ಈ ರೀಚಾರ್ಜ್ ಪ್ಲ್ಯಾನ್ ಸೂಪರ್!..ಜಬರ್ದಸ್ತ್ ಡೇಟಾ, ಬಿಗ್ ವ್ಯಾಲಿಡಿಟಿ!
ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ನೇರ ಟಾಂಗ್ ನೀಡುತ್ತಾ ಮುನ್ನಡೆದಿವ ವಿ ಟೆಲಿಕಾಂ ಹಲವು ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಈಗಾಗಲೇ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಮುಂದೆ ಸಾಗಿರುವ ಏರ್‌ಟೆಲ್ ತನ್ನ ಚಂದಾದಾರರಿಗಾಗಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಡೇಟಾ ಪ್ರಯೋಜನ ಪಡೆದಿರುವುದು ಪ್ರಮುಖ ಆಕರ್ಷಣೆ ಎನಿಸಿದೆ. ಅದಾಗ್ಯೂ, ವಿ ಟೆಲಿಕಾಂ ಈ ಒಂದು ರೀಚಾರ್ಜ್ ಯೋಜನೆ ಬಹಳ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ.
ಹೌದು, ವಿ ಟೆಲಿಕಾಂ ಸಂಸ್ಥೆಯ ಹಲವು ಭಿನ್ನ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಪಡೆದಿದ್ದು, ಆ ಪೈಕಿ 3599ರೂ. ಪ್ರೀಪೇಯ್ಡ್ ಪ್ಲ್ಯಾನ್ ಹೆಚ್ಚು ಗಮನ ಸೆಳೆದಿದೆ. ಈ ಪ್ಲ್ಯಾನ್ ದೀರ್ಘಾವಧಿಯ ವ್ಯಾಲಿಡಿಟಿ ಜೊತೆಗೆ ಆಕರ್ಷಕ ದೈನಂದಿನ ಡೇಟಾ ಪ್ರಯೋಜನ ಪಡೆದಿದೆ. ಇನ್ನು ಗ್ರಾಹಕರು ಈ ಯೋಜನೆ ರೀಚಾರ್ಜ್ ಮಾಡಿದ್ರೆ, ಒಂದು ವರ್ಷದ ಅವಧಿಗೆ ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯ ಇರಲ್ಲ. ಹಾಗಾದರೇ ವಿ ಟೆಲಿಕಾಂನ 3599ರೂ. ಪ್ರೀಪೇಯ್ಡ್ ಪ್ಲ್ಯಾನಿನ ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿರಿ.

ವಿ ಟೆಲಿಕಾಂ 3599ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂ 3599ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಅಲ್ಲದೇ ಈ ವಾರ್ಷಿಕ ಅವಧಿಯ ಪ್ಲ್ಯಾನಿನಲ್ಲಿ ದೈನಂದಿನ 2 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ.
ವಿ ಟೆಲಿಕಾಂ 3699ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂ 3699ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ವಾರ್ಷಿಕ ಅವಧಿಯ ಪ್ಲ್ಯಾನಿನಲ್ಲಿ ದೈನಂದಿನ 2 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಪಡೆದಿದೆ.
ವಿ ಟೆಲಿಕಾಂ 3799ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂ 3799ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಅಲ್ಲದೇ ಈ ವಾರ್ಷಿಕ ಅವಧಿಯ ಪ್ಲ್ಯಾನಿನಲ್ಲಿ ದೈನಂದಿನ 2 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಚಂದಾದಾರಿಕೆ ಲಭ್ಯ ಇದೆ.


Click it and Unblock the Notifications








