ದೈನಂದಿನ ಡೇಟಾ ಜೊತೆಗೆ ಉಚಿತ ಡೇಟಾ ಬೇಕಿದ್ರೆ, ಈ ಪ್ಲ್ಯಾನ್ ಗಮನಿಸಿ!
ದೇಶದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್, ಜಿಯೋ ಮತ್ತು ವಿ ಟೆಲಿಕಾಂಗಳು ಪೈಪೋಟಿಯಲ್ಲಿ ಸಾಗುತ್ತಿದ್ದು, ಕೆಲವು ಅತ್ಯುತ್ತಮ ಪ್ಲ್ಯಾನ್ ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿವೆ. ಅವುಗಳಲ್ಲಿ ಹೆಚ್ಚಿನ ಎಲ್ಲ ಪ್ಲ್ಯಾನ್‌ಗಳು ಅಧಿಕ ಡೇಟಾ, ಬಿಗ್ ವ್ಯಾಲಿಡಿಟಿ ಪ್ರಯೋಜನಗಳನ್ನು ಹೊಂದಿವೆ. ವಿ ಟೆಲಿಕಾಂ (Vi Telecom) ನ ಕೆಲವು ಪ್ರೀಪೇಯ್ಡ್ ಯೋಜನೆಗಳು ಬೋನಸ್ ಡೇಟಾ ಪ್ರಯೋಜನ ಪಡೆದಿದ್ದು, ಜಿಯೋ, ಏರ್‌ಟೆಲ್‌ಗೆ ನೇರ ಸೆಡ್ಡು ನೀಡುವಂತಿವೆ.

ಹೌದು, ವಿ ಟೆಲಿಕಾಂ ಭಿನ್ನ ಡೇಟಾ ಸೌಲಭ್ಯದ ಪ್ರೀಪೇಯ್ಡ್ ಯೋಜನೆಗಳ ಲಿಸ್ಟ್ ಹೊಂದಿದ್ದು, ಆ ಪೈಕಿ ವಿ 901ರೂ. ಯೋಜನೆಯು ಉಚಿತವಾಗಿ ಒಟ್ಟು 48GB ಪ್ರಯೋಜನ ಪಡೆದಿದೆ. ಇದರೊಂದಿಗೆ ವಾಯಿಸ್ ಕರೆಯ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನ, ಆಕರ್ಷಕ ವ್ಯಾಲಿಡಿಟಿ ಹಾಗೂ ದೈನಂದಿನ ಡೇಟಾ ಸಹ ದೊರೆಯುತ್ತದೆ. ಹಾಗಾದರೇ ವಿ 901ರೂ. ಪ್ಲ್ಯಾನ್ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 901ರೂ. ಪ್ರಿಪೇಯ್ಡ್ ಪ್ಲಾನ್
ವಿ ಟೆಲಿಕಾಂನ 901ರೂ. ಪ್ರಿಪೇಯ್ಡ್ ಪ್ಲಾನ್ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಅನಿಯಮಿತ ಕರೆ, ದಿನನಿತ್ಯ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ನೀಡಲಿದೆ. ಇನ್ನು ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಹೆಚ್ಚುವರಿಯಾಗಿ 48GB ಡೇಟಾ ಸೌಲಭ್ಯ ಪಡೆದಿದೆ. ಜೊತೆಗೆ ವಿ ಆಪ್ಸ್ ಹಾಗೂ ಡೇಟಾ ರೋಲ್ ಓವರ್ ಸೌಲಭ್ಯ ಸಿಗಲಿದೆ.

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ 75GB ಡೇಟಾ ಪ್ರಯೋಜನ ಸಿಗಲಿದೆ.

ವಿ ಟೆಲಿಕಾಂನ 2899ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ 75 GB ಡೇಟಾ ಪ್ರಯೋಜನ ಸಿಗಲಿದ್ದು, ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.

ವಿ ಟೆಲಿಕಾಂನ 1499ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ 50 GB ಡೇಟಾ ಪ್ರಯೋಜನ ಸಿಗಲಿದ್ದು, ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.


Click it and Unblock the Notifications








