ವಿ ಟೆಲಿಕಾಂ ಬಳಕೆದಾರರಿಗೆ ಗುಡ್‌ನ್ಯೂಸ್!..ವೇಗದ ಇಂಟರ್ನೆಟ್ ಸಿಗುತ್ತೆ!
ಸದ್ಯದ ಡಿಜಿಟಲ್ ಜಗತ್ತಿನಲ್ಲಿ, ಕೆಲಸ ಅಥವಾ ಮನರಂಜನೆಗಾಗಿ ಮೊಬೈಲ್ ಇಂಟರ್ನೆಟ್ ದೈನಂದಿನ ಕಾರ್ಯಚಟುವಟಿಕೆಗೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಗ್ರಾಹಕರ ಈ ವಿಕಸಿತ ಅಗತ್ಯಗಳನ್ನು ಪೂರೈಸಲು, ಪ್ರಮುಖ ಟೆಲಿಕಾಂ ಬ್ರ್ಯಾಂಡ್ ಆದಂತಹ ವಿ ಟೆಲಿಕಾಂ ದಕ್ಷಿಣ ಕರ್ನಾಟಕದ ಗ್ರಾಹಕರಿಗೆ ತಡೆರಹಿತ ನೆಟ್‌ವರ್ಕ್ ಅನುಭವವನ್ನು ನೀಡಲು ತನ್ನ ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಿದೆ.
ಹೌದು, ವಿ ಟೆಲಿಕಾಂ ಕಳೆದ ಒಂದು ತಿಂಗಳಿನಲ್ಲಿ ದಕ್ಷಿಣ ಕರ್ನಾಟಕದ 1000+ ಸೈಟ್‌ಗಳಲ್ಲಿ LTE 2100 MHz ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಬ್ಯಾಂಡ್‌ವಿಡ್ತ್ ಅನ್ನು 5 MHz ನಿಂದ 10 MHz ಗೆ ಅಪ್‌ಡೇಟ್ ಮಾಡಿದೆ. ಇದರಿಂದಾಗಿ ವಿ ನೆಟ್‌ವರ್ಕ್ ಬಳಕೆದಾರರು ವೇಗದ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಅನುಭವಿಸಬಹುದು.

ಅಲ್ಲದೇ ಹೆಚ್ಚುವರಿಯಾಗಿ, ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ವಾಣಿಜ್ಯ ಮತ್ತು ವಸತಿ ಪ್ರದೇಶಗಳಾದ ಮೈಸೂರು, ಮಂಡ್ಯ, ಕೋಲಾರ ಮತ್ತು ತುಮಕೂರಿನಲ್ಲಿರುವ ವಿ ನೆಟ್‌ವರ್ಕ್ ಬಳಕೆದಾರರು ಹೆಚ್ಚು ಜನರಿರುವ ಮತ್ತು ದಟ್ಟಣೆಯ ಪ್ರದೇಶಗಳಲ್ಲೂ ಸಹ ಉತ್ತಮ ನೆಟ್‌ವರ್ಕ್ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಈ ಕುರಿತು ಮಾತನಾಡಿದ ವಿ ಟೆಲಿಕಾಂನ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಆನಂದ್ ದಾನಿ, 'ವಿಶ್ವ ದರ್ಜೆಯ ಡಿಜಿಟಲ್ ಅನುಭವಗಳನ್ನು ಒದಗಿಸುವುದು ಮತ್ತು ಪ್ರತಿಯೊಬ್ಬ ಭಾರತೀಯರ ಉತ್ತಮ ನಾಳೆಗಳ ನಿರ್ಮಾಣಕ್ಕೆ ಪ್ರೇರೇಪಿಸುವುದು ವಿ ಟೆಲಿಕಾಂ ನ ಪ್ರಮುಖ ಬದ್ಧತೆಯಾಗಿದೆ.

ಈ ಉದ್ದೇಶದೊಂದಿಗೆ ನಮ್ಮ ಬಳಕೆದಾರರ ಅಗತ್ಯಗಳನ್ನು ಒದಗಿಸುವುದು ಮಾತ್ರವಲ್ಲದೇ, ತಡೆರಹಿತ ನೆಟ್‌ವರ್ಕ್ ಅನುಭವವನ್ನು ನೀಡಲು ನಮ್ಮ ಸೇವೆಗಳನ್ನು ನಿರಂತರವಾಗಿ ಅಪ್‌ಗ್ರೇಡ್ ಮಾಡುವುದು ನಮ್ಮ ಪ್ರಯತ್ನವಾಗಿದೆ.
ದಕ್ಷಿಣ ಕರ್ನಾಟಕದ ಪ್ರಮುಖ ನಗರಗಳಾದ್ಯಂತ ಈ ನೆಟ್‌ವರ್ಕ್ ವರ್ಧನೆಯು ನಮ್ಮ ಬಳಕೆದಾರರಿಗೆ ಉನ್ನತ ಅನುಭವ ಮತ್ತು ಅವರು ಕೆಲಸ ಮಾಡುವಾಗ, ಅಧ್ಯಯನ ಮಾಡುವಾಗ, ಮನರಂಜನೆಗೆ, ಇ ಕಾಮರ್ಸ್ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಬಳಸುವಾಗ ಬಲವಾದ ನೆಟ್‌ವರ್ಕ್ ಸಂಪರ್ಕ ಒದಗಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ವಿ ಟೆಲಿಕಾಂನ ಕೆಲವು ಪ್ರಮುಖ ಪ್ಲ್ಯಾನ್ ಮಾಹಿತಿ
ವಿ 719ರೂ. ರೀಚಾರ್ಜ್ ಪ್ಲ್ಯಾನ್ - ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ದೈನಂದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಡೇಟಾ ಜೊತೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನ ಅಲ್ಲದೇ ನಿತ್ಯವು 100 ಎಸ್‌ಎಂಎಸ್ ಖಚಿತವಾಗಿ ಲಭ್ಯ. ಇದರ ಜೊತೆಗೆ ಉಚಿತವಾಗಿ 5GB ಡೇಟಾ ಸೌಲಭ್ಯ ಸಿಗಲಿದೆ. ಜೊತೆಗೆ ವಿಕೆಂಡ್ ಡೇಟಾ ರೋಲ್‌ಓವರ್ ಪ್ರಯೋಜನ ಕೂಡಾ ಸಿಗಲಿದೆ.
ವಿ 399ರೂ. ರೀಚಾರ್ಜ್ ಪ್ಲ್ಯಾನ್ - ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಪ್ರೀಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಸೌಲಭ್ಯ ದೊರೆಯುತ್ತದೆ. ಡೇಟಾ ಜೊತೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನ ಅಲ್ಲದೇ ನಿತ್ಯವು 100 ಎಸ್‌ಎಂಎಸ್ ಸಿಗುತ್ತದೆ. ಇಷ್ಟೇ ಅಲ್ಲದೇ ಉಚಿತವಾಗಿ 5GB ಡೇಟಾ ಸೌಲಭ್ಯ ಲಭ್ಯ ಇದ್ದು, 3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ದೊರೆಯುತ್ತದೆ.
ವಿ ಟೆಲಿಕಾಂನ 202ರೂ. ರೀಚಾರ್ಜ್ ಪ್ಲಾನ್ - ಈ ಯೋಜನೆಯಲ್ಲಿ ಡಿಸ್ನಿ+ ಹಾಟ್ ಸ್ಟಾರ್, ಶೆಮರೂ ಮಿ, ಯುಪ್ ಟಿವಿ, ಸೋನಿ ಲೈವ್, ಸನ್ ನೆಕ್ಸ್ಟ್, ಡಿಸ್ಕವರಿ+, ಹಂಗಾಮಾ ಸೇರಿದಂತೆ ಒಟ್ಟು 13 ಓಟಿಟಿಗಳ 30 ದಿನಗಳ ಚಂದಾದಾರಿಕೆಯ ಪ್ರಯೋಜನ ಒಳಗೊಂಡಿದೆ.


Click it and Unblock the Notifications








