Home
ಸುದ್ದಿಜಾಲ

ಡೇಟಾ ಖಾಲಿ ಆಯ್ತಾ?..ಹಾಗಿದ್ರೆ ಈ ಹೊಸ 181ರೂ. ಪ್ಲ್ಯಾನ್‌ ನಿಮಗೆ ಅನುಕೂಲಕರ!

ಭಾರತೀಯ ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (Vi) ಇದೀಗ ಸದ್ದಿಲ್ಲದೆ ನೂತನ ರೀಚಾರ್ಜ್‌ ಪ್ಲ್ಯಾನ್‌ ಅನ್ನು ತನ್ನ ಲಿಸ್ಟ್‌ಗೆ ಸೇರ್ಪಡೆ ಮಾಡಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿರುವ ವಿ ಟೆಲಿಕಾಂ ಈಗ ಹೊಸ ಪ್ಲ್ಯಾನ್‌ ಮೂಲಕ ಮತ್ತೆ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.

ಹೌದು, ವಿ ಟೆಲಿಕಾಂ ನೂತನವಾಗಿ ವಿ 181ರೂ. ಗಳ ಡೇಟಾ ವೋಚರ್‌ ಪ್ಲ್ಯಾನ್‌ಯೊಂದನ್ನು ಲಾಂಚ್ ಮಾಡಿದ್ದು, ಇದು 4G ಡೇಟಾ ರೀಚಾರ್ಜ್‌ ಪ್ಲ್ಯಾನ್ ಆಗಿದೆ. ಈ ನೂತನ ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಹೊಂದಿದ್ದು, ಪ್ರತಿದಿನ ಡೇಟಾ ಸೌಲಭ್ಯವನ್ನು ಪಡೆದಿದೆ. 4G ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಈ ಯೋಜನೆ ಸೂಕ್ತವಾಗಿದ್ದು, ಈ ಯೋಜನೆಯನ್ನು ಅಧಿಕೃತ ವಿ ಟೆಲಿಕಾಂ ಆಪ್‌ ಮೂಲಕ ರೀಚಾರ್ಜ್ ಮಾಡಬಹುದು. ಹಾಗಾದರೆ ವಿ ಟೆಲಿಕಾಂನ 181ರೂ. ಪ್ಲ್ಯಾನ್ ಪ್ರಯೋಜನಗಳೆನು ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡೇಟಾ ಖಾಲಿ ಆಯ್ತಾ?..ಹಾಗಿದ್ರೆ ಈ ಹೊಸ 181ರೂ. ಪ್ಲ್ಯಾನ್‌ ನಿಮಗೆ ಅನುಕೂಲಕರ!

ವಿ 181ರೂ. ಡೇಟಾ ವೋಚರ್‌ ಪ್ಲ್ಯಾನ್‌ : ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರು ಸಂಪೂರ್ಣ ವ್ಯಾಲಿಡಿಟಿ ಅವಧಿಗೆ 1GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ದೈನಂದಿನ 1GB ಡೇಟಾ ಖಾಲಿಯಾದರೆ, ಅದು ದಿನದ ಕೊನೆಯಲ್ಲಿ ಮರುಹೊಂದಿಸುತ್ತದೆ. ಈ ಯೋಜನೆಯು ನಿಮಗೆ 4G ಡೇಟಾ ಅನುಭವವನ್ನು ಮಾತ್ರ ನೀಡಲಿದೆ. ಇತರೆ ಜನಪ್ರಿಯ ವಿ ಟೆಲಿಕಾಂ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 601ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು : ವಿ ಟೆಲಿಕಾಂನ 601 ರೂ. ಪ್ರಿಪೇಯ್ಡ್‌ ಪ್ಲಾನ್‌ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಅನಿಯಮಿತ ಕರೆ, ದಿನನಿತ್ಯ 3 GB ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್‌ ಪ್ರಯೋಜನ ನೀಡಲಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಹೆಚ್ಚುವರಿಯಾಗಿ 16 GB ಡೇಟಾ ಸೌಲಭ್ಯ ಪಡೆದಿದೆ. ಜೊತೆಗೆ ವಿ ಆಪ್ಸ್‌ ಹಾಗೂ ಡೇಟಾ ರೋಲ್‌ ಓವರ್‌ ಸೌಲಭ್ಯ ಸಹ ಸಿಗಲಿದೆ.

ಡೇಟಾ ಖಾಲಿ ಆಯ್ತಾ?..ಹಾಗಿದ್ರೆ ಈ ಹೊಸ 181ರೂ. ಪ್ಲ್ಯಾನ್‌ ನಿಮಗೆ ಅನುಕೂಲಕರ!

ವಿ ಟೆಲಿಕಾಂನ 1499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು : ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇದರೊಂದಿಗೆ ಹೆಚ್ಚುವರಿ ಯಾಗಿ ಈ ಯೋಜನೆ ಯಲ್ಲಿ ಗ್ರಾಹಕರಿಗೆ 50 GB ಡೇಟಾ ಪ್ರಯೋಜನ ಸಿಗಲಿದ್ದು, ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.

ವಿ ಟೆಲಿಕಾಂನ 2899 ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು : ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಹೆಚ್ಚುವರಿ ಯಾಗಿ ಈ ಯೋಜನೆ ಯಲ್ಲಿ ಗ್ರಾಹಕರಿಗೆ 75 GB ಡೇಟಾ ಪ್ರಯೋಜನ ಸಿಗಲಿದ್ದು, ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.

Best Mobiles in India

English summary
Vi Telecom has silently added a new prepaid plan for customers. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+