವ ವಿ ಇದೀಗ ತನ್ನ ಎರಡು ಪ್ರಮುಖ ಹಾಗೂ ಜನಪ್ರಿಯ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಪರಿಷ್ಕರಣೆ ಮಾಡುತ್ತಿದೆ. ಈ ಮೂಲಕ ಬಳಕೆದಾರರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಪರಿಷ್ಕರಿಸುತ್ತಿರುವ ಕಾರಣ ಏನು?, ಯಾವುವು ಆ ಎರಡು ಪ್ಲ್ಯಾನ್‌ ಎಂದು ತಿಳಿದುಕೊಳ್ಳಿ.

ವಿ ಟೆಲಿಕಾಂನ ಈ ಎರಡು ಪ್ಲ್ಯಾನ್‌ ಪರಿಷ್ಕರಣೆ: ಗ್ರಾಹಕರಿಗೆ ಮತ್ತಷ್ಟು ಸೌಲಭ್ಯ!

ರೀಚಾರ್ಜ್‌ ಪ್ಲ್ಯಾನ್‌ ಪರಿಷ್ಕರಣೆ: ವಿ ಭಾರತದಲ್ಲಿ 5G ಸೇವೆ ನೀಡಲಾಗದಿದ್ದರೂ ಸಹ 4G ಸೇವೆಯಲ್ಲಿಯೇ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಅಥವಾ ಪರಿಷ್ಕರಿಸುವ ವಿಷಯದಲ್ಲಿ ಮಾತ್ರ ಹಿಂದುಳಿದಿಲ್ಲ. ಅಸ್ತಿತ್ವದಲ್ಲಿರುವ 129 ರೂ. ಗಳು ಹಾಗೂ 298 ರೂ. ಗಳ ಎರಡು ಪ್ಲ್ಯಾನ್‌ಗಳಲ್ಲಿ ಹೊಸ ಸೌಲಭ್ಯ ಲಭ್ಯವಾಗುತ್ತಿದ್ದು, ಇದರೊಂದಿಗೆ 181 ರೂ. ಗಳ ಹೊಸ ಪ್ಲ್ಯಾನ್‌ ಅನ್ನು ಸಹ ವಿ ಘೋಷಣೆ ಮಾಡಿದೆ.

129ರೂ., 298ರೂ. ಗಳ ಪರಿಷ್ಕೃತ ಪ್ಲ್ಯಾನ್‌: 129 ರೂ. ಗಳ ಟೆಲಿಕಾಂ ಆಪರೇಟರ್ ಪ್ಲ್ಯಾನ್‌ ಈಗ ಅನಿಯಮಿತ ಕರೆ ಮತ್ತು 200MB ಡೇಟಾವನ್ನು 18 ದಿನಗಳವರೆಗೆ ನೀಡುತ್ತದೆ. ಆದರೆ, ಇದರಲ್ಲಿ ಉಚಿತ ಮೆಸೆಜ್‌ ಆಯ್ಕೆ ಇರುವುದಿಲ್ಲ. ಗ್ರಾಹಕರು ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಹಾಗೂ ಎಸ್‌ಟಿಡಿ ಎಸ್‌ಎಂಎಎಸ್‌ಗೆ 1.5 ರೂ. ಗಳನ್ನು ಪಾವತಿ ಮಾಡಬೇಕು ಹಾಗೆಯೇ ಐಎಸ್‌ಡಿ ಸಂದೇಶಗಳಿಗೆ 5 ರೂ. ಪಾವತಿಸಬೇಕಾಗುತ್ತದೆ.

ಇದರೊಂದಿಗೆ 298 ರೂ. ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರು 50GB ಡೇಟಾವನ್ನು ಪಡೆದುಕೊಳ್ಳಬಹುದಾಗಿದ್ದು, ವಿ ಮೂವಿಸ್‌ ಮತ್ತು ಟಿವಿ ​​ಕ್ಲಾಸಿಕ್‌ ಗೆ ಪ್ರವೇಶ ಸಹ ಪಡೆಯಬಹುದು. ಹಾಗೆಯೇ ಪ್ರೀಮಿಯಂ ಚಲನಚಿತ್ರಗಳು, ಸುದ್ದಿಗಳು ಮತ್ತು 28 ದಿನಗಳವರೆಗೆ ಲೈವ್ ಟಿವಿಗೆ ಸೌಲಭ್ಯವನ್ನು ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಇನ್ನು 181ರೂ. ಗಳ ಹೊಸ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ವಿ ಈ ಹಳೆಯ ಪ್ಲ್ಯಾನ್‌ಗಳನ್ನು ಪರಿಷ್ಕರಿಸಿದೆ. ಈ 181ರೂ.ನ ಪ್ಲ್ಯಾನ್‌ನಲ್ಲಿ ಗ್ರಾಹಕರು ಪ್ರತಿದಿನ 1GB ಡೇಟಾವನ್ನು ನೀಡುತ್ತದೆ. ಅಂದರೆ ಒಟ್ಟಾರೆ 30GB ಡೇಟಾ ಲಭ್ಯವಾಗಲಿದ್ದು, ಇದು 30 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಮತ್ತೆರಡು ಹೊಸ ಪ್ಲ್ಯಾನ್‌ ಸಹ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಅದರಲ್ಲಿ 289 ರೂ. ಗಳು ಹಾಗೂ 429 ರೂ. ಗಳ ಎರಡು ಪ್ಲ್ಯಾನ್‌ಗಳನ್ನು ಗ್ರಾಹಕರು ಇಷ್ಟಪಟ್ಟಿದ್ದು, 289ರೂ. ಗಳ ಪ್ಲ್ಯಾನ್‌ನಲ್ಲಿ 4GB ಡೇಟಾ, 600 ಮೆಸೆಜ್‌ಗಳು ಮತ್ತು 48 ದಿನಗಳವರೆಗೆ ಅನಿಯಮಿತ ಕರೆಗಳನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ವಿ ಸಿಮ್‌ ಅನ್ನು ಸೆಕೆಂಡರಿ ಸಿಮ್‌ ಆಗಿ ಬಳಕೆ ಮಾಡುವ ಅದೆಷ್ಟೋ ಗ್ರಾಹಕರಿಗೆ ಈ ಪ್ಲ್ಯಾನ್‌ ಸಾಕಷ್ಟು ಅನುಕೂಲ ನೀಡುತ್ತದೆ.

ವಿ ಟೆಲಿಕಾಂನ ಈ ಎರಡು ಪ್ಲ್ಯಾನ್‌ ಪರಿಷ್ಕರಣೆ: ಗ್ರಾಹಕರಿಗೆ ಮತ್ತಷ್ಟು ಸೌಲಭ್ಯ!

ಇದರೊಂದಿಗೆ 429ರೂ.ಗಳ ಪ್ಲ್ಯಾನ್‌ ಬರೋಬ್ಬರಿ 78 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಈ ಪ್ಲ್ಯಾನ್‌ನಲ್ಲಿ ಗ್ರಾಹಕರು 1000 ಮೆಸೆಜ್‌, 6GB ಡೇಟಾ ಹಾಗೂ ನಿಯಮಿತ ಕರೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಮೇಲೆ ತಿಳಿಸಿದ ಎರಡೂ ಪ್ಲ್ಯಾನ್‌ಗಳು ಸಹ ಕಂಪನಿಯ ವೆಬ್‌ಸೈಟ್ ಮತ್ತು ವಿ ಆಪ್‌ನಲ್ಲಿ ಲಭ್ಯ ಇರಲಿವೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಈ ಎಲ್ಲಾ ಪ್ಲ್ಯಾನ್‌ಗಳು 4Gಸೇವೆಗಳನ್ನು ನೀಡುತ್ತವೆ ಎಂಬುದು. ಆದರೆ,ಇದೇ ದರದ ಏರ್‌ಟೆಲ್‌,ಜಿಯೋ 5G ಸೇವೆಗಳನ್ನು ನೀಡುತ್ತವೆ.

Best Mobiles in India

English summary
vodafone idea which is fiercely competing with leading telecom services like Airtel and Jio, and now revising its Rs 129 and Rs 298 popular recharge plans for more benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+