Home
ಸುದ್ದಿಜಾಲ

ಸದ್ದಿಲ್ಲದೇ 100GB ಡೇಟಾ ಪ್ಲ್ಯಾನ್‌ ಲಾಂಚ್ ಮಾಡಿದ ವಿ ಟೆಲಿಕಾಂ!

ವಿ ಟೆಲಿಕಾಂ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ವರೆಗೂ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ಪರಿಚಯಿಸಿದೆ. ವಿ ಟೆಲಿಕಾಂನ ಕೆಲವೊಂದು ಪ್ರೀಪೇಯ್ಡ್‌ ಯೋಜನೆಗಳು ವ್ಯಾಲಿಡಿಟಿ ಸೌಲಭ್ಯದಿಂದ ಗಮನ ಸೆಳೆದಿದ್ದರೇ, ಮತ್ತೆ ಕೆಲವು ಯೋಜನೆಗಳು ಹೆಚ್ಚಿನ ಡೇಟಾ ಪ್ರಯೋಜನದೊಂದಿಗೆ ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡಿವೆ. ಅದೇ ರೀತಿ ವಿ ಟೆಲಿಕಾಂ ಗ್ರಾಹಕರ ಅನುಕೂಲಕ್ಕಾಗಿ ಕೆಲವೊಂದು ಆಡ್‌ ಆನ್‌ ಡೇಟಾ ಪ್ಯಾಕ್‌ಗಳನ್ನು ಒಳಗೊಂಡಿದೆ. ಆ ಲಿಸ್ಟ್‌ಗೆ ಈಗ ಮತ್ತೆ ಹೊಸದೊಂದು ಪೋಸ್ಟ್‌ಪೇಯ್ಡ್‌ ಆಡ್‌ ಆನ್‌ ಪ್ಲ್ಯಾನ್ ಸೇರ್ಪಡೆ ಮಾಡಿದೆ.

ನೂತನವಾಗಿ

ಹೌದು, ವಿ ಟೆಲಿಕಾಂ ಇದೀಗ ನೂತನವಾಗಿ 100ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ ಅನ್ನು ಪರಿಚಯಿಸಿದೆ. ಈ ಯೋಜನೆಯು ಹೆಚ್ಚುವರಿ ಡೇಟಾ ಪ್ರಯೋಜನ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸುತ್ತದೆ. ಇನ್ನು ಈ ಯೋಜನೆಯಲ್ಲಿ ಡೇಟಾ ಪ್ರಯೋಜನ ಜೊತೆಗೆ ಹೆಚ್ಚುವರಿ ಸೌಲಭ್ಯಗಳು ಗ್ರಾಹಕರಿಗೆ ದೊರೆಯುತ್ತವೆ. ಹಾಗಾದರೇ ವಿ ಟೆಲಿಕಾಂನ ನೂತನ 100ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ನ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಅತ್ಯುತ್ತಮ ಆಡ್‌ ಆನ್‌ ಪ್ಯಾಕ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 100ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ ಪ್ರಯೋಜನಗಳು

ವಿ ಟೆಲಿಕಾಂ 100ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ ಪ್ರಯೋಜನಗಳು

ವಿ ಟೆಲಿಕಾಂನ ಹೊಸ 100ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ ಸಂಪೂರ್ಣ ಡೇಟಾ ಪ್ರಯೋಜನದ ಯೋಜನೆ ಆಗಿದೆ. ಈ ಯೋನೆಯು ಒಟ್ಟು 100GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇದು ಡೇಟಾ ಪ್ಯಾಕ್‌ ಆಗಿದ್ದರೂ, ಅದಾಗ್ಯೂ, ಈ ಯೋಜನೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ 30 ದಿನಗಳವರೆಗೆ (SonyLIV Premium) ಸೋನಿಲೈವ್ ಪ್ರೀಮಿಯಂಗೆ ಉಚಿತ ಆಕ್ಸಸ್‌ ಅನ್ನು ಪಡೆಯುತ್ತಾರೆ.

ವಿ ಟೆಲಿಕಾಂ 82ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ ಪ್ರಯೋಜನಗಳು

ವಿ ಟೆಲಿಕಾಂ 82ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ ಪ್ರಯೋಜನಗಳು

ವಿ ಟೆಲಿಕಾಂನ ಹೊಸ 82ರೂ. ಆಡ್‌ ಆನ್‌ 4G ಡೇಟಾ ಪ್ಯಾಕ್‌ OTT ಮತ್ತು ಡೇಟಾ ಪ್ರಯೋಜನದ ಯೋಜನೆ ಆಗಿದೆ. ಈ ಯೋಜನೆಯಲ್ಲಿ 14 ದಿನಗಳ ವ್ಯಾಲಿಡಿಟಿಯಲ್ಲಿ 4GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಸೋನಿಲೈವ್ ಚಂದಾದಾರಿಕೆ ಸಹ ಲಭ್ಯವಾಗಲಿದೆ.

ವಿ ಟೆಲಿಕಾಂನ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಹೆಚ್ಚುವರಿಯಾಗಿ 16GB ಡೇಟಾ ಸೌಲಭ್ಯ ಸಿಗಲಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಓಟಿಟಿಯ ಒಂದು ವರ್ಷದ ಚಂದಾದಾರಿಕೆಯ ಪ್ರಯೋಜನ ಲಭ್ಯ ಮಾಡಿದೆ.

ವಿ ಟೆಲಿಕಾಂನ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Vi Rs 100 Postpaid Add On Pack Launched with SonyLIV Premium Subscription for 28 Days: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+