Vi telecom: ಒಂದೇ ರೀಚಾರ್ಜ್ ಬರೋಬ್ಬರಿ ಮೂರು ಸೇವೆ, ಜೋರಾಯ್ತು ಜಿಯೋ, ಏರ್‌ಟೆಲ್ ಎದೆಬಡಿತ!
ಭಾರತದಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ ಏರ್‌ಟೆಲ್ ಹಾಗೂ ಜಿಯೋಗೆ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿರುವ ವೊಡಾಫೋನ್ ಐಡಿಯಾ (Vi telecom) ಇದೀಗ ಇತರೆ ಟೆಲಿಕಾಂ ಗಳು ಶಾಕ್‌ಗೆ ಒಳಗಾಗುವ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ. ಈ ಮೂಲಕ ಬಳಕೆದಾರರು ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೌದು, ಒಂದೇ ಪ್ಲ್ಯಾನ್‌ನಲ್ಲಿ ಬಳಕೆದಾರರು ಹಲವು ಪ್ರಮುಖ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ, ವಿ ಟೆಲಿಕಾಂನ ಈ ಒಂದು ಯೋಜನೆಯಲ್ಲಿ ಬ್ರಾಡ್‌ಬ್ಯಾಂಡ್, ಮೊಬೈಲ್ ಮತ್ತು ಓಟಿಟಿ ಸೇವೆ ಲಭ್ಯ ಆಗಲಿದೆ. ಹಾಗಿದ್ರೆ, ಈ ಪ್ಲ್ಯಾನ್‌ನ ದರ ಎಷ್ಟು?, ಇದರಿಂದ ಬಳಕೆದಾರರಿಗೆ ಆಗುವ ಪ್ರಯೋಜನಗಳು ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವೋಡಾಫೋನ್ ಐಡಿಯಾ ಇದೀಗ (VI) ಹೊಸ ವಿ ಒನ್ (VIOne) ಸೇವೆಯನ್ನು ಆರಂಭ ಮಾಡಿದ್ದು, ಇದು ಎಲ್ಲಾ ಸೇವೆಗಳನ್ನು ಒಂದೇ ಯೋಜನೆಯಲ್ಲಿ ಒಟ್ಟುಗೂಡಿಸುತ್ತದೆ. ಅಂದರೆ ವಿ ಒನ್ ಸೇವೆಗಳ ಗುಂಪನ್ನು ಬಂಡಲ್ ಮಾಡಲಿದ್ದು, ಬಳಕೆದಾರರಿಗೆ ಫೈಬರ್ ಬ್ರಾಡ್‌ಬ್ಯಾಂಡ್, ಮೊಬೈಲ್ ಟೆಲಿಕಾಂ ಮತ್ತು ಓಟಿಟಿ ಎಂಬ ಮೂರು ಸೇವೆಗಳನ್ನು ನೀಡಲಿದೆ. ಅದರಲ್ಲೂ ಈ ರೀತಿಯ ಪ್ಲ್ಯಾನ್ ಅನ್ನು ಇದೇ ಮೊದಲ ಬಾರಿಗೆ ವಿ ಟೆಲಿಕಾಂ ಘೋಷಣೆ ಮಾಡಿದೆ.
ವಿ ಟೆಲಿಕಾಂ ನ 2,912 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ 2,912 ರೂ.ಗಳ ಪ್ಲ್ಯಾನ್ 3,109ರೂ., 8,390ರೂ. ಹಾಗೂ 12,155ರೂ.ಗಳ ಪ್ಲ್ಯಾನ್ ಆಯ್ಕೆಗಳಿವೆ. ಅದರಲ್ಲಿ ಪ್ರಮುಖವಾಗಿ ಬೇಸಿಕ್ ಪ್ಲ್ಯಾನ್ ಅಂದರೆ 2,912ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ಧ್ವನಿ ಕರೆ, 2GB ದೈನಂದಿನ ಡೇಟಾ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದು. ಜೊತೆಗೆ ಪ್ರಿಪೇಯ್ಡ್ ಸಿಮ್ ಆಯ್ಕೆ ಇದರಲ್ಲಿದ್ದು, ಇದರೊಂದಿಗೆ ಬಿಂಗ್ ಆಲ್ ನೈಟ್ ಆಫರ್ ಕೂಡ ಲಭ್ಯ.
ಈ ಯೋಜನೆಯಲ್ಲಿ ನೀಡಲಾಗುವ ಫೈಬರ್ ಬ್ರಾಡ್‌ಬ್ಯಾಂಡ್‌ನಲ್ಲಿ 40 Mbps ವೇಗ ಮತ್ತು ಅನಿಯಮಿತ ಡೇಟಾ ಸಿಗಲಿದೆ. ಜೊತೆಗೆ ಓಟಿಟಿ ಪ್ರಯೋಜನ ಸಿಗಲಿದೆ. ಇದರಲ್ಲಿ 90 ದಿನಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್, 90 ದಿನಗಳ ಸೋನಿಲೈವ್ ಮೊಬೈಲ್, ವಿ ಚಲನಚಿತ್ರಗಳು ಮತ್ತು ಟಿವಿ VIP ಮತ್ತು 90 ದಿನಗಳ ಸೀ 5 ಚಂದಾದಾರಿಕೆ ಸೇರಿದ್ದು, ಈ ಎಲ್ಲಾ ಪ್ರಯೋಜನಗಳೊಂದಿಗೆ 93 ದಿನಗಳ ಮಾನ್ಯತೆ ಇದರಲ್ಲಿದೆ.
ವಿ ಟೆಲಿಕಾಂನ 3,109ರೂ. ಪ್ಲ್ಯಾನ್ ಈ ಪ್ಲ್ಯಾನ್‌ನಲ್ಲಿಯೂ ಸಹ ಬಳಕೆದಾರರು ಅನಿಯಮಿತ ಕರೆ, ನಿತ್ಯವೂ 2GB ಡೇಟಾ ಮತ್ತು ದಿನಕ್ಕೆ 100 ಎಸ್ಎಮ್‌ಎಸ್ ಆಯ್ಕೆಗಳನ್ನು ನೀಡಲಾಗಿದ್ದು, ಇದರೊಂದಿಗೆ ಪ್ರಿಪೇಯ್ಡ್ ಸಿಮ್ ಅನ್ನು ಸಹ ನೀಡಲಾಗುತ್ತದೆ. ಜೊತೆಗೆ ಬಿಂಗ್ ಆಲ್ ನೈಟ್ ಪ್ರಯೋಜನ ಸೇರಿದಂತೆ ಹಲವು ಮೊಬೈಲ್ ಸೇವೆ ಲಭ್ಯ. ಈ ಪ್ಲ್ಯಾನ್ 100 Mbps ವೇಗ ಮತ್ತು ಅನಿಯಮಿತ ಡೇಟಾದೊಂದಿಗೆ ಫೈಬರ್ ಸಂಪರ್ಕವನ್ನು ನೀಡುತ್ತದೆ.
ಇದರ ಓಟಿಟಿ ವಿಚಾರಕ್ಕೆ ಬರುವುದಾದರೆ 2,192ರೂ.ಗಳ ಪ್ಲ್ಯಾನ್‌ನಂತೆಯೇ ಬಳಕೆದಾರರು ಇದರಲ್ಲಿ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಅಂದರೆ 90 ದಿನಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್, 90 ದಿನಗಳ ಸೋನಿಲೈವ್ ಮೊಬೈಲ್, ವಿ ಚಲನಚಿತ್ರಗಳು ಮತ್ತು ಟಿವಿ VIP ಸೇರಿದಂತೆ 90 ದಿನಗಳ ಸೀ 5 ಚಂದಾದಾರಿಕೆ ಲಭ್ಯ ಇರಲಿದೆ. ಈ ಯೋಜನೆಯು 93 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. ಇದರಲ್ಲಿನ ಭಿನ್ನತೆ ಏನೆಂದರೆ 100 Mbps ವೇಗ.

ವಿ ಟೆಲಿಕಾಂನ 8,390ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 2GB ದೈನಂದಿನ ಡೇಟಾ, ನಿತ್ಯವೂ 100 ಎಸ್‌ಎಮ್‌ಎಸ್ ಮತ್ತು ಅನಿಯಮಿತ ವಾಯಿಸ್ ಕರೆ ಸೌಲಭ್ಯದೊಂದಿಗೆ ಅನಿಯಮಿತ ಡೇಟಾದೊಂದಿಗೆ 40 Mbps ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡುತ್ತದೆ. ಇದರೊಂದಿಗೆ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್, ಮೊಬೈಲ್ ಚಂದಾದಾರಿಕೆ, ಒಂದು ವರ್ಷಕ್ಕೆ ಸೋನಿಲಿವ್ ಮೊಬೈಲ್ ಚಂದಾದಾರಿಕೆ, ಒಂದು ವರ್ಷಕ್ಕೆ ವಿ ಚಲನಚಿತ್ರಗಳು ಮತ್ತು ವಿ VIP ಚಂದಾದಾರಿಕೆ ಸಿಗಲಿದೆ. ಇದು 368 ದಿನಗಳ ಮಾನ್ಯತೆ ಹೊಂದಿದೆ.
ವಿ ಟೆಲಿಕಾಂನ 12,155ರೂ.ಗಳ ಪ್ಲ್ಯಾನ್: ನಾಲ್ಕನೇ ಹಾಗೂ ದೊಡ್ಡ ಮೊತ್ತದ ಪ್ಲ್ಯಾನ್ ಇದಾಗಿದ್ದು, ಇದರಲ್ಲಿ ಬಳಕೆದಾರರು ಅನಿಯಮಿತ ವಾಯಿಸ್ ಕಾಲ್, 2GB ದೈನಂದಿನ ಡೇಟಾ, ದಿನಕ್ಕೆ 100 ಎಸ್‌ಎಮ್‌ಎಸ್ ಮತ್ತು ಬಿಂಗ್ ಆಲ್ ನೈಟ್ ಪ್ರಯೋಜನಗಳನ್ನು ನೀಡುವ ವಿ ಸಿಮ್‌ನೊಂದಿಗೆ ಈ ಪ್ಲ್ಯಾನ್ ಬರಲಿದ್ದು, ಬ್ರಾಡ್‌ಬ್ಯಾಂಡ್ 100 Mbps ವೇಗದಲ್ಲಿ ಅನಿಯಮಿತ ಡೇಟಾ ಸಿಗಲಿದೆ.
ಈ ಪ್ಲ್ಯಾನ್ ಓಟಿಟಿ ಪ್ರಯೋಜನಗಳ ಕಡೆ ಗಮನಹರಿಸುವುದಾದರೆ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ, ಒಂದು ವರ್ಷಕ್ಕೆ ಸೋನಿ ಲಿವ್ ಮೊಬೈಲ್ ಚಂದಾದಾರಿಕೆ, ಒಂದು ವರ್ಷಕ್ಕೆ ವಿ ಚಲನಚಿತ್ರಗಳು ಮತ್ತು ಟಿವಿ VIP ಚಂದಾದಾರಿಕೆ, ಒಂದು ವರ್ಷಕ್ಕೆ ಸೀ 5 ಚಂದಾದಾರಿಕೆ ಸೇರಿದಂತೆ ಬಿಂಗ್ ಆಲ್ ನೈಟ್ ಚಂದಾದಾರಿಕೆಯೂ ಲಭ್ಯವಿದೆ. ಇದರ ಮಾನ್ಯತೆ 368 ದಿನ.


Click it and Unblock the Notifications