ಅಗ್ಗದ ಬೆಲೆಯ ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಸಿಗುತ್ತೆ ಭರ್ಜರಿ ಉಚಿತ ಡೇಟಾ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ತೃತೀಯ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಕಾಣಿಸಿಕೊಂಡಿರುವ ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಚಂದಾದಾರರನ್ನು ಹೆಚ್ಚಿಸಲು ಕೆಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ವಿ ಟೆಲಿಕಾಂ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ವರೆಗೂ ಭಿನ್ನ ಶ್ರೇಣಿಯ ಪ್ಲ್ಯಾನ್ ಆಯ್ಕೆ ಪಡೆದುಕೊಂಡಿದ್ದು, ಆ ಪೈಕಿ ಅಗ್ಗದ ದರದಲ್ಲಿ ಲಭ್ಯ ಆಗುವ ಕೆಲವು ಪ್ರಿಪೇಯ್ಡ್ ಪ್ಲ್ಯಾನ್ ಡಿಮ್ಯಾಂಡ್ ಪಡೆದಿವೆ. ಸಂಸ್ಥೆಯ 299ರೂ. ಪ್ರಿಪೇಯ್ಡ್ ಯೋಜನೆ ಧಮಾಕಾ ಎನಿಸಿದೆ.
ಹೌದು, ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್ ಪ್ಲ್ಯಾನ್ ಅಲ್ಪಾವಧಿಯ ಪ್ರಿಪೇಯ್ಡ್ ಯೋಜನೆ ಆಗಿದ್ದರೂ, ಡೇಟಾ ಕೊಡುಗೆಯಿಂದ ಗಮನ ಸೆಳೆದಿದೆ. ಈ ಪ್ರೀಪೇಯ್ಡ್ ಪ್ಲ್ಯಾನ್ ಪ್ರತಿದಿನದ ಡೇಟಾ, ಎಸ್‌ಎಮ್‌ಎಸ್ ಸೌಲಭ್ಯ ಒಳಗೊಂಡಂತೆ ಆಕರ್ಷಕ ವ್ಯಾಲಿಡಿಟಿ ಕೂಡಾ ಒಳಗೊಂಡಿದೆ. ಇದರೊಂದಿಗೆ ಅನಿಯಮಿತ ಧ್ವನಿ ಕರೆಯ ಪ್ರಯೋಜನವನ್ನು ಸಹ ಪಡೆದಿದೆ. ಹಾಗಾದರೇ ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳೆನು?..ಇತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಸಂಸ್ಥೆಯ 299ರೂ. ಪ್ರೀಪೇಯ್ಡ್ ಪ್ಲ್ಯಾನ್ ಮಾಹಿತಿ
ವಿ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನಿ ನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಉಚಿತ ಧ್ವನಿ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದ್ದು, ವೀಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಸಹ ಪಡೆದಿದೆ.
ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಪ್ರಯೋಜನ ಪಡೆದಿದೆ. ವಿ ಕಂಪನಿಯ ಈ ಪ್ರೀಪೇಯ್ಡ್ ಪ್ಲ್ಯಾನ್ ಹೆಚ್ಚುವರಿಯಾಗಿ 5GB (extra 5gb data free) ಡೇಟಾ ಪ್ರಯೋಜನ ಒಳಗೊಂಡಿದೆ. ಹಾಗೆಯೇ ವಿ ಟೆಲಿಕಾಂ ಆಪ್ಸ್ ಸೇವೆ ಪಡೆದುಕೊಂಡಿದೆ.
ವಿ 719ರೂ. ಪ್ಲ್ಯಾನ್ ಪ್ರಯೋಜನಗಳ ಮಾಹಿತಿ
ಸಂಸ್ಥೆಯ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಅನಿಯಮಿತ ಉಚಿತ ಧ್ವನಿ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದ್ದು, ವೀಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಸಹ ಪಡೆದಿದೆ.
ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಪ್ರಯೋಜನ ಪಡೆದಿದೆ. ವಿ ಕಂಪನಿಯ ಈ ಪ್ರೀಪೇಯ್ಡ್ ಪ್ಲ್ಯಾನ್ ಕೂಡಾ ಹೆಚ್ಚುವರಿಯಾಗಿ 5GB ಡೇಟಾ ಪ್ರಯೋಜನ ಒಳಗೊಂಡಿದೆ. ಹಾಗೆಯೇ ವಿ ಟೆಲಿಕಾಂ ಆಪ್ಸ್ ಸೇವೆ ಪಡೆದುಕೊಂಡಿದೆ. ಹಾಗೆಯೇ ರಾತ್ರಿ 12 ರಿಂದ ಮುಂಜಾನೆ 6 ಗಂಟೆಯ ವರೆಗೂ ಡೇಟಾ ಕಡಿತವಿಲ್ಲದೇ ಸ್ಟ್ರೀಮಿಂಗ್ ಮಾಡಬಹುದಾಗಿದೆ.
ವಿ 479ರೂ. ಪ್ಲ್ಯಾನ್ ಪ್ರಯೋಜನಗಳ ಮಾಹಿತಿ
ಸಂಸ್ಥೆಯ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಅನಿಯಮಿತ ಉಚಿತ ಧ್ವನಿ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದ್ದು, ವೀಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಸಹ ಪಡೆದಿದೆ.
ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿ ಸೌಲಭ್ಯ ಪಡೆದಿದೆ. ವಿ ಕಂಪನಿಯ ಈ ಪ್ರೀಪೇಯ್ಡ್ ಯೋಜನೆಯು ಕೂಡಾ ಹೆಚ್ಚುವರಿಯಾಗಿ 5GB ಡೇಟಾ ಪ್ರಯೋಜನ ಒಳಗೊಂಡಿದೆ. ಹಾಗೆಯೇ ವಿ ಟೆಲಿಕಾಂ ಆಪ್ಸ್ ಸೇವೆ ಪಡೆದುಕೊಂಡಿದೆ. ಹಾಗೆಯೇ ರಾತ್ರಿ 12 ರಿಂದ ಮುಂಜಾನೆ 6 ಗಂಟೆಯ ವರೆಗೂ ಡೇಟಾ ಕಡಿತವಿಲ್ಲದೇ ಸ್ಟ್ರೀಮಿಂಗ್ ಮಾಡಬಹುದಾಗಿದೆ.


Click it and Unblock the Notifications








