ವಿ ಟೆಲಿಕಾಂನ ಈ 4 ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ ಜೊತೆಗೆ ಹಾಟ್‌ಸ್ಟಾರ್ ಫ್ರೀ!
ಭಾರತೀಯ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ಪ್ರೀಪೇಯ್ಡ್ ಯೋಜನೆಗಳ್ಲಲಿ ಅಧಿಕ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಸೌಲಭ್ಯ ನೀಡಿ ಚಂದಾದಾರರ ಗಮನ ಸೆಳೆಯುತ್ತ ಸಾಗಿವೆ. ಇದರೊಂದಿಗೆ ಆಯ್ದ ಕೆಲವು ಪ್ಲ್ಯಾನ್‌ಗಳಿಗೆ ಹೆಚ್ಚುವರಿಯಾಗಿ OTT ಸೇವಗಳ ಪ್ರಯೋಜನ ಘೋಷಿಸಿವೆ. ಈ ಪೈಕಿ ವೊಡಾಫೋನ್ (ವಿ) ಟೆಲಿಕಾಂ ತನ್ನ ನಾಲ್ಕು ಪ್ರೀಪೇಯ್ಡ್ ಯೋಜನೆಗಳಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಚಂದಾದಾರಿಕೆ ಘೋಷಿಸಿದೆ.

ಹೌದು, ವಿ ಟೆಲಿಕಾಂ ತನ್ನ ವಿ 401ರೂ, ವಿ 501ರೂ, ವಿ 601ರೂ ಮತ್ತು ವಿ 801ರೂ. ಪ್ರೀಪೇಯ್ಡ್ ಯೋಜನೆಗಳಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಚಂದಾದಾರಿಕೆ ತಿಳಿಸಿದೆ. ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ 399ರೂ. ಮೌಲ್ಯದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಚಂದಾದಾರಿಕೆ ಸಿಗಲಿದೆ. ಇದಲ್ಲದೇ ಈ ನಾಲ್ಕು ಪ್ರೀಪೇಯ್ಡ್ ಯೋಜನೆಗಳು ಡೇಟಾ, ಎಸ್‌ಎಮ್‌ಎಸ್ ಹಾಗೂ ವಾಯಿಸ್ ಕಾಲಿಂಗ್ ಸೇವೆಗಳನ್ನು ಒಳಗೊಂಡಿದೆ. ಹಾಗಾದರೇ ವಿ ಟೆಲಿಕಾಂನ ಈ ನಾಲ್ಕು ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂ 401ರೂ. ಪ್ರಯೋಜನಗಳು
ವಿ ಟೆಲಿಕಾಂನ 401ರೂ. ರೀಚಾರ್ಜ್ ಯೋಜನೆಯು ಆಕರ್ಷಕ ಸೌಲಭ್ಯಗಳನ್ನು ಪಡೆದಿದೆ. ಸದ್ಯ ಈ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಚಂದಾದಾರಿಕೆ ಸಹ ಸಿಗಲಿದೆ. ಇದಲ್ಲದೇ ಪ್ರತಿದಿನ 3GB ಡೇಟಾ ಜೊತೆಗೆ ಹೆಚ್ಚುವರಿಯಾಗಿ 16GB ಡೇಟಾ ಸಿಗಲಿದೆ. ಹಾಗೆಯೇ ದಿನಕ್ಕೆ 100 ಎಸ್‌ಎಂಎಸ್‌ಗಳು ಲಭ್ಯ ಇನ್ನು ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಲೈವ್ T20 ಮ್ಯಾಚ್, ಮಲ್ಟಿಫ್ಲೆಕ್ಸ್ ಸಿನಿಮಾ ವೀಕ್ಷಿಸಬಹುದಾಗಿದೆ.

ವಿ ಟೆಲಿಕಾಂ 501ರೂ. ಪ್ರಯೋಜನಗಳು
ವಿ ಟೆಲಿಕಾಂನ 501ರೂ. ರೀಚಾರ್ಜ್ ಯೋಜನೆಯು ಆಕರ್ಷಕ ಸೌಲಭ್ಯಗಳನ್ನು ಪಡೆದಿದೆ. ಈ ಯೋಜನೆಯಲ್ಲಿ 399ರೂ. ಮೌಲ್ಯದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಚಂದಾದಾರಿಕೆ ಸಹ ಸಿಗಲಿದೆ. ಇದಲ್ಲದೇ 75GB ಡೇಟಾ ಪ್ರಯೋಜನ ದೊರೆಯಲಿದೆ. ಇನ್ನು ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.

ವಿ ಟೆಲಿಕಾಂ 601ರೂ. ಪ್ರಯೋಜನಗಳು
ವಿ ಟೆಲಿಕಾಂನ 601ರೂ. ರೀಚಾರ್ಜ್ ಯೋಜನೆಯು ಆಕರ್ಷಕ ಸೌಲಭ್ಯಗಳನ್ನು ಪಡೆದಿದೆ. ಈ ಯೋಜನೆಯಲ್ಲಿ 399ರೂ. ಮೌಲ್ಯದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಚಂದಾದಾರಿಕೆ ಸಹ ಸಿಗಲಿದೆ. ಇದಲ್ಲದೇ ಪ್ರತಿದಿನ 3GB ಡೇಟಾ ಜೊತೆಗೆ ಹೆಚ್ಚುವರಿಯಾಗಿ 32GB ಡೇಟಾ ಸಿಗಲಿದೆ. ಹಾಗೆಯೇ ದಿನಕ್ಕೆ 100 ಎಸ್‌ಎಂಎಸ್‌ಗಳು ಲಭ್ಯ ಇನ್ನು ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.

ವಿ ಟೆಲಿಕಾಂ 801ರೂ. ಪ್ರಯೋಜನಗಳು
ವಿ ಟೆಲಿಕಾಂನ 801ರೂ. ರೀಚಾರ್ಜ್ ಯೋಜನೆಯು ಆಕರ್ಷಕ ಸೌಲಭ್ಯಗಳನ್ನು ಪಡೆದಿದೆ. ಈ ಯೋಜನೆಯಲ್ಲಿ 399ರೂ. ಮೌಲ್ಯದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಚಂದಾದಾರಿಕೆ ಸಹ ಸಿಗಲಿದೆ. ಇದಲ್ಲದೇ ಪ್ರತಿದಿನ 3GB ಡೇಟಾ ಜೊತೆಗೆ ಹೆಚ್ಚುವರಿಯಾಗಿ 48GB ಡೇಟಾ ಸಿಗಲಿದೆ. ಹಾಗೆಯೇ ದಿನಕ್ಕೆ 100 ಎಸ್‌ಎಂಎಸ್‌ಗಳು ಲಭ್ಯ ಇನ್ನು ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.


Click it and Unblock the Notifications