Home
ಸುದ್ದಿಜಾಲ

ಜಿಯೋ 599ರೂ VS ವಿ ಟೆಲಿಕಾಂ 699ರೂ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್: ಯಾವುದು ಯೋಗ್ಯ?

ಸದ್ಯ ಎಲ್ಲ ಟೆಲಿಕಾಂ ಕಂಪನಿಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ನೀಡುತ್ತ ಸಾಗಿವೆ. ಪ್ರೀಪೇಯ್ಡ್‌ ಜೊತೆ ಪೋಸ್ಟ್‌ಪೇಯ್ಡ್‌ ಚಂದಾದಾರರನ್ನು ಹೆಚ್ಚಿಸಲು ಕಡಿಮೆ ಬೆಲೆಯಲ್ಲಿ ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ ಜಿಯೋ ಹಾಗೂ ವೊಡಾಫೋನ್-ಐಡಿಯಾ (ವಿ ಟೆಲಿಕಾಂ) ಸಂಸ್ಥೆಗಳ ಕೆಲವು ಪೋಸ್ಟ್‌ಪೇಯ್ಡ್‌ ಯೋಜನೆಗಳು ಚಂದಾದಾರರ ಗಮನ ಸೆಳೆದಿವೆ.

ರಿಲಾಯನ್ಸ್‌

ಹೌದು, ಪ್ರಸ್ತುತ ಮೂಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಾಯನ್ಸ್‌ ಜಿಯೋ ಹಾಗೂ ವೊಡಾಫೋನ್-ಐಡಿಯಾ (ವಿ ಟೆಲಿಕಾಂ) ಸಂಸ್ಥೆಗಳು ಭಿನ್ನ ದರದಲ್ಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿವೆ. ಅವುಗಳಲ್ಲಿ ಜಿಯೋ ಟೆಲಿಕಾಂನ 599ರೂ ಹಾಗೂ ವೊಡಾಫೋನ್-ಐಡಿಯಾ (ವಿ ಟೆಲಿಕಾಂದ) 699ರೂ. ಪೋಸ್ಟ್‌ಪೇಯ್ಡ್‌ ಯೋಜನೆಗಳು ಅತ್ಯುತ್ತಮ ಪ್ರಯೋಜನಗಳೊಂದಿಗೆ ಹೆಚ್ಚುವರಿಯಾಗಿ ಓಟಿಟಿ ಚಂದಾದಾರಿಕೆಯ ಸೌಲಭ್ಯಗಳನ್ನು ಒದಗಿಸಿವೆ. ಹಾಗಾದರೇ ಜಿಯೋ ಮತ್ತು ವಿ ಟೆಲಿಕಾಂಗಳ ಈ ಎರಡು ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿ ಯಾವುದು ಉತ್ತಮ? ಪ್ರಯೋಜನಗಳೇನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ಜಿಯೋ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ಜಿಯೋ 599ರೂ. ಪ್ಲಾನ್ ಈ ಪ್ಲಾನಿನಲ್ಲಿ ಗ್ರಾಹಕರಿಗೆ 100 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇದಲ್ಲದೇ ಹೆಚ್ಚುವರಿಯಾಗಿ ಒಂದು ಹೆಚ್ಚುವರಿ ಸಿಮ್ಕಾರ್ಡ್ ಫ್ಯಾಮಿಲಿ ಪ್ಲಾನ್ನೊಂದಿಗೆ ಲಭ್ಯವಾಗಲಿದೆ. ಹಾಗೆಯೇ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯಗಳು ಲಭ್ಯವಾಗಲಿವೆ.

ವೊಡಾಫೋನ್-ಐಡಿಯಾ (Vi) ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ವೊಡಾಫೋನ್-ಐಡಿಯಾ (Vi) ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ವಿ ಟೆಲಿಕಾಂ ಪರಿಚಯಿಸಿರುವ 699ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಅನಿಯಮಿತ ಡೇಟಾ (ತಿಂಗಳಿಗೆ 150 GB) ಪ್ರಯೋಜನ ಪಡೆದಿದೆ. ಇದರೊಂದಿಗೆ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಪ್ರೈಮ್ ಮ್ಯೂಸಿಕ್, ವೂಟ್ ಸೆಲೆಕ್ಟ್, ಸನ್‌ಎನ್‌ಎಕ್ಸ್‌ಟಿ, ಮತ್ತು ವಿ ಮೂವೀಸ್ & ಟಿವಿ ಗಳಂತಹ ಓಟಿಟಿ ಪ್ರಯೋಜನಗಳು ಸಹ ಲಭ್ಯವಾಗಲಿವೆ.

ಯಾವುದು ಉತ್ತಮ?

ಯಾವುದು ಉತ್ತಮ?

ಜಿಯೋ 599ರೂ. ಪ್ಲಾನ್ ಹಾಗೂ ವೊಡಾಫೋನ್-ಐಡಿಯಾ 699ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳನ್ನು ಗಮನಿಸಿದಾಗ ಎರಡು ಉತ್ತಮ ಎನಿಸುತ್ತವೆ. ಆದರೆ ಜಿಯೋ ಟೆಲಿಕಾಂ 100 GB ಡೇಟಾ ನೀಡುತ್ತದೆ ಮತ್ತು ವಿ ಟೆಲಿಕಾಂ 150 GB ಡೇಟಾ ಒದಗಿಸುತ್ತದೆ. ಹೀಗಾಗಿ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ವಿ ಟೆಲಿಕಾಂ ಉತ್ತಮ ಎನಿಸಲಿದೆ. ಇನ್ನು ಹೆಚ್ಚಿನ ಡೇಟಾ ಅಗತ್ಯ ಇಲ್ಲ ಎನ್ನುವ ಗ್ರಾಹಕರಿಗೆ ಜಿಯೋ ಪ್ಲ್ಯಾನ್ ಬೆಸ್ಟ್‌ ಎನಿಸಲಿದೆ.

Best Mobiles in India

English summary
Vi Rs 699 VS Jio Rs 599, Which Postpaid Plan Should You Choose.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+