Home
ಸುದ್ದಿಜಾಲ

Vi: ವಿ ಟೆಲಿಕಾಂನಿಂದ ವಾರ್ಷಿಕ ಪ್ರಿಪೇಯ್ಡ್ ಪ್ಲ್ಯಾನ್ ಲಾಂಚ್‌! ಉಚಿತ ಅಮೆಜಾನ್‌ ಪ್ರೈಮ್ ಚಂದಾದಾರಿಕೆ

ವಿ ಟೆಲಿಕಾಂ (Vi Telecom) ಈಗಾಗಲೇ ಅಗ್ಗದ ದರದ ಸಾಕಷ್ಟು ಪ್ಲ್ಯಾನ್‌ಗಳನ್ನು ನೀಡಿದೆ. ಇದು ಏರ್‌ಟೆಲ್‌ ಹಾಗೂ ಜಿಯೋಗೆ (Airtel, Jio) ಪೈಪೋಟಿ ನೀಡುವಲ್ಲಿ ಮುಂದಾಗಿದ್ದು, ಕೆಲವು ದಿನಗಳ ಹಿಂದೆ ಈ ಎರಡೂ ಅಗ್ರಗಣ್ಯ ಟೆಲಿಕಾಂಗಳು ಓಟಿಟಿ ಆಧಾರಿತ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಬಹಳ ಸದ್ದು ಮಾಡಿದ್ದವು. ಅದರಂತೆ ಈಗ ವಿ ವಾರ್ಷಿಕ ಚಂದಾದಾರಿಕೆಯನ್ನು ಪರಿಚಯಿಸಿದೆ.

ಹೌದು, ಪ್ರಮುಖ ಭಾರತೀಯ ಟೆಲಿಕಾಂ ಕಂಪನಿಯಾದ ವೋಡಾಫೋನ್‌ ಐಡಿಯಾ (Vodafone Idea) ಪ್ರಿಪೇಯ್ಡ್ ಗ್ರಾಹಕರಿಗೆ ವಿಶೇಷ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಪ್ಲ್ಯಾನ್‌ನಲ್ಲಿ ಅಮೆಜಾನ್‌ ಪ್ರೈಮ್ ಚಂದಾದಾರಿಕೆಯನ್ನು (Amazon Prime Subscription) ಉಚಿತವಾಗಿ ಪಡೆಯಬಹುದಾಗಿದೆ. ಹಾಗಿದ್ರೆ, ಈ ಪ್ಲ್ಯಾನ್ ಬೆಲೆ ಎಷ್ಟು?, ಏನೆಲ್ಲಾ ಇತರೆ ಪ್ರಯೋಜನಗಳು ಇದರಲ್ಲಿ ಲಭ್ಯ ಇವೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿ ಟೆಲಿಕಾಂನಿಂದ ವಾರ್ಷಿಕ ಪ್ರಿಪೇಯ್ಡ್ ಪ್ಲ್ಯಾನ್  ಲಾಂಚ್‌! ...

ವಿ ಟೆಲಿಕಾಂನಿಂದ ಹೊಸ ಪ್ಲ್ಯಾನ್: ಭಾರತದ ಪ್ರಮುಖ ದೂರಸಂಪರ್ಕ ಕಂಪನಿಗಳಲ್ಲಿ ಒಂದಾದ ವಿ ಟೆಲಿಕಾಂ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಅನುಗುಣವಾಗಿ ವಿಶೇಷ ವಾರ್ಷಿಕ ರೀಚಾರ್ಜ್ ಪ್ಲ್ಯಾನ್‌ ಅನ್ನು ಲಾಂಚ್‌ ಮಾಡಿದೆ. ಪ್ರಾರಂಭಿಸಿದೆ. ಇದರ ಬೆಲೆ 3199 ರೂ.ಗಳಾಗಿದ್ದು, ಬಳಕೆದಾರರಿಗೆ ಪೂರ್ಣ ವರ್ಷದ ಪ್ರಯೋಜನಗಳನ್ನು ನೀಡುತ್ತದೆ. ಅಂದರೆ 2GB ಡೇಟಾ, ಅನಿಯಮಿತ ಕರೆಗಳು ಮತ್ತು 100 SMS ನ ದೈನಂದಿನ ಪ್ರಯೋಜನ ನೀಡುವ ಮೂಲಕ ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಸಹಕಾರಿ.

ಈ ವಿಶೇಷ ಪ್ಲ್ಯಾನ್‌ಗೆ ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಮೊಬೈಲ್‌ ಅಮೆಜಾನ್ ಪ್ರೈಮ್‌ ವಿಡಿಯೋಗೆ ಒಂದು ವರ್ಷದ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ. ಅಂದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಇದನ್ನು ನೀಡಲಾಗುತ್ತಿದೆ. ಈ ಮೂಲಕ ವ್ಯಾಪಕ ಶ್ರೇಣಿಯ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ವಿಶೇಷ ಕಂಟೆಂಟ್‌ ಅನ್ನು ವೀಕ್ಷಣೆ ಮಾಡಬಹುದಾಗಿದೆ.

ವಿ ಟೆಲಿಕಾಂನಿಂದ ವಾರ್ಷಿಕ ಪ್ರಿಪೇಯ್ಡ್ ಪ್ಲ್ಯಾನ್  ಲಾಂಚ್‌! ...

ಇನ್ನು ವಿ ಟೆಲಿಕಾಂ ನ ಈ ಪ್ಲ್ಯಾನ್‌ ತನ್ನ ಬಳಕೆದಾರರಿಗೆ ವರ್ಧಿತ ಮೌಲ್ಯ ಮತ್ತು ಅನುಕೂಲತೆಯನ್ನು ತಲುಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕರೆ, ಮೆಸೆಜ್‌ ಮತ್ತು ಡೇಟಾದಂತಹ ಮೂಲಭೂತ ಸೌಲಭ್ಯದೊಂದಿಗೆ ವಿ ಹೆಚ್ಚುವರಿ ಪರ್ಕ್‌ಗಳನ್ನು ಸೇರಿಸಿದೆ. ಅಷ್ಟೇ ಅಲ್ಲದೆ ನಿಯಮಿತ ಡೇಟಾ ಭತ್ಯೆಗೆ ಧಕ್ಕೆಯಾಗದಂತೆ ಮಧ್ಯರಾತ್ರಿಯಿಂದ 6 AM ನಡುವೆ ಮನರಂಜನೆಯ ಉದ್ದೇಶಗಳಿಗಾಗಿ ಡೇಟಾವನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ ವಾರಾಂತ್ಯದ ಡೇಟಾ ರೋಲ್‌ಓವರ್ ಆಯ್ಕೆ ಸಹ ಇದೆ.

ವಿ ಟೆಲಿಕಾಂನಲ್ಲಿ 3199 ರೂ.ಗಳ ಪ್ಲ್ಯಾನ್‌ನೊಂದಿಗೆ ಇತರೆ ಪ್ಲ್ಯಾನ್‌ಗಳನ್ನೂ ಸಹ ಹೊಂದಿದೆ. ಅದರಲ್ಲಿ ಮೊಬೈಲ್‌ಗಾಗಿ ಡಿಸ್ನಿ+ ಹಾಟ್‌ಸ್ಟಾರ್‌ ಆಯ್ಕೆ ಇರುವ 365 ದಿನದ ಚಂದಾದಾರಿಕೆಯ 3099 ರೂ.ಗಳ ಪ್ಲ್ಯಾನ್‌ ಅನ್ನೂ ಸಹ ಕಾಣಬಹುದಾಗಿದೆ. ಜೊತೆಗೆ 90 ದಿನಗಳ ಸೋನಿ ಲಿವ್‌ ಪ್ರೀಮಿಯಂ ಮೊಬೈಲ್ ಚಂದಾದಾರಿಕೆ ಪ್ಲ್ಯಾನ್‌ ಆದ 903 ರೂ.ಗಳ ಕಡೆಯೂ ನೀವು ಕಣ್ಣಾಯಿಸಬಹುದು.

ಇದರೊಂದಿಗೆ 90 ದಿನಗಳ ಸನ್‌ NXT (ಟಿವಿ + ಮೊಬೈಲ್) ಚಂದಾದಾರಿಕೆ 902 ರೂ.ಗಳಿದ್ದು, ಮೊಬೈಲ್‌ಗಾಗಿ ಡಿಸ್ನಿ+ ಹಾಟ್‌ಸ್ಟಾರ್‌ 70 ದಿನದ ಚಂದಾದಾರಿಕೆಯ 901 ರೂ.ಗಳ ಪ್ಲ್ಯಾನ್‌ ಗೂ ಸಹ ಬಹಳ ಬೇಡಿಕೆ ಇದೆ. ಈ ಮೂಲಕ ವಿ ಟೆಲಿಕಾಂ ಹೊಸ ಹೊಸ ಗ್ರಾಹಕರನ್ನು ಪಡೆಯುವ ಕೆಲಸ ಮಾಡುತ್ತಿದೆ.ಅದರಲ್ಲೂ ಯುವ ಪೀಳಿಗೆಯನ್ನು ಟಾರ್ಗೆಟ್‌ ಮಾಡಿರುವ ವಿ ಹೊಸ ಹೊಸ ಓಟಿಟಿಯ ಪ್ರಯೋಜನ ಕಲ್ಪಿಸಿಕೊಡುತ್ತಿದೆ.

ವಿ ಟೆಲಿಕಾಂನಿಂದ ವಾರ್ಷಿಕ ಪ್ರಿಪೇಯ್ಡ್ ಪ್ಲ್ಯಾನ್  ಲಾಂಚ್‌! ...

ಇನ್ನು ವಿ ಟೆಲಿಕಾಂನ ಈ ಅದ್ಭುತ ಕೊಡುಗೆಯು ಕೈಗೆಟುಕುವ ಬೆಲೆ ಮತ್ತು ಮನರಂಜನೆಯ ದೃಢವಾದ ಸಂಯೋಜನೆಯನ್ನು ನೀಡುವ ಮೂಲಕ ಟೆಲಿಕಾಂ ಉದ್ಯಮದಲ್ಲಿನ ಮಾನದಂಡಗಳನ್ನು ಮರು ವ್ಯಾಖ್ಯಾನಿಸುವ ಕೆಲಸ ಮಾಡಿದೆ. ಇದು ಬಳಕೆದಾರರಿಗೆ ತಡೆರಹಿತ ಸಂಪರ್ಕವನ್ನು ಪಡೆಯಲು ಮತ್ತು ವೈವಿಧ್ಯಮಯ ಮನರಂಜನಾ ಕಂಟೆಂಟ್‌ಗೆ ಪ್ರವೇಶವನ್ನು ನೀಡಲು ಹೊಸ ಮಾನದಂಡವನ್ನು ಪರಿಚಯಿಸಿದೆ.

Best Mobiles in India

English summary
Vi Telecom has launched an annual plan of Rs.3199. With this one can avail 2GB data, unlimited calls and 100 SMS per day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+