ಬಂದ್ ಆಗಿದ್ದ ಈ ಪ್ಲ್ಯಾನ್ ಈಗ ಮತ್ತೆ ಲಭ್ಯ!..ಕಡಿಮೆ ಬೆಲೆಗೆ ಹೆಚ್ಚು ಡೇಟಾ ಖಚಿತ!
ದೇಶದ ಟೆಲಿಕಾಂ ವಲಯದಲ್ಲಿ ತೃತೀಯ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ ಹಲವು ಯೋಜನೆಗಳ ಮೂಲಕ ತನ್ನದೇ ಗ್ರಾಹಕ ವರ್ಗವನ್ನು ಒಳಗೊಂಡಿದೆ. ತನ್ನ ಚಂದಾದಾರರಿಗಾಗಿ ಅತ್ಯುತ್ತಮ ಡೇಟಾ ಪ್ಲ್ಯಾನ್‌ಗಳು, ಅಲ್ಪಾವಧಿಯ, ದೀರ್ಘಾವಧಿ ವ್ಯಾಲಿಡಿಟಿಯ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ನೀಡಿ ಸೈ ಎನಿಸಿಕೊಂಡಿದೆ. ಆದರೆ ಇದೀಗ ವಿ ಟೆಲಿಕಾಂ ಬಂದ್ ಆಗಿದ್ದ, ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯನ್ನು ಮತ್ತೆ ಪರಿಚಯಿಸಿದೆ.
ಹೌದು, ವಿ ಟೆಲಿಕಾಂ (Vi) ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತಾ ಸಾಗಿದ್ದು, ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಲಿಸ್ಟ್ ಪಡೆದಿದೆ. ಇದೀಗ ಸಂಸ್ಥೆಯು ಬಂದ್ ಆಗಿದ್ದ, 289ರೂ. ಬೆಲೆಯ ರೀಚಾರ್ಜ್ ಯೋಜನೆಯನ್ನು ಈಗ ಮತ್ತೆ ಬಿಡುಗಡೆ ಮಾಡಿದೆ. ಈ ಯೋಜನೆಯು ಅಗ್ಗದ ಪ್ರೈಸ್ ಟ್ಯಾಗ್ ಹೊಂದಿದ್ದು, ಆಕರ್ಷಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಆದರೆ ಈ ಹಿಂದೆ ಇದ್ದ ವ್ಯಾಲಿಡಿಟಿಗಿಂತ 8 ದಿನ ಇಳಿಕೆ ಪಡೆದಿದೆ.

ಮೊಬೈಲ್ ರೀಚಾರ್ಜ್ ಮಾಡುವವರ ಗಮನ ಸೆಳದಿರುವ ವಿ ಟೆಲಿಕಾಂನ ಈ 289ರೂ. ಯೋಜನೆಯು 40GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಅಲ್ಲದೇ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಕೂಡಾ ಒಳಗೊಂಡಿದ್ದು, ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯ ಇದೆ. ಹಾಗಾದರೇ ವಿ ಟೆಲಿಕಾಂನ 289ರೂ. ಯೋಜನೆಯ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ವಿ ಟೆಲಿಕಾಂನ 289ರೂ. ಯೋಜನೆ ಮಾಹಿತಿ
ವಿ ಟೆಲಿಕಾಂನ 289ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಅಲ್ಪಾವಧಿಯ ಯೋಜನೆ ಆಗಿದ್ದು, ಇದು ಒಟ್ಟು 40 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಮೊದಲು ಈ ಯೋಜನೆಯು 48 ದಿನ ವ್ಯಾಲಿಡಿಟಿ ಪಡೆದಿತ್ತು. ಇನ್ನು ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಲಭ್ಯ ಇದೆ. ಹಾಗೆಯೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 40GB ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಒಟ್ಟು 600 ಎಸ್‌ಎಮ್‌ಎಸ್ ಪ್ರಯೋಜನ ದೊರೆಯುತ್ತದೆ.
ವಿ ಟೆಲಿಕಾಂನ 625ರೂ. ಯೋಜನೆ ಮಾಹಿತಿ
ವಿ ಟೆಲಿಕಾಂನ 625ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಇದು ಒಟ್ಟು 60 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಇನ್ನು ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಲಭ್ಯ ಇದೆ. ಹಾಗೆಯೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 50 GB ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ದೊರೆಯುತ್ತದೆ.
ವಿ ಟೆಲಿಕಾಂನ 479ರೂ. ಯೋಜನೆ ಮಾಹಿತಿ
ವಿ ಟೆಲಿಕಾಂನ 479ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಪ್ಲ್ಯಾನ್ ದೀರ್ಘಾವಧಿ ಯೋಜನೆ ಆಗಿದ್ದು, ಇದು ಒಟ್ಟು 48 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಲಭ್ಯ ಇದೆ. ಹಾಗೆಯೇ ಪ್ರತಿದಿನ 1 GB ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ದೊರೆಯುತ್ತದೆ.
ವಿ ಟೆಲಿಕಾಂನ 1049ರೂ. ಯೋಜನೆ ಮಾಹಿತಿ
ವಿ ಟೆಲಿಕಾಂನ 1049ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಪ್ಲ್ಯಾನ್ ದೀರ್ಘಾವಧಿ ಯೋಜನೆ ಆಗಿದ್ದು, ಇದು ಒಟ್ಟು 180 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಲಭ್ಯ ಇದೆ. ಹಾಗೆಯೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 12 GB ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 1800 ಎಸ್‌ಎಮ್‌ಎಸ್ ಪ್ರಯೋಜನ ದೊರೆಯುತ್ತದೆ.


Click it and Unblock the Notifications








